ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ದೇವೇಗೌಡರು ರಾಷ್ಟ್ರದ ಹೆಮ್ಮೆಯ ಪ್ರತೀಕ: ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ವಿಶ್ಲೇಷಣೆ

ಬೆಂಗಳೂರು:ನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ೨೦೨೨ನೆಯ ಸಾಲಿನ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿಯನ್ನು ಮಾನ್ಯ ಹೆಚ್.ಡಿ. ದೇವೇಗೌಡ ಅವರ ನಿವಾಸದಲ್ಲಿಯೇ ಪ್ರಶಸ್ತಿ ಪ್ರದಾನ ಮಾಡಲಾಯಿತು.

೨೦೨೩ನೆಯ ಸಾಲಿನ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿಯನ್ನು ಪ್ರದಾನ ಮಾಡಿ ಮಾತನಾಡಿದ ನ್ಯಾಯಾಂಗ ಕ್ಷೇತ್ರದ  ಭೀಷ್ಮ ಎನಿಸಿಕೊಂಡಿರುವ   ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ಮುಖ್ಯ ನ್ಯಾಯಮೂರ್ತಿಗಳಾದ   ಎಂ.ಎನ್. ವೆಂಕಟಾಚಲಯ್ಯ  ಅವರು ಮಾತನಾಡಿ  ದೇವೇಗೌಡ ಅವರು ಕನ್ನಡ ನಾಡಿನ ರತ್ನ, ಗಂಧದನಾಡು ಚಿನ್ನದ ಬೀಡು ಎಂದೆಲ್ಲ ಕರೆಸಿಕೊಂಡ ಮೈಸೂರು ಪ್ರಾಂತ್ಯವನ್ನು ನಾಲ್ವಡಿಯವರು ಉತ್ತುಂಗಕ್ಕೆ ಏರಿಸಿದ ಪರಿಯಲ್ಲಿ ನಾಡಿನ ಕೀರ್ತಿಪತಾಕೆಯನ್ನು ದೇಶದ ಉದ್ದಗಲಕ್ಕೂ ಪಸರಿಸುವಂತೆ ಮಾಡಿರುವ ಮಹಾನ್‌ ನಾಯಕರು. ಕನ್ನಡ ಸಾಹಿತ್ಯ ಪರಿಷತ್ತು ಯೋಗ್ಯ ವ್ಯಕ್ತಿಯನ್ನು ಹುಡುಕಿ ಪ್ರಶಸ್ತಿ ನೀಡುವ ಮೂಲಕ ಪ್ರಶಸ್ತಿಯ ಗೌರವ ಹೆಚ್ಚಾಗಿಸಿದ್ದಾರೆ.

ಸುಮಾರು ಎಪ್ಪತ್ತು ವರ್ಷಗಳಿಂದ ರಾಜಕೀಯದಲ್ಲಿರುವ ಮಣ್ಣಿನ ಮಗ ಎಂದೇ ಹೆಸರಾದ ಹೆಚ್.ಡಿ.ದೇವೇಗೌಡರು ವಿಧಾನ ಸಭೆಯ ವಿರೋಧ ಪಕ್ಷದ ನಾಯಕರಾಗಿ, ಲೋಕೋಪಯೋಗಿ ಮತ್ತು ನೀರಾವರಿ ಸಚಿವರಾಗಿ ಮುಖ್ಯಮಂತ್ರಿಗಳಾಗಿ ಪ್ರಧಾನಿ ಹುದ್ದೆಯಲ್ಲಿ ಸದಾ ಕನ್ನಡಿಗರ ಸರ್ವತೋಮುಖ ಏಳಿಗೆಗೆ ಶ್ರಮಿಸುತ್ತಾ ಬಂದವರು. ಇಂದಿಗೂ ಜನಪರ ಹೋರಾಟದಲ್ಲಿ ಸಕ್ರಿಯರಾಗಿರುವ ಅವರು  ಅಪಾರ ಅಕ್ಷರ ಪ್ರೀತಿಯನ್ನಿಟ್ಟುಕೊಂಡು ಕನ್ನಡ ಸಾಹಿತ್ಯ ಪರಿಷತ್ತಿನ ಕುರಿತು ಸದಾ ಒಲವನ್ನಿಟ್ಟುಕೊಂಡ ಹೆಚ್.ಡಿ.ದೇವೇಗೌಡರಿಗೆ ಅರ್ಹವಾಗಿ ಈ ಪ್ರಶಸ್ತಿಯನ್ನು ನೀಡುತ್ತಿರುವುದು ಅರ್ಥಪೂರ್ಣ ಎಂದು ಅಭಿಪ್ರಾಯಪಟ್ಟು ಇದಕ್ಕೆ ಸಮಾನರಾದ ಮತ್ತೊಬ್ಬ ಸಾಧಕರನ್ನು ಮುಂದಿನ ದಿನಗಳಲ್ಲಿ  ಹುಡುಕುವುದು ಕನ್ನಡ ಸಾಹಿತ್ಯ ಪರಿಷತ್ತಿಗೆ ಕಷ್ಟವಾಗಬಹುದು ಎಂದರು. ರಾಜಕೀಯದಲ್ಲಿ ಇವತ್ತು ವಿಡಂಬನೆ ಹೆಚ್ಚಾಗಿದ್ದು ಹಾಸ್ಯಪ್ರಜ್ಞೆ ಕಡಿಮೆಯಾಗಿದೆ. ಹಾಸ್ಯ ಪ್ರಜ್ಞೆ ಮತ್ತು ಸಜ್ಜನಿಕೆಯನ್ನು ಇಂದಿನ ರಾಜಕೀಯ ನಾಯಕರು ಕಲಿಯಬೇಕಿದೆ ಎಂದ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯನವರು, ದೇವೇಗೌಡರಿಗೆ ೧೨೫ ವರ್ಷಗಳ ತುಂಬು ಆಯಸ್ಸನ್ನು ಹಾರೈಸುವುದಾಗಿ ತಿಳಿಸಿದರು.

            ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಾಹಿತಿ ಆಯುಕ್ತರಾದ ಶ್ರೀ ಎನ್‌.ಸಿ.ಶ್ರೀನಿವಾಸ್‌, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀ ನೇ. ಭ. ರಾಮಲಿಂಗ ಶೆಟ್ಟಿ, ಡಾ. ಪದ್ಮಿನಿ ನಾಗರಾಜು, ಗೌರವ ಕೋಷಾಧ್ಯಕ್ಷರಾದ ಡಾ. ಬಿ. ಎಮ್‌. ಪಟೇಲ್‌ಪಾಂಡು ಸೇರಿದಂತೆ ಇತರರು ಉಪಸ್ಥಿತರಿದ್ದರು.

Related posts

ಅನುಕಂಪ’ದ ಉದ್ಯೋಗಕ್ಕೆ ವಿವಾಹಿತ ಪುತ್ರಿ ಅರ್ಹಳಲ್ಲ- ಹೈಕೋರ್ಟ್ ತೀರ್ಪು.

ರಾಜ್ಯದಲ್ಲೂ ನ್ಯುಮೋನಿಯಾ ವೈರಸ್ ಭೀತಿ: ಸರ್ಕಾರದಿಂದ ಅಲರ್ಟ್..

ಚಂದ್ರಯಾನ -3: ‘ಲ್ಯಾಂಡರ್ ಮಾಡ್ಯೂಲ್’ ಕಾರ್ಯಾಚರಣೆ ಯಶಸ್ವಿ: ಇಸ್ರೋ ಟ್ವೀಟ್..