ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಕುವೆಂಪು ವಿವಿಯ ಪದವಿ ಕೊನೆ ಸೆಮಿಸ್ಟಾರ್ ಪರೀಕ್ಷೆ ಮುಂದೂಡಿಕೆಗೆ ಆಗ್ರಹ.

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಪದವಿ ಕೊನೆಯ ಸೆಮಿಸ್ಟಾರ್ ಪರೀಕ್ಷೆಯನ್ನು ಮುಂದೂಡುವಂತೆ ಆಗ್ರಹಿಸಿ ಪದವಿ ಕಾಲೇಜು ವಿದ್ಯಾರ್ಥಿಗಳು ಇಂದು ಜಿಲ್ಲಾ ಪಂಚಾಯತ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಕುವೆಂಪು ವಿವಿಯ ಪ್ರಭಾರ ಕುಲಸಚಿವರೂ ಆದ ಜಿಪಂ ಸಿಇಒ ಅವರಿಗೆ ಮನವಿ ಸಲ್ಲಿಸಿದರು.
ಈಗಾಗಲೇ ಕುವೆಂಪು ವಿವಿಯ ಪದವಿ ಕೊನೆಯ ಸೆಮಿಸ್ಟಾರ್ ಪರೀಕ್ಷಾ ದಿನಾಂಕವನ್ನು ಪ್ರಕಟಿಸಿದ್ದು ವಿದ್ಯಾರ್ಥಿಗಳಿಗೆ ಅಸಮಾಧಾನ ತಂದಿದೆ. ಈ ವೇಳಾ ಪಟ್ಟಿಯಲ್ಲಿ ಪರೀಕ್ಷೆಯು ಆ.30ರಿಂದ ಆರಂಭವಾಗಿ ಸೆ.9ಕ್ಕೆ ಕೊನೆಗೊಳ್ಳಲಿದೆ. ಕೇವಲ 10 ದಿನಗಳಲ್ಲಿ ಸಮಿಸ್ಟಾರ್ ಪರೀಕ್ಷೆಯನ್ನು ಕೊನೆಗೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ವಿಶೇಷವಾಗಿ ಬ್ಲಾಕ್ ಲಾಗ್ ಇರುವ ವಿದ್ಯಾರ್ಥಿಗಳಿಗೆ ಹೆಚ್ಚು ಹೊರೆಯಾಗುವ ಸಾಧ್ಯತೆ ಇದೆ. ಹಾಗೂ ಪ್ರಾಯೋಗಿಕ ಪರೀಕ್ಷೆಗಳು ಆ.14ರಿಂದ ಆರಂಭವಾಗಿ 26ರಂದು ಮುಕ್ತಾಯಗೊಳ್ಳಲಿವೆ. ವಿದ್ಯಾರ್ಥಿಗಳಿಗೆ ಓದಲ ಕೇವಲ ಮೂರು ದಿನಗಳು ಬಾಕಿ ಉಳಿಯುವುದರಿಂದ ಒತ್ತಡ ಉಂಟಾಗಬಹುದು. ಆದ್ದರಿಂದ ಪರೀಕ್ಷೆಯನ್ನು ಕನಿಷ್ಠ 10 ದಿನಗಳ ವರೆಗೆ ಮುಂದೂಡಬೇಕು ಮತ್ತು ಒಂದು ವಿಷಯದಿಂದ ಇನ್ನೊಂದು ವಿಷಯದ ಪರೀಕ್ಷೆಗೆ ಕನಿಷ್ಠ ಮೂರರಿಂದ ನಾಲ್ಕು ದಿನ ಅಂತರವಿರಬೇಕು. ವಿದ್ಯಾರ್ಥಿಗಳಿಗೆ ಹೊರೆಯಾಗುವುದನ್ನು ತಪ್ಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Related posts

ನ್ಯೂಸ್ ಪೇಪರ್ನಲ್ಲಿ ಆಹಾರ ಪ್ಯಾಕ್ ಮಾಡಿ ಮಾರುವುದನ್ನ ನಿಲ್ಲಿಸಿ- FSSAI ತಾಕೀತು.

ಯೋಗಿ ಆದಿತ್ಯನಾಥ ಸರಕಾರದಿಂದ ಹಲಾಲ್ ಪ್ರಮಾಣ ಪತ್ರದ ಮೇಲೆ ನಿಷೇಧ?..

ನಾಲ್ಕು ತಲೆಮಾರಿನಿಂದಲೂ ಗಣೇಶ ಮೂರ್ತಿ ತಯಾರಿ: ವಿದೇಶಕ್ಕೂ ತಲುಪಿದ ಗಣಪನ ಮೂರ್ತಿ: ಈ ಅಪರೂಪ ಕುಟುಂಬದ ಶ್ರದ್ಧೆ ಮತ್ತು ಭಕ್ತಿಗೆ ಒಂದು ನಮನ.