ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಅಂಗವಿಕಲತೆ ಶಾಪವಲ್ಲ- ಡಾ. ಧನಂಜಯ ಸರ್ಜಿ

ಶಿವಮೊಗ್ಗ: ಅಂಗವಿಕಲತೆ ಶಾಪವಲ್ಲ ಎಂದು ಡಾ. ಧನಂಜಯ ಸರ್ಜಿ ಹೇಳಿದ್ದಾರೆ.
ಅವರು ಇಂದುನಗರದ ಸ್ಕೌಟ್ ಭವನದಲ್ಲಿ ಶಿವಮೊಗ್ಗ ರೌಂಡ್ ಟೇಬಲ್ 166 ಹಾಗೂ ಸರ್ಜಿ ಫೌಂಡೇಷನ್ ಶಿವಮೊಗ್ಗ ಇವರ ಆಶ್ರಯದಲ್ಲಿ ವಿಶೇಷಚೇತನ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಕಿಡ್ಸ್ ಪಿಯೆಸ್ಟಾ-2023 (ಮಕ್ಕಳ ಜಾತ್ರೆ) ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ರೌಂಡ್ ಟೇಬಲ್ ಮಾದರಿ ಕಾರ್ಯ ಮಾಡುತ್ತಿದೆ. ಇಡೀ ದೇಶದಲ್ಲಿ ಒಂದು ದಿನಕ್ಕೆ ಎರಡು ಕ್ಲಾಸ್‍ರೂಂ ಕಟ್ಟುವ ಕೆಲಸ ಮಾಡುವುದರ ಜೊತೆಗೆ ರಕ್ತದಾನ ಶಿಬಿರ, ನೇತ್ರದಾನ ಶಿಬಿರ, ಅಂಗಾಂಗ ದಾನ ಶಿಬಿರ ಏರ್ಪಡಿಸುತ್ತಾ ಬಂದಿದೆ. ಒಬ್ಬ ಮನುಷ್ಯ ಸತ್ತ ನಂತರ ಎರಡು ಕಣ್ಣುಗಳನ್ನು ದಾನ ಮಾಡಿದಲ್ಲಿ ನಾಲ್ಕು ಜನರಿಗೆ ದೃಷ್ಟಿ ಬರುತ್ತದೆ. 8ಜನರಿಗೆ ಅಂಗಾಂಗ ದಾನ ಮಾಡಬಹುದು. ದೇಶದಲ್ಲಿ ಒಂದು ವರ್ಷಕ್ಕೆ ಅಂಗಾಂಗಗಳು ಸಿಗದೆ ಸುಮಾರು 5 ಲಕ್ಷ ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಅಂಗಾಂಗ ದಾನ ಮಾಡಿದರೆ ಜೀವಕ್ಕೆ ಜೀವ ಕೊಟ್ಟಂತಾಗುತ್ತದೆ. ದೇಹದ 75 ಅಂಗಾಂಗಳನ್ನು ದಾನ ಮಾಡಬಹುದಾಗಿದೆ. ವಿಶ್ವದಲ್ಲಿ 1.6 ಬಿಲಿಯನ್ ವಿಕಲಚೇತನರಿದ್ದಾರೆ ಎಂದರು.
ನಾವು ಸಮಾಜಕ್ಕೆ ಏನನ್ನಾದರೂ ಕೊಡಬೇಕು ಎಂಬ ಮನೋಭಾವ ಇರಬೇಕು. ಕನಸು ಕಾಣುವಾಗ ದೊಡ್ಡ ಕನಸು ಕಾಣಬೇಕು. ಅದು ಬೆಳಗಿನ ಸುಖ ನಿದ್ರೆ ಕೆಡಿಸುವಂತಿರಬೇಕು. ವಿಕಲಚೇತನ ಮಕ್ಕಳ ಪೋಷಕರು ತಮ್ಮ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ನಿಮ್ಮ ಮಕ್ಕಳ ಭವಿಷ್ಯ ನಿಮ್ಮ ಕೈಯಲ್ಲೇ ಇದೆ ಎಂದರು.
ಅಂತರಾಷ್ಟ್ರೀಯ ಪ್ಯಾರಾ ಓಲಿಂಪಿಕ್‍ನಲ್ಲಿ ಪದಕ ಪಡೆದ ಕಿಶನ್ ಗಂಗೊಳ್ಳಿ ಸನ್ಮಾನ ಸ್ವೀಕರಿಸಿ ಮಾತನಾಡಿ, ದೇಹದ ನ್ಯೂನತೆಗಳು ದೊಡ್ಡದಲ್ಲ. ಅವಕಾಶಗಳೇ ಮುಖ್ಯ ಆತ್ಮಸ್ಥೈರ್ಯ ಇದ್ದರೆ ಏನು ಬೇಕಾದರೂ ಸಾಧಿಸಬಹುದು. ಧೃತಿಗೆಡಬಾರದು. ಸಮಾಜ ಏನೇ ಹೇಳಲಿ. ಸಮಾಜಕ್ಕೆ ನಿಮ್ಮ ಕೊಡುಗೆ ಏನು? ಸಮಾಜಕ್ಕಾಗಿ ನೀವೇನು ಮಾಡಿದ್ದೀರಾ ಎಂದು ಯೋಚಿಸಿ ಎಂದರು.
ಇನ್ನೋರ್ವ ಪದಕ ವಿಜೇತೆ ವೃತ್ತಿ ಜೈನ್ ಮಾತನಾಡಿ, ವಿಕಲ ಚೇತನ ಎಂಬುದು ಒಂದು ನ್ಯೂನತೆ ಅಲ್ಲ. ನಿಖರವಾದ ಗುರಿ ಇಟ್ಟುಕೊಂಡರೆ ಯಾವುದೂ ಕಷ್ಟವಲ್ಲ. ಬೇರೆ ದೇಶಕ್ಕೆ ಹೋಗಿ ನಮ್ಮ ದೇಶವನ್ನು ಪ್ರತಿನಿಧಿಸುವಾಗಿ ನಮಗೆ ಅತ್ಯಂತ ಆನಂದವಾಯಿತು. ಪದಕ ಗಳಿಸುವುದರ ಜೊತೆಗೆ ಪ್ರಧಾನಿಯವರ ಜೊತೆಗಿನ ಸಭೆ ನಮ್ಮ ಜೀವನದ ಅತ್ಯಂತ ಅಮೂಲ್ಯ ಕ್ಷಣ ಎಂದರು.
ಮುಖ್ಯ ಅತಿಥಿಗಳಾಗಿ ನೋನಿ ಸಂಸ್ಥೆಯ ಎಂಡಿ ಡಾ. ಶ್ರೀನಿವಾಸಮೂರ್ತಿ, ದೇವಾನಂದ್, ಅನಿಲ್‍ರಾಜ್, ರಮೇಶ್ ಶಾಸ್ತ್ರಿ, ಶುಶ್ರುತ,, ರೌಂಡ್ ಟೇಬಲ್ ಅಧ್ಯಕ್ಷ ವಿಶ್ವಾಸ್ ಕಾಮತ್, ಈಶ್ವರ್ ಸರ್ಜಿ ಮತ್ತಿತರರು ಇದ್ದರು.
ಕಾರ್ಯಕ್ರಮದಲ್ಲಿ ನೇತ್ರದಾನಿಗಳು ಪ್ರಮಾಣ ವಚನ ಸ್ವೀಕರಿಸಿದರು. ವಿಶೇಷ ಚೇತನ ಮಕ್ಕಳಿಗೆ ವಿವಿಧ ತಿನಿಸು, ಮನರಂಜನೆ ಕಾರ್ಯಕ್ರಮ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.

Related posts

ಆದಿಚುಂಚನಗಿರಿ ಶ್ರೀಗಳಿಂದ ಶ್ರೀ ಸೋಮೇಶ್ವರ ಸ್ವಾಮಿಗೆ ಹೋಮ – ಹವನ”

ಕೆಇಎ ಪರೀಕ್ಷೆ ಅಕ್ರಮ ಕೇಸ್ :  ಕಿಂಗ್ ಪಿನ್ ಆರ್.ಡಿ ಪಾಟೀಲ್ ಅರೆಸ್ಟ್

ಮಹರ್ಷಿ ವಾಲ್ಮೀಕಿ ರಚಿತ ರಾಮಾಯಣ ಇಂದಿಗೂ ಪ್ರಸ್ತುತ:- ಸಚಿವ ಮಧು ಬಂಗಾರಪ್ಪ