ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ಡಿಸಿಎಂ ಡಿಕೆ ಶಿವಕುಮಾರ್ ಗೆ ರಿಲೀಫ್: ಸಿಬಿಎಂ ತನಿಖೆ ಪ್ರಶ್ನಿಸಿದ್ದ ಮೇಲ್ಮನವಿ ಅರ್ಜಿ ವಾಪಾಸ್

ಬೆಂಗಳೂರು:  ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದಅನುಮತಿಯನ್ನ ಸರ್ಕಾರ  ವಾಪಸ್ ಪಡೆದಿತ್ತು. ಈ ಹಿನ್ನಲೆಯಲ್ಲಿ ಸರ್ಕಾರ ಸಿಬಿಐ ತನಿಖೆಗೆ ವಹಿಸಿದ್ದ ನಿರ್ಧಾರ ಪ್ರಶ್ನಿಸಿ ಹೈಕೋರ್ಟ್ ಗೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಅವರ ಪರ ವಕೀಲರು ಹಿಂಪಡೆದಿದ್ದಾರೆ.

ಈ ಮೂಲಕ ಮೊದಲನೇ ಹಂತದ ಹೋರಾಟದಲ್ಲಿ ಡಿಕೆ ಶಿವಕುಮಾರ್ ರಿಗೆ ರಿಲೀಫ್ ಸಿಕ್ಕಂತಾಗಿದೆ.  ಡಿ.ಕೆ ಶಿವಕುಮಾರ್ ಅವರು ಸಿಬಿಐ ತನಿಖೆಗೆ ಸರ್ಕಾರ ವಹಿಸಿದ್ದ ಅರ್ಜಿಯ ಮೇಲ್ಮನವಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿತು.  ಹೈಕೋರ್ಟ್ ನ್ಯಾಯಪೀಠದ ಮುಂದೆ ರಾಜ್ಯ ಸರ್ಕಾರದ ಪರ ಎಜೆ ಶಶಿಕಿರಣ್ ಶೆಟ್ಟಿ ಅವರು, ರಾಜ್ಯ ಸಂಪುಟದ ನಿರ್ಧಾರವನ್ನು ಲಿಖಿತ ಪತ್ರದಲ್ಲಿ ಇಟ್ಟಿದ್ದಾರೆ.

ಸಿಬಿಐ ಪರ ವಕೀಲರು ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಪರ ವಕೀಲರು ವಾದ-ಪ್ರತಿವಾದವನ್ನು ಮಾಡಿದರು.  ಈಗಾಗಲೇ ಸಿಬಿಐ ತನಿಖೆ ಮುಕ್ತಾಯ ಹಂತಕ್ಕೆ ಬಂದಿದೆ . ಹೀಗಾಗಿ ತನಿಖೆಗೆ ನೀಡಿದ್ದ ಅನಮತಿ ವಾಪಸ್ ಪಡೆದ ಕ್ಯಾಬಿನೆಟ್  ನಿರ್ಧಾರ ಕಾನೂನು ಬಾಹಿರ ಎಂದು ಸಿಬಿಐ ಪರ ವಕೀಲರು ವಾದಿಸಿದರು.

Related posts

ಏಕದಿನ ಏಷ್ಯಾಕಪ್ 2023: ಇಂಡೋ- ಪಾಕ್ ಕದನ: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ.

ಪಂಚರಾಜ್ಯ ಚುನಾವಣೆ ಫಲಿತಾಂಶ ಬಳಿಕ: ತೆಲಂಗಾಣ ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಸ್ಥಳಾಂತರ ಸಾಧ್ಯತೆ..!

ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್: ಸಹಾಯಧನ ಭಾರಿ ಹೆಚ್ಚಳ