ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆ ಶಾಕ್ : ಟೊಮ್ಯಾಟೊ ಆಯ್ತು ಈಗ ಬೇಳೆಕಾಳುಗಳ ದರ ಹೆಚ್ಚಳ..

ಬೆಂಗಳೂರು,: ಇತ್ತೀಚೆಗೆ ಕೆಂಪು ಸುಂದರಿ ಟೊಮೆಟೊ ಬೆಲೆ ದಿಢೀರ್ ಏರಿಕೆಯಾಗಿ ಗ್ರಾಹಕರ ಜೇಬಿಗೆ ಬರೆ ಹಾಕಿತ್ತು. ಕೆ.ಜಿಗೆ 200ರಿಂದ 250 ರೂ.ವರೆಗೂ ಟೊಮ್ಯೋಟೊ ದರ ಏರಿಕೆಯಾಗಿತ್ತು. ಇದೀಗ  ಟೊಮ್ಯಾಟೋ ದರ ಇಳಿಕೆಯಾದರೇ ಇತ್ತ ಬೇಳೆಕಾಳುಗಳ ದರ ಹೆಚ್ಚಳವಾಗಿದೆ.

ಅಕ್ಕಿ, ಹಾಲು, ಮೊಸರು, ಈರುಳ್ಳಿ ಸೇರಿದಂತೆ ದೈನಂದಿನ ಜೀವನಕ್ಕೆ ಬೇಕಾದ ವಸ್ತುಗಳ ಬೆಲೆ ಏರಿಕೆಯ ಸಂಕಷ್ಟ ಅನುಭವಿಸುತ್ತಿರುವ ಗ್ರಾಹಕರಿಗೆ ಈಗ ಬೇಳೆಕಾಳುಗಳ ದರ ಕೂಡ ಗಗನಕ್ಕೇರಿದ್ದು ಸೆಪ್ಟೆಂಬರ್ ತಿಂಗಳಲ್ಲಿ ದ್ವಿಶತಕ ಬಾರಿಸಲಿದೆ ಎನ್ನಲಾಗುತ್ತಿದೆ. ಮಳೆ ಕೊರತೆ, ಸಪ್ಲೈ ಇಲ್ಲದ ಕಾರಣ ಬೇಳೆಕಾಳುಗಳ ಬೆಲೆಯಲ್ಲಿ ಬಾರಿ ಏರಿಕೆಯಾಗಿದೆ.

ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಗುಜರಾತ್ ನಿಂದ ರಾಜ್ಯಕ್ಕೆ ಸರಿಯಾಗಿ ಬೇಳೆಕಾಳುಗಳು ಸಪ್ಲೈ ಆಗುತ್ತಿಲ್ಲ. ಇನ್ನು ಸಪ್ಲೈ ಆಗಿರುವ ಕಾಳುಗಳನ್ನು ದೊಡ್ಡ ದೊಡ್ಡ ಆನ್ಲೈನ್ ಟ್ರೇಡಿಂಗ್ ಕಂಪನಿಗಳು ಸಾವಿರಾರು ಟನ್ಗಳಷ್ಟು ಗೋಡೌನ್ಗಳಲ್ಲಿ ಅಕ್ರಮವಾಗಿ ಸ್ಟಾಕ್ ಇಟ್ಟಿರುವ ಪರಿಣಾಮ ಬೇಳೆಕಾಳುಗಳ ಮೇಲೆ ವಿಪರೀತವಾಗಿ ಏರಿಕೆ ಕಾಣುತ್ತಿದೆ.

ಸೆಪ್ಟೆಂಬರ್ ವೇಳೆಗೆ ಬೇಳೆಕಾಳುಗಳ ದರ 200 ರೂಪಾಯಿ ಗಡಿದಾಟಲಿದೆ. ನಮ್ಮ ದೇಶದಿಂದ ಬೇರೆ ಬೇರೆ ದೇಶಗಳಿಗೆ ಹೆಚ್ಚಾಗಿ ಬೇಳೆಕಾಳುಗಳು ರಫ್ತಾಗುತ್ತಿರುವ ಕಾರಣ ಬೇಳೆಕಾಳುಗಳು ಅಗತ್ಯಕ್ಕೆ ಬೇಕಾಗುವಷ್ಟು ಇಲ್ಲ. ಹಿಂದಿನ ವಾರ ಕೆಜಿ 160 ರೂಪಾಯಿ ಇದ್ದ ತೊಗರಿ ಬೇಳೆ ಈ ವಾರ ಕೆಜಿ 170 ರೂಪಾಯಿ ಆಗಿದೆ. ಹೋಲ್ ಸೇಲ್ ನಲ್ಲಿ ರೀಟೆಲ್ ದರ- ಕೆಜಿ 180 ರುಪಾಯಿ ಆಗಿದ್ದು ಸೆಪ್ಟೆಂಬರ್ನಲ್ಲಿ 200 ರೂಪಾಯಿ ಆಗಲಿದೆ.

ಬೇಳೆಕಾಳುಗಳ ದರ ಹೀಗಿದೆ ನೋಡಿ

ಕಳೆದ ವಾರ ಉದ್ದಿನ ಬೇಳೆ -100 ರೂಪಾಯಿ ಇತ್ತು. ಈ ವಾರ ಹೋಲ್ ಸೇಲ್ ನಲ್ಲಿ -150 ರೂ, ರೀಟೇಲ್ ದರ -160 ರೂ ಆಗಿದೆ.

ಕಡಲೆ ಬೆಳೆ ಕಳೆದ ವಾರ -70 ರೂ ಇತ್ತು. ಈ ವಾರ ಹೋಲ್ ಸೇಲ್ ನಲ್ಲಿ -80 ರೂ ಆಗಿದ್ರೆ, ರೀಟೇಲ್ ದರ -90 ರೂ ಆಗಿದೆ. ಬರುವ ತಿಂಗಳು 100 ರೂ ಆಗಲಿದೆ.

ಕಡಲೆ ಕಾಳು ಕಳೆದ ವಾರ -70 ರೂ ಇತ್ತು. ಈ ವಾರ ಹೋಲ್ ಸೇಲ್ – 80 ರೂ ಇದ್ದು, ರೀಟೇಲ್ ದರ -90ರೂ ಇದೆ.

ಹೆಸರು ಬೇಳೆ ಕಳೆದ ವಾರ -100 ರೂ ಇತ್ತು. ಈ ವಾರ 110 ರೂ ಆಗಿದ್ದು, ರೀಟೇಲ್ ನಲ್ಲಿ 120 ರೂ ಆಗಿದೆ.

ಹೆಸರುಕಾಳು ಕಳೆದ ವಾರ 100 ರೂ ಇತ್ತು. ಈ ವಾರ 125 ರೂ ಆಗಿದ್ದು, ರೀಟೇಲ್ ನಲ್ಲಿ 130 ರೂ ಆಗಿದೆ.

ಕಾಬುಲ್ ಕಾಳು ಕಳೆದ ವಾರ -110ರೂ ಇತ್ತು. ಈ ವಾರ -170 ರೂ, ರೀಟೇಲ್ ನಲ್ಲಿ -190 ರೂ.

ಹಲ್ಸಂದಿ ಕಾಳು ಕಳೆದ ವಾರ – 100 ರೂ ಇತ್ತು. ಈ ವಾರ -110 ರೂ ಆಗಿದೆ. ರೀಟೇಲ್ ನಲ್ಲಿ -120 ರೂ.

ಅವರೆ ಬೇಳೆ ಕಳೆದ ವಾರ – 160 ರೂ ಇತ್ತು. ಈ ವಾರ 185 ರೂ ಇದ್ದು, ರೀಟೇಲ್ ನಲ್ಲಿ -200 ರೂಗೆ ಮಾರಾಟವಾಗ್ತಿದೆ.

ಅವರೆ ಕಾಳು ಕಳೆದ ವಾರ -140 ರೂ ಇತ್ತು. ಈ ವಾರ 155 ರೂಗೆ ಮಾರಾಟವಾಗ್ತಿದ್ರೆ, ರೀಟೇಲ್ ನಲ್ಲಿ -170 ರೂ ಇದೆ.

ಕಳೆದ ವಾರ ಉದ್ದಿನ ಕಾಳು -100 ರೂ ಇತ್ತು. ಈ ವಾರ 155 ರೂ ಆಗಿದ್ದು ರೀಟೇಲ್ ನಲ್ಲಿ 180 ರೂ ಇದೆ.

ಗೋದಿ ಕಳೆದ ವಾರ -30 ರೂ ಇತ್ತು. ಈ ವಾರ -36 ರೂ ಇದೆ, ರೀಟೇಲ್ ನಲ್ಲಿ -45 ರೂಗೆ ಮಾರಾಟವಾಗ್ತಿದೆ.

 

Related posts

ನಾನು ಭ್ರಷ್ಟನಲ್ಲ,ಲಂಚ ಸ್ವೀಕರಿಸುವುದಿಲ್ಲ- ಬೋರ್ಡ್ ಹಾಕಿಕೊಂಡ ಸರ್ಕಾರಿ ಅಧಿಕಾರಿ

ಮುಕ್ಕೋಟಿ ಚೆಲ್ಲಿತಲೇ ಕಲ್ಯಾಣ ಕಟ್ಟಿತಲೇ ಪರಾಕ್’: ದೇವರ ಗುಡ್ಡದಲ್ಲಿ ವರ್ಷದ ‘ಭವಿಷ್ಯವಾಣಿ’ ಕಾರಣಿಕ

ಕಾಗೋಡು ತಿಮ್ಮಪ್ಪನವರಿಗೆ ದೇವರಾಜ ಅರಸು ಪ್ರಶಸ್ತಿ: ಸಿಹಿ ಹಂಚಿ ಸಂಭ್ರಮ.