ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ಉತ್ಪಾದನೆ ಕಡಿಮೆ  2 ತಾಸು ವಿದ್ಯುತ್ ಸಮಸ್ಯೆ ಆಗುತ್ತೆ- ಡಿಸಿಎಂ ಡಿ.ಕೆ ಶಿವಕುಮಾರ್.

 

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್​ ಕೊರತೆ ಹಾಗೂ ಲೋಡ್​ ಶೆಡ್ಡಿಂಗ್​ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆ ಶಿವಕುಮಾರ್, ಬರಗಾಲ ಹಿನ್ನಲೆ ವಿದ್ಯುತ್ ಉತ್ಪಾದನೆ ಕಡಿಮೆ ಇದೆ.  ಹೀಗಾಗಿ 2 ತಾಸು ವಿದ್ಯುತ್ ಸಮಸ್ಯೆ ಆಗುತ್ತೆ ಎಂದಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆ ಶಿವಕುಮಾರ್,  ರಾಜ್ಯದಲ್ಲಿ ಬರಗಾಲ ಇರುವುದರಿಂದ ವಿದ್ಯುತ್ ಉತ್ಪಾದನೆ ಕಡಿಮೆ ಇದೆ. ಉತ್ಪಾದನೆ ಕಡಿಮೆ ಇರುವುದರಿಂದ 2 ತಾಸು ವಿದ್ಯುತ್ ಸಮಸ್ಯೆ ಆಗುತ್ತೆ .10,000 ಎಕರೆಯಲ್ಲಿ ಸೋಲಾರ್ ಪ್ಲಾಂಟ್ ನಿರ್ಮಾಣಕ್ಕೆ ಪ್ಲ್ಯಾನ್ ಇದೆ. ಈಗಾಗಲೇ ಇಂಧನ ಸಚಿವರು ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದು, ಸೆಂಟ್ರಲ್ ಗ್ರಿಡ್​ನಿಂದ ವಿದ್ಯುತ್​ ಕೊಟ್ಟರೇ ನಮಗೆ ಅನುಕೂಲ ಆಗುತ್ತದೆ ಎಂದು ಸ್ಪಷ್ಟಪಡಿಸಿದರು.

 

ಲೋಡ್ ಶೆಡ್ಡಿಂಗ್ ಬಗ್ಗೆ ಬಿಜೆಪಿ ನಾಯಕರ ಟೀಕೆ  ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಮಳೆ ಸರಿಯಾಗಿ ಆಗಿದ್ದರೇ ಈ ಸಮಸ್ಯೆ ಆಗುತ್ತಿರಲಿಲ್ಲ. ಬಿಜೆಪಿಯವರು ಟೀಕೆ ಮಾಡುತ್ತಿದ್ದಾರೆ. ಅವರ ಕಾಲದಲ್ಲಿ ಎಷ್ಟು ಸಮಸ್ಯೆ ಆಗಿತ್ತು ಎನ್ನುವುದನ್ನು ತಿಳಿಸಲಿ  ಎಂದು ಟಾಂಗ್ ನೀಡಿದರು.

Related posts

ಬ್ಬ-ಉತ್ಸವಗಳು ಶಾಂತಿ-ಸೌಹಾರ್ದತೆಯ ಸಂದೇಶವನ್ನು ಬಿತ್ತಿದಾಗ ಉತ್ತಮ ಸಮಾಜ ಮತ್ತಷ್ಟು ಬಲಿಷ್ಟ-ಮುಹಮ್ಮದ್ ತಾಹೀರ್ ಹುಸೇನ್

ಮಹಿಳೆಯರ ಸ್ವಾವಲಂಬಿ ಬದುಕಿಗೆ ಗೃಹಲಕ್ಷ್ಮಿ ಆಸರೆ- ಗ್ರಾಪಂ ಅಧ್ಯಕ್ಷೆ ಚೈತ್ರ ಮೋಹನ್

ಮಹಿಳೆಯರ ಋತುಬಂಧದ ಕುರಿತು ಜಾಗೃತಿ ಹೆಚ್ಚಬೇಕು : ಡಿಹೆಚ್‍ಓ ಡಾ.ರಾಜೇಶ್ ಸುರಗಿಹಳ್ಳಿ