ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಸೃಜನಾತ್ಮಕ ಚಿಂತನೆಗಳ ಪಠ್ಯ ಪುಸ್ತಕ ರಚನೆಯಾಗಬೇಕು-ಡಿ.ಮಂಜುನಾಥ್ ಅಭಿಪ್ರಾಯ

ಶಿವಮೊಗ್ಗ: ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕ ಚಿಂತನೆಗೆ ಒತ್ತು ನೀಡುವಂತಹ ಭಾಷಾ ಪಠ್ಯ ಪುಸ್ತಕ ರಚನೆಯಾಗಬೇಕಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ.ಮಂಜುನಾಥ ಅಭಿಪ್ರಾಯಪಟ್ಟರು
ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಶ್ರೀ ರಾಮಕೃಷ್ಣ ಗುರುಕುಲ ಪಾಠಶಾಲೆಯ ಸಹಯೋಗದಲ್ಲಿ ಶಾಲಾ ಕಾಲೇಜು ಅಂಗಳದಲ್ಲಿ ವಿದ್ಯಾರ್ಥಿಗಳಿಗೆ ಭಾಷಾ ಕಲಿಕೆ, ಪಠ್ಯದಲ್ಲಿರುವ ಕಥೆ, ಕವನ, ಪ್ರಬಂಧ ಸೇರಿದಂತೆ ಎಲ್ಲಾ ಪ್ರಕಾರಗಳ ರಸಗ್ರಹಣ ಕಮ್ಮಟ ಉದ್ಘಾಟಿಸಿ ಮಾತನಾಡಿದರು.
ಭಾಷಾ ಕಲಿಕೆಯ ಜವಾಬ್ದಾರಿ ಎಲ್ಲರದಾಗಬೇಕು. ಸ್ಪಷ್ಟವಾಗಿ ಓದುವ, ಓದಿದ್ದನ್ನು ಬರೆಯುವ ಸಾಮರ್ಥ್ಯವನ್ನು ಕಲಿಸದ ಶಿಕ್ಷಣದ ಅಗತ್ಯವೇನು. ಕನ್ನಡ ಪಾಠವನ್ನು ರಸವತ್ತಾಗಿ ಹೇಳಿ ಕೊಡದಿದ್ದರೆ ಕಥೆ, ಕವನ, ಪ್ರಬಂಧ, ಪ್ರವಾಸ ಸಾಹಿತ್ಯದ ಮಹತ್ವ ಅರ್ಥ ಮಾಡಿಸದಿದ್ದರೆ ನಿಮ್ಮ ನೂರಕ್ಕೆ ನೂರು ಫಲಿತಾಂಶಕ್ಕೆ ಅರ್ಥ ಬರುವುದೇ ಎಂದು ವ್ಯವಸ್ಥೆಯನ್ನು ಪ್ರಶ್ನೆ ಮಾಡಿದವರು.
ವಿದ್ಯಾರ್ಥಿಗಳು ಭಾಷಾ ಕಲಿಕೆಯಲ್ಲಿ ನಿರ್ಲಕ್ಷ್ಯ ತೋರಿಸುತ್ತಿರುವುದನ್ನು ನೋಡುತ್ತಿದ್ದೇವೆ. ಓದುವುದನ್ನು, ಬರೆಯುವುದನ್ನು ಕಲಿಸದೆ ಫಲಿತಾಂಶಕ್ಕೆ ಒತ್ತುಕೊಡುವ ಶಿಕ್ಷಣ ವ್ಯವಸ್ಥೆ ಮಕ್ಕಳಿಗೆ ಅನ್ಯಾಯ ಮಾಡುತ್ತಿದೆ. ನೀವು ಹಾಗಾಗಬೇಡಿ ಎಂದು ವಿವರಿಸಿದರು.
ರಂಗಕರ್ಮಿ ಡಾ.ಜಿ.ಆರ್. ಲವ ಮಾತನಾಡಿ, ಕಥಾ ಸಾಹಿತ್ಯದ ಮಹತ್ವವನ್ನು ಅಸ್ವಾದಿಸುವ ಬಗೆಯನ್ನು ಕಲಿಯಿರಿ. ಇದರಿಂದ ನೀವು ಬರೆಯುವುದಕ್ಕೆ ಸಾಧ್ಯವಾಗಲಿದ್ದು, ಸಾಹಿತ್ಯದ ಬರವಣಿಗೆ ಪ್ರಯತ್ನ ಮಾಡಿ ಎಂದು ವಿವರಿಸಿ ಮಾರ್ಗದರ್ಶನ ನೀಡಿದರು.
 ಪ್ರಬಂಧ ಸಾಹಿತ್ಯ ಕುರಿತು ಸಾಹಿತಿಗಳಾದ ಡಿ.ಎಚ್. ಸೂರ್ಯಪ್ರಕಾಶ್ ಉಪನ್ಯಾಸ ನೀಡಿದರು. ಮುಖ್ಯ ಶಿಕ್ಷಕರಾದ ವೆಂಕಟೇಶ್ ಡಿ.ಎಂ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಕಸಾಪ ತಾಲ್ಲೂಕು ಅಧ್ಯಕ್ಷರಾದ ಮಹಾದೇವಿ, ಶಿಕ್ಷಕರಾದ ಚಂದ್ರೇಗೌಡರು, ಕಸಾಸಾಂ ವೇದಿಕೆ ಪ್ರಧಾನ ಕಾರ್ಯದರ್ಶಿ ಕೆ. ಎಸ್. ಮಂಜಪ್ಪ, ಕಸಾಪ ಕಾರ್ಯದರ್ಶಿ ಡಿ. ಗಣೇಶ್, ತಾಲ್ಲೂಕು ಕಾರ್ಯದರ್ಶಿ ಅನುರಾಧ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ತಮಗಿಷ್ಟವಾದ ಪ್ರಕಾರಗಳಲ್ಲಿ ಬರೆಯಲು ಸಮಯ ನೀಡಲಾಯಿತು. ನಂತರ ಅವುಗಳ ಮೌಲ್ಯಮಾಪನ ಮಾಡಿ ತಪ್ಪಿದ್ದರೆ ಅವರಿಂದಲೇ ತಿದ್ದಿಸಿ ಮಾರ್ಗದರ್ಶನ ಮಾಡಲಾಯಿತು. ಇಡೀ ತಂಡ ಬೆಳಗಿನಿಂದ ಸಂಜೆ ವರೆಗೆ ಕಮ್ಮಟದಲ್ಲಿದ್ದು ಯಶಸ್ವಿಗೊಳಿಸಲಾಯಿತು. ಸಿದ್ದಾರ್ಥ ಪ್ರಾರ್ಥಿಸಿ, ಶಿಕ್ಷಕರಾದ ಸಂತೋಷ ಸ್ವಾಗತಿಸಿ, ವೆಂಕಟೇಶ್ವರಲು ವಂದಿಸಿದರು.

Related posts

ಅನಿವಾಸಿ ಭಾರತೀಯ ಕೋಶ ಉಪಾಧ್ಯಕ್ಷರಾಗಿ ಡಾ. ಆರತಿ ಕೃಷ್ಣ ನೇಮಕ

ರಾಜ್ಯದಲ್ಲಿ 2028ಕ್ಕೆ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ- ಡಿಸಿಎಂ ಡಿಕೆ ಶಿವಕುಮಾರ್ .

ಕಟೀಲ್ : ವಿಶ್ವ ಬಂಟರ ಸಾಂಸ್ಕೃತಿಕ ವೈಭವದ ಕರಪತ್ರ ಬಿಡುಗಡೆ: ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಸಮಾಜಮುಖಿ ಕೆಲಸ: ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣ…..