ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳು

ಅಮೆರಿಕದಲ್ಲಿ 6 ವರ್ಷಗಳಲ್ಲಿ 500 ದೇಗುಲಗಳ ನಿರ್ಮಾಣ.

ಅಮೆರಿಕಾ: ಆಮೆರಿಕದಲ್ಲಿ ಹಿಂದು ಸನಾತನ ಸಂಸ್ಕೃತಿಯ ಆರಾಧನೆ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತ ಹೊರಟಿದೆ. ಹೌದು, ಅಮೆರಿಕದಲ್ಲಿ ಕಳೆದ  6 ವರ್ಷಗಳಲ್ಲಿ 500 ದೇಗುಲಗಳ ನಿರ್ಮಾಣವಾಗಿದೆ.

2006ರಲ್ಲಿ ಇಡೀ ಅಮೆರಿಕದಲ್ಲಿ 53 ಮಂದಿರಗಳಿದ್ದವು. 2016ರಲ್ಲಿ ಈ ಸಂಖ್ಯೆ 250ಕ್ಕೆ ಏರಿಕೆಯಾಯಿತು ಮತ್ತು ಪ್ರಸ್ತುತ (2023ರಲ್ಲಿ) 750 ಮಂದಿರಗಳಿದ್ದು, ಕಳೆದ ಆರು ವರ್ಷಗಳಲ್ಲೇ 500 ದೇವಸ್ಥಾನಗಳು ನಿರ್ಮಾಣಗೊಂಡಿರುವುದು, ಅನಿವಾಸಿ ಭಾರತೀಯರ ಭಕ್ತಿ ಪರಂಪರೆಗೆ ಸಾಕ್ಷಿಯಾಗಿದೆ.

ಕ್ಯಾಲಿಫೋರ್ನಿಯಾ ಒಂದರಲ್ಲೇ 120 ಮಂದಿರಗಳಿವೆ. ನ್ಯೂಯಾರ್ಕ್ ನಲ್ಲಿ 100, ಫ್ಲೋರಿಡಾದಲ್ಲಿ 60, ಜಾರ್ಜಿಯಾದಲ್ಲಿ 30 ದೇವಸ್ಥಾನಗಳಿವೆ. ಭಾರತೀಯರು ತಮ್ಮ ಸಂಸ್ಕೃತಿಯೊಂದಿಗೆ ಬೆರೆಯಲು ಮತ್ತು ಈ ಸಂಸ್ಕೃತಿಯ ಶಕ್ತಿಯನ್ನು ಮುಂದಿನ ಪೀಳಿಗೆಗೆ ತಿಳಿಸಲು ಅಮೆರಿಕದ ಪ್ರತಿ ರಾಜ್ಯದಲ್ಲೂ ಮಂದಿರಗಳನ್ನು ನಿರ್ವಿುಸಿದ್ದಾರೆ. ಉದಾಹರಣೆಗೆ, ಟೆನೆಸಿ ರಾಜ್ಯದ ಚಟ್ನುಗಾ ನಗರದಲ್ಲಿ ಭಾರತೀಯ ಮೂಲದವರ ಸಂಖ್ಯೆ 1 ಸಾವಿರ. ಇವರು ಇತ್ತೀಚೆಗೆ, 56 ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನ ನಿರ್ವಿುಸಿದ್ದಾರೆ.

ದೇಗುಲಗಳ ನಿರ್ಮಾಣಕ್ಕಾಗಿ ಅನಿವಾಸಿ ಭಾರತೀಯರು ದೊಡ್ಡ ಪ್ರಮಾಣದಲ್ಲಿ ದಾನ ನೀಡುತ್ತಿದ್ದಾರೆ. ಫ್ಲೋರಿಡಾದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಆಗಿರುವ ರಕ್ಷಿತ್ ಶಾ, ಮಂದಿರಗಳ ಜೀಣೋದ್ಧಾರಕ್ಕೆ 8 ಕೋಟಿ ರೂ.ಗಳ ನೆರವು ನೀಡಿದ್ದಾರೆ. ಇದಲ್ಲದೆ, ಓಹಿಯೋ ನಗರದಲ್ಲಿ ಮಂದಿರ ನಿರ್ವಣಕ್ಕೆ 15 ಕೋಟಿ ರೂ. ನೀಡಿದ್ದಾರೆ.

ಭಾರತೀಯ ಯೋಗಕ್ಕೆ ಅಮೆರಿಕದಲ್ಲಿ ಭಾರಿ ಬೇಡಿಕೆ ಇದೆ. ಒತ್ತಡದ ಜೀವನಶೈಲಿ, ಖಿನ್ನತೆ ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವ ಅಮೆರಿಕನ್ನರು ಇದರಿಂದ ಹೊರಬರಲು ಯೋಗ, ಧ್ಯಾನದ ಮೊರೆ ಹೋಗುತ್ತಿದ್ದಾರೆ. ಆದ್ದರಿಂದ, ಮಹಾನಗರಗಳಲ್ಲಿ ಯೋಗ ತರಗತಿಗಳ ಸಂಖ್ಯೆ ಹೆಚ್ಚಿದೆ. ಯೋಗ ಕಲಿಸುವ ಕಾಲೇಜು, ಸಂಸ್ಥೆಗಳೂ ಹುಟ್ಟಿಕೊಂಡಿವೆ. ಬೇಸಿಗೆಯಲ್ಲಿ ಯೋಗದ ವಿಶೇಷ ಶಿಬಿರ, ತರಗತಿಗಳನ್ನು ಆಯೋಜಿಸಲಾಗುತ್ತಿದೆ. ಸಂಸ್ಕೃತವನ್ನು ಅನಿವಾಸಿ ಭಾರತೀಯರು ಮಾತ್ರವಲ್ಲದೆ ಅಮೆರಿಕನ್ನರು ಆಸಕ್ತಿಯಿಂದ  ಕಲಿಯುತ್ತಿದ್ದಾರೆ. ಹಿಂದು ಯುನಿವರ್ಸಿಟಿ ಆಫ್ ಅಮೆರಿಕ ಎಂದೇ ಕರೆಯಲ್ಪಡುವ International Vedic Hindu Universityಯನ್ನು ಫ್ಲೋರಿಡಾ ಪ್ರಾಂತ್ಯದಲ್ಲಿ 1993ರಲ್ಲಿ ಪ್ರಾರಂಭಿಸಲಾಗಿದೆ.

ನ್ಯೂಜೆರ್ಸಿಯಲ್ಲಿ ಅತಿ ದೊಡ್ಡ ಮಂದಿರ

ಭಾರತದಿಂದ ಹೊರಗಿರುವ ಅತಿ ದೊಡ್ಡ ಹಿಂದು ಮಂದಿರ ನ್ಯೂಜೆರ್ಸಿಯ ಲಿಟಲ್ ರಾಬಿನ್ಸ್ವಿಲ್ಲೆಯಲ್ಲಿ ನಿರ್ವಣಗೊಂಡಿದೆ. 183 ಎಕರೆಯಲ್ಲಿ, 850 ಕೋಟಿ ರೂ. ವೆಚ್ಚದಲ್ಲಿ ಸ್ವಾಮಿನಾರಾಯಣ ಅಕ್ಷರಧಾಮ ಮಂದಿರವನ್ನು ನಿರ್ವಿುಸಲಾಗಿದ್ದು, ಇದೇ ಅಕ್ಟೋಬರ್ 8ರಂದು ಉದ್ಘಾಟನೆಗೊಂಡಿದೆ. 2011ರಿಂದ ಆರಂಭವಾದ ಈ ದೇಗುಲದ ಕಾಮಗಾರಿ, 12 ವರ್ಷದಲ್ಲಿ ಪೂರ್ಣಗೊಂಡಿದ್ದು, 12,500 ಸ್ವಯಂಸೇವಕರು ನೆರವು ನೀಡಿದ್ದಾರೆ. ಪ್ರಾಚೀನ ಭಾರತ ಸಂಸ್ಕೃತಿಯ 10 ಸಾವಿರ ವಿಗ್ರಹಗಳ ರಚನೆಗಳನ್ನು ಇದರಲ್ಲಿ ಕೆತ್ತಲಾಗಿದೆ. ಪ್ರಾಚೀನ ಹಿಂದು ಧರ್ಮಗ್ರಂಥಗಳ ಆಧಾರದ ಮೇಲೆ ದೇಗುಲ ನಿರ್ವಣಗೊಂಡಿದ್ದು, ಪ್ರತಿನಿತ್ಯ ಸಾವಿರಾರು ಜನರು ಭೇಟಿ ನೀಡುತ್ತಿದ್ದಾರೆ.

 

Related posts

ಶಾಲೆಯ ಬಹುಗ್ರಾಮ ಕುಡಿಯುವ ನೀರಿಗಾಗಿ ಸಂಗ್ರಹಿಸಿಟ್ಟಿದ್ದ ಪೈಪ್‍ ಕಳ್ಳತನ: ಆರೋಪಿ ಬಂಧನ.

ಶಿವಮೊಗ್ಗ ಜಿಲ್ಲಾದ್ಯಂತ ಸಂಭ್ರಮದಿಂದ ನಾಗರ ಪಂಚಮಿ ಆಚರಣೆ.

ದುರಂತ ಅಂತ್ಯ:  ಬಣ್ಣ ಬೆರೆಸುವ ಪೇಂಟ್ ಮಿಕ್ಸರ್ ​ಗೆ ಕೂದಲು ಸಿಲುಕಿ ಮಹಿಳೆ ಸಾವು.