ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ನೀರಾವರಿ ವಿಷಯದಲ್ಲಿ ರಾಜಿ ಇಲ್ಲ- ಸರ್ವಪಕ್ಷ ಸಭೆಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ನುಡಿ.

 ಬೆಂಗಳೂರು:  ಕಾವೇರಿ ಮತ್ತು ಮಹದಾಯಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಇಂದು ಸರ್ವಪಕ್ಷ ಸಭೆ ನಡೆಯುತ್ತಿದ್ದು ಕಾನೂನು ಹೋರಾಟ ಮಾಡುವುದಕ್ಕೆ ವಿಪಕ್ಷಗಳ ನಾಯಕರು ಬೆಂಬಲ ಸೂಚಿಸಿದ್ದಾರೆ.

ಇಂದು ವಿಧಾನಸೌಧದಲ್ಲಿ ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ನಡೆಯುತ್ತಿದ್ದು ಸಭೆಯಲ್ಲಿ ಆಡಳಿತ ಮತ್ತು ವಿಪಕ್ಷಗಳ ನಾಯಕರುಗಳು ಭಾಗಿಯಾಗಿದ್ದಾರೆ. ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿಂತೆ ಕಾನೂನು ಹೋರಾಟಕ್ಕೆ ವಿಪಕ್ಷಗಳು ಬೆಂಬಲ ಸೂಚಿಸಿವೆ ಎನ್ನಲಾಗಿದೆ.

ಈ ಕುರಿತು ಸರ್ವಪಕ್ಷಗಳ ಸಭೆಯಲ್ಲಿ ಮಾತನಾಡಿದ ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್, ನೀರಾವರಿ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ರಾಜ್ಯದ ಹಿತ ರಕ್ಷಣೆಯಲ್ಲಿ ನಾವು ಯಾವುದೇ ರಾಜಿ ಆಗುವುದಿಲ್ಲ. ರಾಜ್ಯ ಸರ್ಕಾರ ಕಾನೂನು ಹೋರಾಟ ಮುಂದುವರೆಸಲಿದೆ.  ಈ ನಿಟ್ಟಿನಲ್ಲಿಎಲ್ಲ ಪಕ್ಷಗಳ ನಾಯಕರ ಸಹಕಾರ ಬೇಕಿದೆ ಎಂದು ಹೇಳಿದ್ದಾರೆ.

Related posts

ಕಲಿಕಾ ಸಾಮರ್ಥ್ಯ ಕೇಂದ್ರಿತ ಬೋಧನೆ ಪರಿಣಾಮಕಾರಿ : ಎಸ್.ಎನ್.ನಾಗರಾಜ

ಸ್ವಿಗ್ಗಿ ಮತ್ತು ಜೊಮ್ಯಾಟೊಗಳನ್ನು ಬಿಟ್ಟು ಮಕ್ಕಳಿಗೆ ತಾಯಂದಿರ ಕೈ ರುಚಿ ತೋರಿಸಿ- ಹೈಕೋರ್ಟ್

ಕರ್ನಾಟಕದಲ್ಲಿ ವಿದ್ಯುತ್ ಕೊರತೆ, ಲೋಡ್ ಶೆಡ್ಡಿಂಗ್ ಬಿಸಿ: ಅನ್ಯ ರಾಜ್ಯಗಳ ಮೊರೆ ಹೋದ ಸರ್ಕಾರ