ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಪಾಲಿಕೆಯ ವಶದಲ್ಲಿರುವ ಜಾಗ ಸಿದ್ಲಿಪುರ ಗ್ರಾಮಕ್ಕೆ ಹಸ್ತಾಂತರಿಸುವಂತೆ ಆಗ್ರಹ.

ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಯ ವಶದಲ್ಲಿರುವ ಮುದ್ದಿನಕೊಪ್ಪ ಗ್ರಾಮ ಪಂಚಾಯಿತಿಗೆ ಸೇರಿದ ಸಿದ್ಲಿಪುರ ಗ್ರಾಮದ ಸರ್ವೆ ನಂ.28ರ 16.15 ಎಕರೆ ಜಾಗವನ್ನು ಸಿದ್ಲಿಪುರ ಗ್ರಾಮಕ್ಕೆ ಹಸ್ತಾಂತರಿಸಬೇಕು ಎಂದು ಸಿದ್ಲಿಪುರ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇಂದು ಮೀಡಿಯಾ ಹೌಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗ್ರಾಮದ ಮುಖಂಡ ದೀಪಕ್ ನಾಯ್ಕ್, ಸಿದ್ಲಿಪುರ ಗ್ರಾಮದಲ್ಲಿದ್ದ 16-15 ಎಕರೆ ಜಾಗವು ಗೋಮಾಳವಾಗಿತ್ತು. ಆದರೆ ಕಾಲಾಂತರದಲ್ಲಿ ಈ ಜಾಗವನ್ನು ಕೆಐಎಡಿಬಿಯವರು ವಶಪಡಿಸಿಕೊಂಡರು. ಆ ಜಾಗವನ್ನು ಈಗ ಮತ್ತೆ ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಾಗಿದೆ. ಈ ಜಾಗವು ಶಿವಮೊಗ್ಗ ನಗರದಿಂದ 12ಕಿಮೀ. ದೂರ ಇರುತ್ತದೆ. ಈಗಾಗಲೇ 14.03 ಎಕರೆ ಜಾಗದಲ್ಲಿ ಆಶ್ರಯ ಯೋಜನೆಗಾಗಿ ಹಿಂದಿನ ಸರ್ಕಾರ ಮಹಾನಗರ ಪಾಲಿಕೆಗೆ ಮಂಜೂರು ಮಾಡಿದೆ ಎಂದರು.
ಸಿದ್ಲಿಪುರ ಗ್ರಾಮವು ಅತ್ಯಂತ ಹಿಂದುಳಿದ ಗ್ರಾಮವಾಗಿದೆ. ಇಲ್ಲಿ ಪರಿಶಿಷ್ಟ ಜನಾಂಗದವರೇ ಹೆಚ್ಚಾಗಿದ್ದಾರೆ. ಊರಿನಲ್ಲಿ ಕುಟುಂಬಗಳ ಸಂಖ್ಯೆಯೂ ಹೆಚ್ಚಿದೆ. ಹಾಗಾಗಿ ವಾಸಿಸಲು ಕಷ್ಟವಾಗುತ್ತಿದೆ. ಅಲ್ಲದೆ ನಮ್ಮ ಗ್ರಾಮದ ಹತ್ತಿರವಿರುವ ಎಲ್ಲಾ ಸರ್ಕಾರಿ ಭೂಮಿಯನ್ನು ಸರ್ಕಾರ ವಶಪಡಿಸಿಕೊಂಡಿದೆ. ಗ್ರಾಮದ ಉಪಯೋಗಕ್ಕೆ ನಿವೇಶನರಹಿತರಿಗೆ ನಿವೇಶನ ನೀಡಲು ಎಲ್ಲಿಯೂ ಜಾಗವಿಲ್ಲದಾಗಿದೆ. ಇದ್ದ ಭೂಮಿಯೂ ಕೂಡ ಈಗ ಪಾಲಿಕೆ ಹೆಸರಲ್ಲಿದೆ. ಆದ್ದರಿಂದ ಈ ಜಾಗವನ್ನು ಊರಿನ ಜನರ ಅನುಕೂಲಕ್ಕಾಗಿ ಮತ್ತೆ ವಾಪಾಸ್ ಮಹಾನಗರ ಪಾಲಿಕೆಯಿಂದ ವಜಾ ಮಾಡಿ ನಮ್ಮೂರಿನ ಜನರಿಗೇ ನೀಡಬೇಕು ಎಂದರು.
ಈ ಜಾಗವು ಈಗ ಜೂಜಿನ ಕೇಂದ್ರವಾಗಿದೆ. ಗಾಂಜಾ ಸೇವಿಸುವವರ, ಇಸ್ಪೀಟ್ ಆಡುವವರ ಮತ್ತು ಅನೈತಿಕ ಚಟುವಟಿಕೆ ನಡೆಸುವವರ ಸಂಖ್ಯೆ ಈ ಜಾಗದಲ್ಲಿ ಹೆಚ್ಚಾಗಿದೆ. ಸಾರ್ವಜನಿಕರು ಓಡಾಡುವುದೇ ಕಷ್ಟವಾಗಿದೆ. ಪೊಲೀಸ್ ಇಲಾಖೆ ಇತ್ತಕಡೆ ಗಮನಹರಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಟಿಯಲ್ಲಿ ಹರೀಶ್, ಕೊಟ್ರೇಶ್, ಚಂದ್ರು, ನಾಗರಾಜ್, ಮಂಜು, ಖುರ್ಷಿದ್ ಉಪಸ್ಥಿತರಿದ್ದರು.

Related posts

ಸ್ಪಂದನ ನಿಧನ : ಬಿ.ಕೆ. ಹರಿಪ್ರಸಾದರನ್ನು ಸಂತೈಸಿದ ಡಾ. ಆರ್. ಎಂ. ಮಂಜುನಾಥ ಗೌಡ……

ವಾರ್ಷಿಕ ದೀಪಾವಳಿ ಆಚರಣೆ: ರಾಮ, ಸೀತೆ ಮತ್ತು ಮಹಾತ್ಮ ಗಾಂಧೀಜಿ ಸ್ಮರಿಸಿದ ನ್ಯೂಯಾರ್ಕ್ ಮೇಯರ್

ಕಾವೇರಿ ಹೋರಾಟದ ಅಖಾಡಕ್ಕಿಳಿದ ಮಾಜಿ ಪಿಎಂ ಹೆಚ್.ಡಿ ದೇವೇಗೌಡರು: ಮಧ್ಯಸ್ಥಿಕೆ ವಹಿಸುವಂತೆ  ಪ್ರಧಾನಿ ಮೋದಿಗೆ ಪತ್ರ .