ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಯುವಕರು ವಾರಕ್ಕೆ 70 ಗಂಟೆ ದುಡಿಯಬೇಕು- ಇನ್ಫೋಸಿಸ್ ನಾರಾಯಣಮೂರ್ತಿ ಅವರ ಸಲಹೆಗೆ ವಿಭಿನ್ನ ಪ್ರತಿಕ್ರಿಯೆ..

ಬೆಂಗಳೂರು: ದಿಗ್ಗಜ ಐಟಿ ಕಂಪನಿಗಳ ಪೈಕಿ ಮುಂಚೂಣಿಯಲ್ಲಿರುವ ಸಂಸ್ಥೆ  ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರು, ಭಾರತದ ಉದ್ಯೋಗ ಸಂಸ್ಕೃತಿ ಬದಲಾಗಬೇಕು. ಭಾರತದ ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.

ಯೂಟ್ಯೂಬ್ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡ ಅವರು, ರಾಷ್ಟ್ರನಿರ್ಮಾಣ, ತಂತ್ರಜ್ಞಾನ ಮುಂತಾದ ವಿಷಯಗಳ ಕುರಿತು ಮಾತನಾಡಿದರು. ಭಾರತವು ಮುಂದುವರಿದ ಅರ್ಥಿಕತೆಯೊಂದಿಗೆ ಸ್ಪರ್ಧಿಸಲು ಬಯಸಿದರೆ ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಸೂಚಿಸುವ ಮೂಲಕ ಭಾರತದಲ್ಲಿ ಕಾರ್ಮಿಕ ಸಂಸ್ಕೃತಿ ಬದಲಾಗಬೇಕು ಎಂದು  ಹೇಳಿದ್ದಾರೆ.

ಪಾಡ್ಕಾಸ್ಟ್ನಲ್ಲಿ ನಾರಾಯಣ ಮೂರ್ತಿ ಮಾತನಾಡಿ, ನಮ್ಮ ಯುವಕರು, ‘ಇದು ನನ್ನ ದೇಶ. ನಾನು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಲು ಬಯಸುತ್ತೇನೆ’ ಎಂದು ಹೇಳಬೇಕೆಂದು ತಿಳಿಸಿದರು.

ಅತ್ಯಂತ ಶಿಸ್ತಿನ ಹಾಗೂ ಅತ್ಯಂತ ಪರಿಶ್ರಮ ಪಡುವ ಉದ್ಯೋಗಿಗಳು ಅಗತ್ಯ ಎಂದ ಅವರು, ಸರ್ಕಾರ ಹಾಗೂ ಅಧಿಕಾರಿಗಳ ಭ್ರಷ್ಟಾಚಾರ ಕೆಲಸವನ್ನು ನಿಧಾನಗೊಳಿಸುತ್ತಿದೆ ಎಂದರು. ಭಾರತದ ಕೆಲಸದ ಉತ್ಪಾದಕತೆ ಜಗತ್ತಿನಲ್ಲೇ ಅತಿ ಕಡಿಮೆ. ಕೆಲಸದ ಉತ್ಪಾದಕತೆ ಹೆಚ್ಚಿಸಿಕೊಳ್ಳುವ ಜತೆಗೆ ಭ್ರಷ್ಟಾಚಾರ ಮತ್ತಿತರ ಪ್ರಗತಿಯನ್ನು ನಿಧಾನಗೊಳಿಸುವ ಸರ್ಕಾರದ ಕ್ರಮಗಳನ್ನು ನಿವಾರಿಸಿಕೊಳ್ಳದಿದ್ದರೆ ಮುಂದುವರಿದ ರಾಷ್ಟ್ರಗಳ ಜತೆ ಭಾರತ ಸ್ಪರ್ಧಿಸುವುದು ಕಷ್ಟವಾಗಲಿದೆ ಎಂದರು..

ಇನ್ನ ನಾರಾಯಣ ಮೂರ್ತಿ ಅವರ ಸಲಹೆಗೆ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.  ಈ ನಿರ್ದಿಷ್ಟ ಸಾಲು ಇದೀಗ ಕೆಲಸದ ಸಂಸ್ಕೃತಿ, ಕೆಲಸ-ಜೀವನದ ಸಮತೋಲನ, ಹೆಚ್ಚುವರಿ ಗಂಟೆ ಮತ್ತು ಕಡಿಮೆ ಸಂಬಳ ಮತ್ತು ಇತರ ಹಲವು ವಿಷಯಗಳ ಬಗ್ಗೆ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.

ಸೋಶಿಯಲ್ ಮೀಡಿಯಾ ಹಲವರು ಕಾಮೆಂಟ್ ಮಾಡಿದ್ದು, ಕೆಲವರು ನಮಗೆ ಅದೇ ರೀತಿ ಸಂಬಳ ಕೊಡಬೇಕೆಂದರೆ’, ಮತ್ತೆ ಕೆಲವರು ‘ಕೆಲಸ-ಜೀವನದ ಸಮತೋಲನ’ ಕುರಿತು ಕಾಮೆಂಟ್ ಮಾಡಿದ್ದಾರೆ. ಈ ಹೇಳಿಕೆ ಸಂಪೂರ್ಣವಾಗಿ ತಪ್ಪು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

‘ಇದು ಹಲವು ಹಂತಗಳಲ್ಲಿ ತಪ್ಪಾಗಿದೆ, ಉತ್ಪಾದಕತೆಯು ಸಮಯದ ಅಳತೆಯಲ್ಲ, ಆದರೆ ಅದರ ಪರಿಣಾಮಕಾರಿ ಬಳಕೆಯಾಗಿದೆ, 70 ಗಂಟೆ ಕೆಲಸ ಮಾಡುವುದು ಜನರು ಕಡಿಮೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ಪ್ರೋತ್ಸಾಹಿಸುವುದನ್ನು ಬಿಟ್ಟು ಬೇರೆನೂ ಮಾಡುವುದಿಲ್ಲ. ಜರ್ಮನಿ ಮತ್ತು ಜಪಾನ್ ಕೆಲಸದ ಸಮಯದ ನಂತರ ಯಾವುದೇ ಇಮೇಲ್ ಅನ್ನು ಸಹ ಸ್ವೀಕರಿಸದಿರಲು ಪ್ರಯತ್ನಿಸುತ್ತಿದೆ’ ಎಂದು ಬಳಕೆದಾರರು X ನಲ್ಲಿ ಕಾಮೆಂಟ್ ಮಾಡಿದ್ದಾರೆ.

ಈ ಹೇಳಿಕೆಯು ಕೆಲಸ-ಜೀವನದ ಸಮತೋಲನದ ನೀತಿಯನ್ನು ಪ್ರಶ್ನಿಸುವ ಜನರನ್ನು ಕೆರಳಿಸಿದೆ. ವೃತ್ತಿಪರರನ್ನು ಹೊರತುಪಡಿಸಿಯೂ ಜನರು ಇದನ್ನು ಪ್ರಶ್ನಿಸಿದ್ದಾರೆ.

‘ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುವುದರಿಂದ ಉತ್ಪಾದಕತೆ ಇರುವುದಿಲ್ಲ. ಉತ್ತಮ ಉತ್ಪಾದಕತೆಗಾಗಿ ಕೆಲಸ ಮತ್ತು ಜೀವನದ ನಡುವೆ ಸಮತೋಲನವನ್ನು ಕಂಡುಕೊಳ್ಳುವುದು ಮುಖ್ಯವಾಗಿದೆ. ಇನ್ನೂ ವಾರಕ್ಕೆ 40 ಗಂಟೆಗಳ ಕಾಲ ಕೆಲಸ ಮಾಡಿದರೆ ಸಾಕು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

Related posts

ಕೃಷಿಕರ ವಿಶ್ವವಿದ್ಯಾಲಯವಾಗಿ ಬೆಳೆಯಬೇಕು: ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ

ಮಾರುಕಟ್ಟೆ ಕಾರ್ಯಾಗಾರ ನವೆಂಬರ್ 30ಕ್ಕೆ

ದಿ:ಬಂಗಾರಪ್ಪನವರ 90ನೇ ಹುಟ್ಟುಹಬ್ಬ ವಿಶೇಷ ಲೇಖನ: ಬಡವರನ್ನು ಕಂಡರೆ ಅವರ ಮನ ಮಿಡಿಯುತ್ತಿತ್ತು….