ಕನ್ನಡಿಗರ ಪ್ರಜಾನುಡಿ
ಚಿಕ್ಕಮಗಳೂರುಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಕರಕುಚ್ಚಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲಾ ಉತ್ತಮ ಶಾಲೆ ಪ್ರಶಸ್ತಿ.

ಚಿಕ್ಕಮಗಳೂರು: 2023ರ ಆಗಸ್ಟ್ 15ರ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಯು ಕರಕುಚ್ಚಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ವಿಶೇಷವಾದ ಅವಿಸ್ಮರಣೀಯ ದಿನವಾಗಿ ಸಂಭ್ರಮ ತಂದುಕೊಟ್ಟಿದೆ.ಈ ಬಾರಿಯ ಸ್ವಾತಂತ್ರದ ಉತ್ಸವದಲ್ಲಿ ಗ್ರಾಮದ ಶಾಲೆಗೆ ಜಿಲ್ಲಾಡಳಿತ ನೀಡುವ ಜಿಲ್ಲಾ ಉತ್ತಮ ಶಾಲೆಪ್ರಶಸ್ತಿಗೆ ಭಾಜನವಾಗಿದೆ.

ಚಿಕ್ಕಮಗಳೂರಿನಲ್ಲಿ ನಡೆದ ಜಿಲ್ಲಾ ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭದಲ್ಲಿ ಶಾಲೆಯ ಪರವಾಗಿ ಈ ಹಿಂದಿನ ಪ್ರಭಾರಿ ಮುಖ್ಯಶಿಕ್ಷಕಿಯಾಗಿದ್ದ ಶ್ರೀಮತಿ ಗೀತಮ್ಮ ಎಮ್. ಹಾಗೂ ಕರಕುಚ್ಚಿ ವಲಯದ ಸಮೂಹ ಸಂಪನ್ಮೂಲ ವ್ಯಕ್ತಿ ಯಾದ ಶ್ರೀಮತಿ ಕುಮುದಾ ಕೆ. ಬಿ . ಇವರು ಶಾಲೆಯ ಸಮಸ್ತ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರ ಪರವಾಗಿ ಜಿಲ್ಲಾ ಉತ್ತಮ ಶಾಲೆ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.ಸದರಿಯವರಿಗೆ ಜಿಲ್ಲಾದಿಕಾರಿಗಳಾದ ಶ್ರೀಮತಿ ಮೀನಾನಾಗರಾಜ್,ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಡಾ . ಗೋಪಾಲಕೃಷ್ಣ . ಬಿ. ಅವರು ಜಿಲ್ಲಾ ಉಸ್ತುವಾರಿ ಮಂತ್ರಿ ಗಳಾದ ಕೆ. ಜೆ. ಜಾರ್ಜ್ ರವರ ಸಮ್ಮುಖದಲ್ಲಿ ಪ್ರಶಸ್ತಿ ಪ್ರಧಾನ ಮಾಡಿ ಪ್ರೋತ್ಸಾಹಿಸಿದರು.ವಿಧಾನ ಪರಿಷತ್ ಸದಸ್ಯರಾದ ಪ್ರಾಣೇಶ್, ಚಿಕ್ಕಮಗಳೂರಿನ ಶಾಸಕರಾದ ಹೆಚ್. ಡಿ. ತಮ್ಮಯ್ಯನವರು,ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ರಂಗನಾಥಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಕಳೆದ ನಾಲ್ಕೈದು ವರ್ಷಗಳ ಹಿಂದಷ್ಟೇ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ವಿಶೇಷವಾದ ಬೆಳವಣಿಗೆಯಾಗಿ ಇಂದು ಶಾಲೆ ಪ್ರಶಸ್ತಿಯನ್ನು ಪಡೆಯುವುದಕ್ಕೆ ಪ್ರಗತಿಯತ್ತ ಸಾಗಿದ್ದು ನಿಜಕ್ಕೂ ರೋಚಕವಾದ ವಿಚಾರ. 2019-20ರ ಸಾಲಿನಲ್ಲಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಾ ಹೋಗಿತ್ತು.ಆಗ ಗ್ರಾಮದ ಹಿರಿಯ ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು ಸಂಘಟಿತರಾಗಿ ಸರ್ಕಾರಿ ಶಾಲೆಯ ಉಳಿಸುವ ಸಂಕಲ್ಪ ತೊಟ್ಟರು.ಅದರ ಫಲವಾಗಿ ಅದೇ ವರ್ಷ ನಮ್ಮ ಶಾಲೆ ನಮ್ಮ ನೆನಪು ಟ್ರಸ್ಟ್ ಸ್ಥಾಪನೆಯಾಯಿತು. ಅದಾದ ಮೇಲೆ ಸರ್ಕಾರದ ಅನುದಾನಗಳು ಹಾಗೂ ದಾನಿಗಳಿಂದ ಆರ್ಥಿಕ ಸಹಕಾರ ಪಡೆಯುತ್ತಾ ಶಾಲೆಗೆ ಬೇಕಾದ ಸಂಪನ್ಮೂಲಗಳನ್ನು ಪೂರೈಕೆ ಮಾಡುತ್ತಾ ಶಾಲೆಯ ಅಂತರಂಗ ಬಹಿರಂಗ ಪ್ರಗತಿಗಾಗಿ ನಮ್ಮ ಶಾಲೆ ನಮ್ಮ ನೆನಪು ಟ್ರಸ್ಟ್ ನ ಮುಖಾಂತರ ಶಿಕ್ಷಣ ಪ್ರೇಮಿಗಳು ಶ್ರಮಿಸುತ್ತಾ ಬಂದರು. ಶಾಲಾ ಕೊಠಡಿ,ವಿದ್ಯುತ್ ಸೌಲಭ್ಯ,ಆಟದ ಮೈದಾನ,ವಿದ್ಯಾರ್ಥಿನಿಯರಿಗೆ ಹೈಟೆಕ್ ಶೌಚಾಲಯ,ನರ್ಸರಿ ಶಾಲೆ, ಖಾಸಗಿ ಶಿಕ್ಷಕರ ನೇಮಕ,ಸಮವಸ್ತ್ರ ಪೂರೈಕೆ,ಹಾಗೂ ಅನೇಕ ಸಂಪನ್ಮೂಲ ವ್ಯಕ್ತಿಗಳ ಭಾಗವಹಿಸುವಿಕೆ, ವಿಶೇಷವಾದ ಸೌಲಭ್ಯಗಳ ಪೂರೈಕೆ ಇದೆಲ್ಲವೂ ಕೂಡ ಕಳೆದ ಮೂರ್ನಾಲ್ಕು ವರ್ಷಗಳಿಂದ ನಿರಂತರವಾಗಿ ನಮ್ಮ ಶಾಲೆ ನಮ್ಮ ನೆನಪು ಟ್ರಸ್ಟ್ ವತಿಯಿಂದ ಪೂರೈಕೆಯಾಗುತ್ತಾ ಬಂತು.
ಇದರ ಜೊತೆಗೆ ಇಲಾಖೆಯ ಅಧಿಕಾರಿಗಳು , ಗ್ರಾಮ ಪಂಚಾಯಿತಿ, ಮುಖ್ಯಶಿಕ್ಷಕರು, ಶಿಕ್ಷಕ ಬಾಂಧವರು,ಎಸ್ . ಡಿ. ಎಮ್. ಸಿ, ಗ್ರಾಮದ ಹಲವಾರು ಯುವಕ ಯುವತಿಯರು ಶಾಲೆಯ ಅಭಿವೃದ್ಧಿಗಾಗಿ ಸಾಕಷ್ಟು ಪ್ರೋತ್ಸಾಹ ಕೊಟ್ಟರು. ಹಾಗಾಗಿ ಇಂದು ದಾಖಲೆಯ ಮಟ್ಟದಲ್ಲಿ ವಿದ್ಯಾರ್ಥಿಗಳು ದಾಖಲಾಗುವುದರ ಜೊತೆಗೆ ಸುತ್ತಮುತ್ತಲ ಹಳ್ಳಿಯ ಮಕ್ಕಳನ್ನು ಸೆಳೆಯುತ್ತಿದೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ. ಇರುವ ಸಂಪನ್ಮೂಲದಲ್ಲಿಯೇ ಯಾವುದೇ ಖಾಸಗಿ ಶಾಲೆಗೂ ಕೂಡ ಕಡಿಮೆ ಇರದಂತೆ ಶಾಲಾಡಳಿತ ನಿರ್ವಹಣೆಯಾಗುತ್ತಿರುವುದು ಇಲ್ಲಿನ ವಿಶೇಷತೆ ಮತ್ತು ಪ್ರತಿಯೊಬ್ಬ ಶಿಕ್ಷಕರೂ ಕೂಡ ಪ್ರತಿಭಾನ್ವಿತರಾಗಿದ್ದು ಮಕ್ಕಳ ಅಭ್ಯಾಸದ ಆಸಕ್ತಿಗೆ ಸ್ಪಂದಿಸುತ್ತಾ ಶ್ರಮಿಸುತ್ತಿದ್ದಾರೆ.ಹೀಗಾಗಿ ಶಾಲೆ ವಿದ್ಯಾರ್ಥಿಗಳ ಶಿಕ್ಷಣಮಟ್ಟದಲ್ಲಿ , ಆಂತರಿಕವಾಗಿ,ಬಹಿರಂಗವಾಗಿ ಸಾಕಷ್ಟು ಪ್ರಗತಿಯನ್ನು ಸಾಧಿಸಿದೆ.

ಶಾಲೆಗೆ ಜಿಲ್ಲಾ ಉತ್ತಮ ಶಾಲೆ ಪ್ರಶಸ್ತಿ ಬರಲು ಕಾರಣಕರ್ತರಾದ ನಮ್ಮ ಶಾಲೆ ನಮ್ಮ ನೆನಪು ಟ್ರಸ್ಟ್, ಎಸ್. ಡಿ . ಎಮ್ . ಸಿ, ಶಿಕ್ಷಕ ಸಹೋದ್ಯೋಗಿಗಳಿಗೆ , ಇಲಾಖೆ, ಜಿಲ್ಲಾಡಳಿತಕ್ಕೆಅಭಿನಂದನೆಗಳು.
* ದೇವೇಂದ್ರನಾಯ್ಕ ಮುಖ್ಯಶಿಕ್ಷಕರು*

ನಮ್ಮ ಶಾಲೆಗೆ ಜಿಲ್ಲಾಡಳಿತ ಉತ್ತಮ ಶಾಲೆ ಪ್ರಶಸ್ತಿ ನೀಡಿರುವುದು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ. ಶಾಲೆಗೆ ಕಳೆದ ವರ್ಷ ಸ್ವಚ್ಚ ವಿದ್ಯಾಲಯ ಪುರಸ್ಕಾರ ಲಭಿಸಿತ್ತು. ಶಾಲೆಯ ಅಭಿವೃದ್ಧಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು.
* ಎನ್ . ವಿ . ಅರುಣ್ ಕುಮಾರ್*
ಅಧ್ಯಕ್ಷರು . ನಮ್ಮ ಶಾಲೆ ನಮ್ಮ ನೆನಪು ಟ್ರಸ್ಟ್. ಕರಕುಚ್ಚಿ

Related posts

ಟ್ಯಾಂಕರ್ ಗೆ ಮದುವೆ ಮುಗಿಸಿ ಬರುತ್ತಿದ್ದ ಕಾರು ಡಿಕ್ಕಿ: ಐವರು ಸಾವು .

 ಮೈತ್ರಿ ಮಾತುಕತೆ ಬಹಳ ಅವಶ್ಯಕ: ಸ್ಥಾನಗಳ ಹಂಚಿಕೆ ಬಗ್ಗೆ ಮುಂದೆ ತೀರ್ಮಾನ- ಮಾಜಿ ಸಿಎಂ ಬೊಮ್ಮಾಯಿ ಅಭಿಮತ.

ಹಿರಿಯ ಪತ್ರಕರ್ತ ಎನ್. ಶ್ರೀರಾಮ್(79) ನಿಧನ.