ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಹೊಸದಾಗಿ ಖರೀದಿಸಿರುವ ಆಟೋ ರಿಕ್ಷಾಗಳಿಗೆ ಪರವಾನಿಗೆ ನೀಡುವಂತೆ ಆಗ್ರಹ.

ಶಿವಮೊಗ್ಗ: ಹೊಸದಾಗಿ ಖರೀದಿಸಿರುವ ಆಟೋ ರಿಕ್ಷಾಗಳಿಗೆ ಪರವಾನಿಗೆ ನೀಡಬೇಕೆಂದು ಆಗ್ರಹಿಸಿ ಆಟೋ ಚಾಲಕರ ಸಂಘ ಹಾಗೂ ಮಾಲೀಕರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಇಂದು ಮನವಿ ಸಲ್ಲಿಸಲಾಯಿತು.
ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಹೊಸ ಆಟೋ ರಿಕ್ಷಾಗಳಿಗೆ ನೋಂದಣಿ ಮಾಡಿಕೊಡಲಾಗುತ್ತದೆ. ಆದರೆ ಅದನ್ನು ಓಡಿಸಲು ಪರವಾನಿಗೆ ನೀಡುವುದನ್ನು ನಿಲ್ಲಿಸಲಾಗಿದೆ. ಹೊಸದಾಗಿ ನೋಂದಣಿಯಾಗಿರುವ ಆಟೋ ರಿಕ್ಷಾಗಳಿಗೆ ಪರವಾನಿಗೆ ಇರುವುದಿಲ್ಲ. ಇದರಿಂದ ಕಷ್ಟಪಟ್ಟು ಆಟೋ ರಿಕ್ಷಾ ಖರೀದಿ ಮಾಡಿದವರಿಗೆ ಜೀವನ ಸಾಗಿಸುವುದೇ ಕಷ್ಟವಾಗುತ್ತಿದೆ. ಜೊತೆಗೆ ಸಾಲ ಮಾಡಿ ನಾವು ಆಟೋ ಖರೀದಿ ಮಾಡಿದ್ದೇವೆ. ಸುಮಾರು ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಈ ರೀತಿಯ ಪರವಾನಿಗೆ ಇಲ್ಲದ ಆಟೋಗಳಿವೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಸಾಲದ ಕಂತುಗಳನ್ನು ಕಟ್ಟಲು ನಮಗೆ ಕಷ್ಟವಾಗುತ್ತಿದೆ. ಪರವಾನಿಗೆ ಇಲ್ಲದೇ ಆಟೋ ಓಡಿಸುವುದೇ ಕೂಡ ತುಂಬಾ ಅಪಾಯಕಾರಿಯಾಗಿರುತ್ತದೆ. ಈ ಬಗ್ಗೆ ಹಲವು ಬಾರಿ ನಾವು ಮನವಿ ಮಾಡಿದ್ದರೂ ಸಾರಿಗೆ ಅಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸಿಲ್ಲ. ಆದ್ದರಿಂದ ಹೊಸದಾಗಿ ಖರೀದಿಸಿರುವ ಆಟೋಗಳಿಗೆ ಪರವಾನಿಗೆ ಕೊಡಬೇಕೆಂದು ಮನವಿ ಮಾಡಲಾಗಿದೆ.
ಈ ಬಗ್ಗೆ ಶಾಸಕರು ಕೂಡ ಸಾರಿಗೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೂ, ಪರವಾನಿಗೆ ನೀಡಿಲ್ಲ ಎಂದು ಆಟೋ ಚಾಲಕರು ದೂರಿದರು.

Related posts

ಇಬ್ಬರು ಬಿಜೆಪಿ ನಾಯಕರಿಂದ ಡಿಸಿಎಂ ಡಿ.ಕೆ ಶಿವಕುಮಾರ್ ಭೇಟಿ, ಚರ್ಚೆ.

ಶಿಶುಪಾಲನಾ ಕೇಂದ್ರ ಮುಚ್ಚಲು ಹೊರಟಿರುವುದಕ್ಕೆ ಖಂಡನೆ: ಜಿಲ್ಲಾಧಿಕಾರಿಗೆ ಮನವಿ.

ರಾಜ್ಯದಲ್ಲಿ ಶುಕ್ರವಾರ 78 ಜನರಿಗೆ ಕೊರೋನಾ ಸೋಂಕು ದೃಢ: ಓರ್ವ ಸಾವು

TOD News