ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ಕಾಂಗ್ರೆಸ್ ಸೇರ್ಪಡೆಗೆ ಮುಖಂಡರ ಒಲವು:  ಆಪರೇಷನ್ ಹಸ್ತ ಅವಶ್ಯಕತೆ ಇಲ್ಲ-ಡಿಸಿಎಂ ಡಿಕೆ ಶಿವಕುಮಾರ್ ಟಾಂಗ್

ಬೆಂಗಳೂರು: ಕಾಂಗ್ರೆಸ್ ಸೇರ್ಪಡೆಗೆ ಆನೇಕ ಮುಖಂಡರು ಒಲವು ತೋರಿಸಿದ್ದಾರೆ. ಹೀಗಾಗಿ  ನಮಗೆ ಆಪರೇಷನ್ ಹಸ್ತ ಅವಶ್ಯಕತೆ ಇಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್,  ಜೆಡಿಎಸ್-ಬಿಜೆಪಿ ಮೈತ್ರಿ ಬೆನ್ನಲ್ಲೇ ಹಲವು ಮುಖಂಡರು ಕಾಂಗ್ರೆಸ್ ​ಗೆ ಬರ್ತಿದ್ದಾರೆ. ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ಅನೇಕರು ಒಲವು ತೋರಿಸುತ್ತಿದ್ದಾರೆ. ಮೂವರು ಮಾಜಿ ಶಾಸಕರು ಪಕ್ಷ ಸೇರುತ್ತೇನೆ ಅಂತ ಹೇಳಿದ್ದಾರೆ.

ಬಿಜೆಪಿ, ಜೆಡಿಎಸ್ ಮೈತ್ರಿ ವಿರೋಧಿಸಿ ಮುಖಂಡರು ಹೊರ ಬರುತ್ತಿದ್ದಾರೆ. ರಾಮನಗರ ಜಿಲ್ಲೆಯಲ್ಲೂ ಕಾಂಗ್ರೆಸ್​ ಗೆ ಸೇರುವ ಆಸೆ ವ್ಯಕ್ತಪಡಿಸಿದ್ದು,  ಸೂಕ್ತ ಸಂದರ್ಭದಲ್ಲಿ ಸೂಕ್ತವಾದ ನಿರ್ಧಾರವನ್ನು ಮಾಡಿದ್ದಾರೆ. ಸ್ಥಳೀಯ ಚುನಾವಣೆ, ಕಾರ್ಪೊರೇಷನ್ ಚುನಾವಣೆ ಹತ್ತಿರ ಬರುತ್ತಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

Related posts

ಎಚ್.ಡಿ.ದೇವೇಗೌಡರು ಕಟ್ಟಿ ಬೆಳಿಸಿದ ಜೆಡಿಎಸ್ ಪಕ್ಷ ರಾಜ್ಯದಲ್ಲಿ ಸದೃಢ- ಎಂಎಲ್ಸಿ ಬೋಜೇಗೌಡ

ನಾಳೆ ಕರಾಳ ದಿನಾಚಾರಣೆಗೆ ನಿರ್ಧರಿಸಿದ್ದ ಎಂಇಎಸ್ ಗೆ ಶಾಕ್: ಬೆಳಗಾವಿ ಗಡಿ ಪ್ರವೇಶಿಸದಂತೆ ಮಹಾರಾಷ್ಟ್ರದ 3 ಸಚಿವರು, ಓರ್ವ ಎಂಪಿಗೆ ನಿರ್ಬಂಧ.

ಅಪೌಷ್ಠಿಕತೆ: ಭಾರತ, ಗುಜರಾತ್ ಸೂಚ್ಯಂಕ ಏರಿಕೆ: ಏಕೆ ಹೀಗಾಯ್ತು ವಿಶ್ವಗುರು ಉತ್ತರಿಸಬೇಕು-ಕುಟುಕಿದ ಸಿಎಂ ಸಿದ್ದರಾಮಯ್ಯ