ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಡಿಜಿಟಲ್ ಜಾಹೀರಾತು ನೀತಿ; ಇನ್ಮುಂದೆ ಸಾಮಾಜಿಕ ಜಾಲತಾಣದಲ್ಲೂ ಸರ್ಕಾರಿ ಜಾಹೀರಾತು ಪ್ರಕಟ

ನವದೆಹಲಿ: ಡಿಜಿಟಲ್ ಜಾಹೀರಾತು ನೀತಿಯನ್ನು ಕೇಂದ್ರ ಸರ್ಕಾರ ಅನಾವರಣಗೊಳಿಸಿದ್ದು, ಇನ್ಮುಂದೆ ಸಾಮಾಜಿಕ ಜಾಲತಾಣದಲ್ಲೂ ಸರ್ಕಾರಿ ಜಾಹೀರಾತು ಪ್ರಕಟಗೊಳಿಸಲು ನಿರ್ಧರಿಸಲಾಗಿದೆ.

ಪ್ರತಿ ತಿಂಗಳು ಕನಿಷ್ಠ 2.5 ಲಕ್ಷ ಬಳಕೆದಾರರನ್ನು ಹೊಂದಿದ ವೆಬ್ ಸೈಟ್ಗಳು, ಒಟಿಟಿ ಹಾಗೂ ಪಾಡ್ ಕಾಸ್ಟ್ಗಳಂಥ ಡಿಜಿಟಲ್ ವೇದಿಕೆಗಳಲ್ಲಿ ಸರ್ಕಾರಿ ಜಾಹೀರಾತು ನೀಡಲು ಅವಕಾಶ ಕಲ್ಪಿಸುವ ಡಿಜಿಟಲ್ ಜಾಹೀರಾತು ನೀತಿಯನ್ನು ಕೇಂದ್ರ ಸರ್ಕಾರ ಜಾರಿ ಮಾಡಿದೆ.

ವಾರ್ತೆ ಮತ್ತು ಪ್ರಸಾರ ಸಚಿವಾಲಯ ಈ ನೀತಿಯನ್ನು ರೂಪಿಸಿದ್ದು, ಡಿಜಿಟಲ್ ಮಾಧ್ಯಮದಲ್ಲೂ ಪ್ರಚಾರ ನಡೆಸಲು ಕೇಂದ್ರೀಯ ಸಂವಹನ ಬ್ಯೂರೋಗೆ (ಸಿಬಿಸಿ) ಈ ನೀತಿ ಅಧಿಕಾರ ನೀಡುತ್ತದೆ. ವೆಬ್ಸೈಟ್ಗಳನ್ನು ಪಟ್ಟಿ ಮಾಡುವ ಪ್ರಕ್ರಿಯೆಯನ್ನು ಸರಳಗೊಳಿಸುವ ಜೊತೆಗೆ ಇದೇ ಮೊದಲ ಬಾರಿಗೆ ಮೊಬೈಲ್ ಆಪ್ಗಳ ಮೂಲಕ ಸಾರ್ವಜನಿಕ ಸೇವಾ ಆಂದೋಲನ ಸಂದೇಶಗಳನ್ನು ಪ್ರಸಾರ ಮಾಡಲು ಈ ನೀತಿಯಿಂದ ಅನುಕೂಲವಾಗಲಿದೆ ಎಂದು ಸರ್ಕಾರ ವಿವರಿಸಿದೆ.

ಹೊಸ ನೀತಿಯು ಜಾಹೀರಾತು ದರಕ್ಕಾಗಿ ಸ್ಪರ್ಧಾತ್ಮಕ ಬಿಡ್ಡಿಂಗ್ ವ್ಯವಸ್ಥೆಯನ್ನೂ ಪರಿಚಯಿಸಿದೆ. ಅದು ಪಾರದರ್ಶಕತೆ ಮತ್ತು ದಕ್ಷತೆಯನ್ನು ಖಾತರಿಪಡಿಸಲಿದೆ. ಈ ಪ್ರಕ್ರಿಯೆ ಮೂಲಕ ಆವಿಷ್ಕರಿಸಲಾದ ದರಗಳು ಮೂರು ವರ್ಷಕ್ಕೆ ಸಿಂಧುವಾಗಿರುತ್ತವೆ ಹಾಗೂ ಎಲ್ಲ ಅರ್ಹ ಏಜೆನ್ಸಿಗಳಿಗೆ ಅನ್ವಯವಾಗುತ್ತವೆ.

ಸಿಬಿಸಿ ಪಟ್ಟಿಗೆ ಸೇರಲು ವೆಬ್ಸೈಟ್ ಗಳು ಮತ್ತು ಮೊಬೈಲ್ ಆಪ್ ಗಳನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಲಾಗಿದೆ. 20 ದಶಲಕ್ಷಕ್ಕೂ ಅಧಿಕ ಬಳಕೆದಾರರು (ಎ ಪ್ಲಸ್), 10ರಿಂದ 20 ದಶಲಕ್ಷ ಬಳಕೆದಾರರು (ಎ), 5ರಿಂದ 10 ದಶಲಕ್ಷ ಬಳಕೆದಾರರು (ಬಿ) ಮತ್ತು 0.25ರಿಂದ 5 ದಶಲಕ್ಷ ಬಳಕೆದಾರರು (ಸಿ). ಭಾರತದಲ್ಲಿ 880 ದಶಲಕ್ಷಕ್ಕಿಂತ ಅಧಿಕ ಇಂಟರ್ ನೆಟ್ ಸಂಪರ್ಕವಿದೆ ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಜನವರಿ-ಮಾರ್ಚ್ 2023ರ ಭಾರತೀಯ ದೂರಸಂಪರ್ಕ ಸೇವೆಗಳ ಕಾರ್ಯಕ್ಷಮತೆ ಸೂಚಿಗಳು ತಿಳಿಸಿದೆ.

1,172 ದಶಲಕ್ಷಕ್ಕೂ ಹೆಚ್ಚು ಟೆಲಿಕಾಂ ಚಂದಾದಾರರಿದ್ದಾರೆ. ಸರ್ಕಾರಿ ಗ್ರಾಹಕರ (ಕ್ಲಿಯೆಂಟ್) ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಸಿಬಿಸಿ ಜಾಹೀರಾತು ನೀಡುವ ಪ್ರಕ್ರಿಯೆಯನ್ನೂ ನೀತಿ ಸರಳಗೊಳಿಸಿದೆ. ಸಾಮಾಜಿಕ ಮಾಧ್ಯಮ ವೇದಿಕೆಗಳು ಸಾರ್ವಜನಿಕ ಸಂವಹನಕ್ಕೆ ಜನಪ್ರಿಯ ಮಾರ್ಗಗಳಾಗಿ ಹೊರಹೊಮ್ಮುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಹೆಜ್ಜೆಯಿಟ್ಟಿದೆ. ವಿವಿಧ ವೇದಿಕೆಗಳ ಮೂಲಕ ಹೆಚ್ಚು ಜನರನ್ನು ತಲುಪುವಂತಾಗಲು ಡಿಜಿಟಲ್ ಮಾಧ್ಯಮ ಏಜೆನ್ಸಿಗಳನ್ನು ಪಟ್ಟಿಗೆ ಸೇರಿಸಲೂ ಈ ನೀತಿ ಸಿಬಿಸಿಗೆ ಅಧಿಕಾರ ನೀಡುತ್ತದೆ.

 

Related posts

ಅನುದಾನ ಬಿಡುಗಡೆ ಮಾಡುವಂತೆ  ಡಿಸಿಎಂ ಡಿಕೆ ಶಿವಕುಮಾರ್ ಕಾಲಿಗೆ ನಮಸ್ಕರಿಸಿ ಮನವಿ ಪತ್ರ ಸಲ್ಲಿಸಿದ ಬಿಜೆಪಿ ಶಾಸಕ 

ಕರ್ನಾಟಕ ಉದ್ಯೋಗದಾತರ ತವರು ಆಗುವುದರಲ್ಲಿ ಸಂಶಯವಿಲ್ಲ- ಡಿಸಿಎಂ ಶಿವಕುಮಾರ್ ವಿಶ್ವಾಸ.

ಬಿಜೆಪಿ ರಾಜ್ಯಾಧ್ಯಕ್ಷರ ನೇಮಕದಿಂದ ಕಾಂಗ್ರೆಸ್ ಗೆ ಎಫೆಕ್ಟ್ ಆಗಲ್ಲ-ಸಚಿವ ಹೆಚ್.ಕೆ ಪಾಟೀಲ್