ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

 ಕಾವೇರಿ ನೀರಿಗೆ  ಮತ್ತೆ ಖ್ಯಾತೆ ತೆಗೆದ ತಮಿಳುನಾಡು:  ಪ್ರತಿನಿತ್ಯ 12,500 ಕ್ಯೂಸೆಕ್ ನೀರು ಹರಿಸುವಂತೆ CWRC ಸಭೆಯಲ್ಲಿ  ಬೇಡಿಕೆ

ನವದೆಹಲಿ: ಕಾವೇರಿ ನದಿ ನೀರು ವಿಚಾರದಲ್ಲಿ ಪದೇ ಪದೇ ಕ್ಯಾತೆ ತೆಗೆಯುತ್ತಿಲೇ ಇರುವ ತಮಿಳುನಾಡು ಇದೀಗ ಮತ್ತೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ ಸಭೆಯಲ್ಲಿ ಬೇಡಿಕೆ ಇಟ್ಟಿದೆ.

ಕಾವೇರಿ ನೀರು ಹರಿಸಲು ಸಮಿತಿ ನೀಡಿದ್ದ ಆದೇಶದ ಅವಧಿ  ಮುಕ್ತಾಯವಾದ ಹಿನ್ನೆಲೆ  ಇಂದು ಸಭೆ ನಡೆಯುತ್ತಿದೆ. ಸಭೆಯಲ್ಲಿ ವಾದ ಮಂಡಿಸಿರುವ ತಮಿಳುನಾಡು, 15 ದಿನಗಳ ಕಾಲ ಪ್ರತಿ ದಿನ12,500 ಕ್ಯೂಸೆಕ್  ಹರಿಸಬೇಕು ಎಂದು ಬೇಡಿಕೆ ಇಟ್ಟಿದೆ.

ಜೂನ್ ನಿಂದ ಸೆಪ್ಟಂಬರ್ ವರೆಗೆ ಕರ್ನಾಟಕ 123 ಟಿಎಂಸಿ ನೀರು ಹರಿಸಬೇಕು. ಆದರೆ ಈವರೆಗೆ  40ಟಿಎಂಸಿ ನೀರು ಹರಿಸಿದೆ ಬಾಕಿ 83 ಟಿಎಂಸಿ ನೀರು ಕೂಡಲೇ ಬಿಡುಗಡೆ  ಮಾಡಲು ಆದೇಶಿಸಬೇಕು. ಯಾವುದೇ ಕಾರಣಕ್ಕೂ ನೀರಿನ ಪ್ರಮಾಣ ಕಡಿಮೆ ಮಾಡಬಾರದು ಎಂದು ಬೇಡಿಕೆ ಇಟ್ಟಿದೆ.

Related posts

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಬಲ ಭೂಕಂಪ.

ಚಂದ್ರಯಾನ- 3: ತನ್ನ ಕಾರ್ಯಯೋಜನೆ ಪೂರ್ಣಗೊಳಿಸಿದ ರೋವರ್

ನೆಹರೂ ಕ್ರೀಡಾಂಗಣದಲ್ಲಿ  ದೈಹಿಕ ಶಿಕ್ಷಣ ಶಿಕ್ಷಕರಿಗೆ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿ