ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಜೋಗಿ ಜಾತಿಯನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಆಗ್ರಹ.

ಶಿವಮೊಗ್ಗ: ಜೋಗಿ ಜಾತಿಯನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಆಗ್ರಹಿಸಿ ಅಖಿಲ ಕರ್ನಾಟಕ ಜೋಗಿ ಸಮಾಜ ಅಭಿವೃದ್ಧಿ ಮಹಾಮಂಡಳದ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಜೋಗಿ ಜಾತಿಯು ಅತ್ಯಂತ ಕಡು ಬಡತನದಲ್ಲಿದ್ದು, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಸೇರಿದಂತೆ ಎಲ್ಲಾ ರಂಗಗಳಲ್ಲಿಯೂ ಹಿಂದುಳಿದಿದೆ. ಜೀವನಕ್ಕಾಗಿ ಭಿಕ್ಷಾಟನೆ ಮಾಡುತ್ತಿದ್ದಾರೆ. ಡಬ್ಬ, ಸಾಣೆ ಹಿಡಿಯುವುದು ಸೇರಿದಂತೆ ಹಲವು ಕೆಲಸಗಳನ್ನೆ ನಂಬಿ ಜೀವನ ನಡೆಸುತ್ತಿದ್ದಾರೆ. ಅರೆಬಟ್ಟೆ ಅರೆಹೊಟ್ಟೆಯಲ್ಲಿ ಬದುಕುತ್ತಿದ್ದಾರೆ. ಮೂಢ ನಂಬಿಕೆ ಕಂದಾಚಾರಗಳಿಂದ ಅಲೆಮಾರಿಗಳಾಗಿ ಹೊಟ್ಟೆಪಾಡಿಗಾಗಿ ಸುತ್ತುತ್ತಿದ್ದಾರೆ ಎಂದು ಮನವಿದಾರರು ತಿಳಿಸಿದರು.
ಕರ್ನಾಟಕ ಸರ್ಕಾರ 12 ವರ್ಷಗಳ ಹಿಂದೆಯೇ ಜೋಗಿ ಸಮಾಜದ ಕುಲಶಾಸ್ತ್ರ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿತ್ತು. ಈ ವರದಿಯಲ್ಲಿ ಜೋಗಿ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕೆಂದು ಉಲ್ಲೇಖಿಸಲಾಗಿದೆ.
ಆದ್ದರಿಂದ ತಕ್ಷಣವೇ ಜೋಗಿ ಜಾತಿಯನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಮಹಾ ಮಂಡಳದ ಅಧ್ಯಕ್ಷ ಶಿವಾಜಿ ಡಿ.ಮಧುರಕರ, ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಪ್ರಭಾಳ್ಕರ, ಪ್ರಮುಖರಾದ ರವಿ ಎಂ., ವೆಂಕಟೇಶ್, ನಟರಾಜ್, ರವಿ ಕಂಬದಾಳು, ಶಾಂತನಗೌಡ, ರಾಜು ಸೇರಿದಂತೆ ಹಲವರಿದ್ದರು.

Related posts

ಜನತಾ ದರ್ಶನ : ಜಿಲ್ಲೆಯಲ್ಲಿ 328 ಅರ್ಜಿ ಸ್ವೀಕಾರ

ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ವೇಳೆ ಪ್ರಾದೇಶಿಕ ಸಾಮಾಜಿಕ ನ್ಯಾಯ, ಅರ್ಹತೆ, ಪ್ರತಿಭೆಗೆ ಅವಕಾಶ ನೀಡಿ-ಸಿಎಂ ಸಿದ್ದರಾಮಯ್ಯ ಸೂಚನೆ

 ಅಕ್ರಮವಾಗಿ ಸಾಗಿಸುತ್ತಿದ್ದ 36 ಲಕ್ಷ ಮೌಲ್ಯದ  30 ಚಿನ್ನದ ಬಿಸ್ಕೆಟ್​ ಗಳು ಜಪ್ತಿ.