ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿಸಿರುವ ಜಾಗಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಆಗ್ರಹ.

ಶಿವಮೊಗ್ಗ: ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿಸಿರುವ ಜಾಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಆಗ್ರಹಿಸಿ ಪಟ್ಟಣ ಮಾರಾಟ ಸಮಿತಿಯ ಸದಸ್ಯ ಚನ್ನವೀರಪ್ಪ ಗಾಮನಗಟ್ಟಿ ನೇತೃತ್ವದಲ್ಲಿ ಬೀದಿ ಬದಿ ವ್ಯಾಪಾರಿಗಳು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಹಿಂದೆ ಟಿವಿಸಿ ಸಭೆಯಲ್ಲಿ ವೆಂಡಿಂಗ್ ಝೋನ್ ಗುರುತಿಸಿ ಬೀದಿಬದಿ ವ್ಯಾಪಾರಸ್ಥರಿಗೆ ಜಾಗ ನೀಡಲಾಗಿತ್ತು. ಆದರೆ ಅಲ್ಲಿ ಮೂಲಭೂತ ಸೌಕರ್ಯಗಳು ಇಲ್ಲ. ಫುಟ್‍ಪಾತ್‍ಗಳಲ್ಲೂ ಅವಕಾಶ ಸಿಗುತ್ತಿಲ್ಲ. ದೊಡ್ಡ ದೊಡ್ಡ ಅಂಗಡಿ ಮಾಲೀಕರು ಫುಟ್‍ಪಾತ್ ಕೂಡ ಆಕ್ರಮಿಸಿಕೊಂಡಿದ್ದಾರೆ. ನಿಜವಾದ ಬೀದಿಬದಿ ವ್ಯಾಪಾರಿಗಳಿಗೆ ಅವಕಾಶ ಸಿಗುತ್ತಿಲ್ಲ. ಸ್ಮಾರ್ಟ್ ಸಿಟಿ ವತಿಯಿಂದ 120ಕ್ಕೂಹೆಚ್ಚು ಕನ್ಸರ್ವೆನ್ಸಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅಲ್ಲಿಯೂ ಕೂಡ ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ ನೀಡಿಲ್ಲ ಎಂದು ದೂರಿದರು.
ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಸಿಕ್ಕಿಲ್ಲ. ವಿನೋಬನಗರದ ಶಿವಾಲಯ ದೇವಾಲಯದ ಬಳಿ ಇರುವ 70 ಸಂತೆ ಮಳಿಗೆ ವ್ಯಾಪಾರಿಗಳಿಗೆ ಅವಕಾಶ ನೀಡಲಾಗಿದೆ. ಆದರೆ ಈ ಬಗ್ಗೆ ಮಾಹಿತಿ ಇಲ್ಲ. ಟಿವಿಸಿ ಸದಸ್ಯರನ್ನು ಬಿಟ್ಟು ಮಳಿಗೆಗಳನ್ನು ಹಂಚಲಾಗಿದೆ. ಈ ಬಗ್ಗೆ ದೂರನ್ನೂ ನೀಡಲಾಗಿದೆ. ಆದರೆ ಸಂಬಂಧಪಟ್ಟವರು ಇದುವರೆಗೂ ಉತ್ತರ ನೀಡಿಲ್ಲ ಎಂದು ಆರೋಪಿಸಿದರು.
ಆಹಾರ ಸುರಕ್ಷತಾ ತರಬೇತಿ ನಿಜವಾದ ಬೀದಿಬದಿ ವ್ಯಾಪಾರಿಗಳಿಗೆ ದೊರೆತಿಲ್ಲ. ಹಾಗೂ ಸ್ವನಿಧಿ ಮಹೋತ್ಸವ ಕಾರ್ಯಕ್ರಮದ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಪ್ರಮುಖರಾದ ನಾರಾಯಣ, ವಿನಯಕುಮಾರ್, ಅಶೋಕ್‍ಕುಮರ್, ಮಹಮ್ಮದ್ ಇಸ್ಮಾಯಿಲ್, ಶೇಷಯ್ಯ, ಚಂದ್ರಕಲಾ ಮುಂತಾದವರಿದ್ದರು.

Related posts

2024ರ ಲೋಕಸಭೆ ಚುನಾವಣೆ: ಒಟ್ಟಾಗಿ ಹೋರಾಡಲು INDIA ಮೈತ್ರಿಕೂಟ ನಿರ್ಧಾರ.

ತಮಿಳುನಾಡಿಗೆ ನೀರು ಹರಿಸುತ್ತಿರುವುದಕ್ಕೆ ವಿರೋಧ: ರೈತರಿಂದ ವಿವಿಧೆಡೆ ಪ್ರತಿಭಟನೆ, ಆಕ್ರೋಶ.

ಸೆ.13ರಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಅಭಿನಂದನಾ ಸಮಾರಂಭ.