ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಪರೀಕ್ಷಾ ಸಂಭವನೀಯ ವೇಳಾಪಟ್ಟಿ: ವಿಷಯವಾರು ಅಂತರ ಹೆಚ್ಚಿಸುವಂತೆ ಆಗ್ರಹ.

ಶಿವಮೊಗ್ಗ: ಶಿವಮೊಗ್ಗ: ಆ.30ರಿಂದ ಪ್ರಾರಂಭವಾಗುವ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಪರೀಕ್ಷಾ ಸಂಭವನೀಯ ವೇಳಾಪಟ್ಟಿ ಬಿಡುಗಡೆಯಾಗಿದ್ದು, ವಿಷಯವಾರು ಅಂತರವನ್ನು ಹೆಚ್ಚಿಸಬೇಕು ಎಂದು ಎನ್‍ಎಸ್‍ಯುಐ ಘಟಕದ ವತಿಯಿಂದ ಇಂದು ಪರೀಕ್ಷಾಂಗ ಉಪ ಕುಲಸಚಿವ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಲಾಯಿತು.
ಪದವಿ ಪಠ್ಯ ಅಂಶವನ್ನು ಒಂದು ದಿನದಲ್ಲಿ ಪುನರಾವರ್ತನೆ ಮಾಡುವುದು ವಿದ್ಯಾರ್ಥಿಗಳಿಗೆ ಕಷ್ಟಸಾಧ್ಯ ವಾಗಿದೆ. ಪರೀಕ್ಷೆಗಳ ವಿಷಯವಾರು ಅಂತರ ಕೇವಲ ಒಂದೇ ದಿನ ಇದೆ. ಇದರಿಂದ ವಿದ್ಯಾರ್ಥಿಗಳ ಆರೋಗ್ಯದ ಮೇಲೂ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಕುವೆಂಪು ವಿವಿ ಈ ಅಂಶದ ಕುರಿತು ಗಮನವಹಿಸಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷಾ ಅಂತರವನ್ನು ಎರಡು ಅಥವಾ ಮೂರು ದಿನಗಳ ಕಾಲಕ್ಕೆ ನಿಗದಿಪಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. .
ಈ ಸಂದರ್ಭದಲ್ಲಿ ವಿದ್ಯಾರ್ಥಿ ಗಳಾದ ಪ್ರೀತಂ ಗೌಡ ಬಿ.ಎಂ, ಕೀರ್ತಿ ನಾಯ್ಕ ಎನ್., ರಮೇಶ್ ಕೆ.ಟಿ., ಭೂಮಿಕ, ಯು. ಕಾವ್ಯ, ಪುಷ್ಟರಾಜ್ ಮುಂತಾದವರಿದ್ದರು.

Related posts

HSRP ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ: ಸಾರಿಗೆ ಇಲಾಖೆಯಿಂದ ಡೆಡ್ ಲೈನ್..

ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಭದ್ರಾ ಕಾಡಾ ಸಭೆ: ಸಚಿವ ಮಧುಬಂಗಾರಪ್ಪ ಭಾಗಿ

ಉತ್ತಮ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ಸ್ಕೌಟ್ಸ್ ಗೈಡ್ಸ್ ಸಹಕಾರಿ- ಪಿ.ಜಿ.ಆರ್.ಸಿಂಧ್ಯಾ