ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಬಂಗಾರಪ್ಪ ಅವರ ಹುಟ್ಟಿದ ಹಬ್ಬದ ಅಂಗವಾಗಿ ಮಿನಿ ಹೋಂ ಥಿಯೇಟರ್,ಪಾದರಕ್ಷೆ ವಿತರಣೆ.

ಶಿವಮೊಗ್ಗ: ತ್ಯಾವರೆಕೊಪ್ಪದಲ್ಲಿರುವ ಭಿಕ್ಷುಕರ ಪುನರ್ವಸತಿ ಕೇಂದ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ತಮ್ಮ ತಂದೆ ಬಂಗಾರಪ್ಪನವರ ಹುಟ್ಟಿದ ಹಬ್ಬದ ಅಂಗವಾಗಿ ಮಿನಿ ಹೋಂ ಥಿಯೇಟರ್ ನಿರಾಶ್ರಿತರಿಗೆ ಪಾದರಕ್ಷೆಯನ್ನು ನೀಡಲಾಯಿತು.
ಮಧು ಬಂಗಾರಪ್ಪನವರು ಅಕ್ಟೋಬರ್ 26ರಂದು ತಮ್ಮ ತಂದೆ ಬಂಗಾರಪ್ಪನವರ ಜನ್ಮದಿನಾಚರಣೆಯನ್ನು ಭಿಕ್ಷುಕರ ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿ ಕೇಕ್ ಕತ್ತರಿಸಿ, ಬೆಡ್‍ಶೀಟ್ ವಿತರಿಸಿ ಮೇಲ್ಕಂಡ ವಸ್ತುಗಳನ್ನು ನೀಡುವುದಾಗಿ ಭರವಸೆ ನೀಡಿದ್ದರು.
ಅದರಂತೆ ನಿನ್ನೆ ಸಂಜೆ ಎಸ್. ಬಂಗಾರಪ್ಪ ಫೌಂಡೇಷನ್ ಹಾಗೂ ಎಸ್. ಬಂಗಾರಪ್ಪ ಅಭಿಮಾನಿ ಬಳಗದ ಪರವಾಗಿ ಸದಸ್ಯರು ಹಾಗೂ ಎನ್‍ಎಸ್‍ಯುಐ ಕಾರ್ಯಕರ್ತರು ಕೇಂದ್ರಕ್ಕೆ ಭೇಟಿ ನೀಡಿ ಮಧುಬಂಗಾರಪ್ಪನವರು ನೀಡಿದ 65 ಇಂಚಿನ ಮಿನಿ ಹೋಂ ಥಿಯೇಟರ್ ಹಾಗೂ ಎಲ್ಲಾ 230 ನಿರಾಶ್ರಿತರಿಗೂ ಪಾದರಕ್ಷೆಗಳನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಜಿ.ಡಿ. ಮಂಜುನಾಥ್, ಮುಕ್ತಿಯಾರ್ ಅಹ್ಮದ್, ಮಹಿಬುಲ್ಲಾ ಖಾನ್, ಜಿತೇಂದ್ರ ಗೌಡ, ಮಧುಸೂದನ್, ವಿಜಯಕುಮಾರ್, ಎಂ.ಬಿ. ರವಿಕುಮಾರ್, ಜ್ಯೋತಿ ಅರಳಪ್ಪ, ಟಿ. ಮಂಜಪ್ಪ, ಜಿ. ರವಿ ಮುಂತಾದವರು ಇದ್ದರು.

Related posts

ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ ಅವರ ನೇತೃತ್ವದಲ್ಲಿ ನಾಳೆ ನಗರದ ಕುವೆಂಪು ರಂಗಮಂದಿರದಲ್ಲಿ ಜನತಾದರ್ಶನ….

ಗೂಗಲ್ ಮತ್ತು ಫೇಸ್ಬುಕ್ ಗೆ ಪತ್ರ ಬರೆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ.

ನನಗೆ ಮೂರನೇ ಜನ್ಮ ಸಿಕ್ಕಿದೆ:ಆಸ್ಪತ್ರೆಯಿಂದ ಮಾಜಿ ಸಿಎಂ ಹೆಚ್.ಡಿ.ಕೆ ಡಿಸ್ಚಾರ್ಜ್.