ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯ

ಮಹಿಳಾ ಮೀಸಲಾತಿ ಬಿಲ್ ಗೆ ಕಾಂಗ್ರೆಸ್ ಬೆಂಬಲ -ಲೋಕಸಭೆಯಲ್ಲಿ ಸೋನಿಯಾ ಗಾಂಧಿ ಮಾತು.

ನವದೆಹಲಿ:  ಮಹಿಳಾ ಮೀಸಲಾತಿ  ಮಸೂದೆಗೆ ಕಾಂಗ್ರೆಸ್ ಬೆಂಬಲ ಇದೆ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹೇಳಿದ್ದಾರೆ.

ಲೋಕಸಭೆಯಲ್ಲಿ ಇಂದು ಮಹಿಳಾ ಮೀಸಲಾತಿ ಮಸೂದೆ ಮೇಲಿನ ಚರ್ಚೆ ಪ್ರಾರಂಭವಾಗಿದ್ದು, ಈ ವೇಳೆ ಮಾತನಾಡಿದ ಸೋನಿಯಾ ಗಾಂಧಿ ಅವರು, “ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪರವಾಗಿ, ನಾನು ನಾರಿ ಶಕ್ತಿ ವಂದನ್ ಅಧಿನಿಯಮ್ 2023 ರ ಬೆಂಬಲಕ್ಕೆ ನಿಂತಿದ್ದೇನೆ. ಇದರಿಂದ ಒಬಿಸಿ, ಎಸ್ ಸಿ, ಎಸ್ಟಿ ಮಹಿಳೆಯರಿಗೆ  ನ್ಯಾಯ ಸಿಗಲಿದೆ ಎಂದರು.

ರಾಜೀವ್ ಗಾಂಧಿ ಕಂಡಿದ್ದ ಕನಸು ಪೂರ್ಣಗೊಂಡಿದೆ. ಈ ಬಿಲ್ ಗಾಗಿ 13 ವರ್ಷಗಳಿಂದ ಮಹಿಳೆಯರು ಕಾಯುತ್ತಿದ್ದರು. ಎಸ್‌ಸಿ, ಎಸ್‌ಟಿ, ಒಬಿಸಿಗಳಿಗೆ ಉಪ ಕೋಟಾದೊಂದಿಗೆ ಮಹಿಳಾ ಕೋಟಾ ಮಸೂದೆಯನ್ನು ಕೂಡಲೇ ಜಾರಿಗೊಳಿಸಬೇಕು ಎಂದರು. ಹಾಗೆಯೇ  ಕೂಡಲೇ ಕೇಂದ್ರ ಸರ್ಕಾರ ಜನಗಣತಿ ಆರಂಭಿಸಬೇಕು ಎಂದು ಸೋನಿಯಾ ಗಾಂಧಿ ಆಗ್ರಹಿಸಿದರು.

Related posts

ಕನ್ನಡದ ಬಳಕೆಯಿಂದ ಮಾತ್ರ ಉಳಿಯಲು ಸಾಧ್ಯ : ಎಸ್.ಎನ್.ನಾಗರಾಜ

ರಾಜ್ಯದಲ್ಲಿ ಬರಗಾಲ: ಕೇಂದ್ರ ಸರ್ಕಾರ ನೆರವಿಗೆ ಬರುವಂತೆ ಆಗ್ರಹ.

ಕ್ರೀಡೆಯಿಂದ ದೇಹದ ಆರೋಗ್ಯದ ಜೊತೆ ದೇಶದ ಆರೋಗ್ಯವೂ ಉತ್ತಮವಾಗುತ್ತದೆ-ಶ್ರೀ ಪ್ರಸನ್ನನಾಥ ಸ್ವಾಮೀಜಿ