ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯ

ಚಾಕೊಲೇಟ್ ತಯಾರಿಕಾ ಫ್ಯಾಕ್ಟರಿ ಭೇಟಿ: ಖುದ್ಧು ತಾವೇ ಚಾಕೊಲೇಟ್ ತಯಾರಿಸಿ ಸವಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ.

ಊಟಿ: ಮುಂದಿನ ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಅವರು ದೇಶದ ವಿವಿಧ ಕಡೆಗಳಿಗೆ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಈ ಊಟಿಯಲ್ಲಿನ ಚಾಕೊಲೇಟ್ ತಯಾರಿಕಾ ಫ್ಯಾಕ್ಟರಿಯೊಂದಕ್ಕೆ ಭೇಟಿ ನೀಡಿ, ಖುದ್ದು ತಾವೇ ಚಾಕೊಲೇಟ್ ತಯಾರಿಸಿ, ಸವಿದಿದ್ದಾರೆ.

ತಮಿಳುನಾಡಿನ ಊಟಿಯ ಪ್ರಸಿದ್ಧ ಚಾಕೊಲೇಟ್ ತಯಾರಿಕಾ ಕಾರ್ಖಾನೆಗೆ  ರಾಹುಲ್ ಗಾಂಧಿ ಭೇಟಿ ನೀಡಿದರು. ಇದು 70 ಮಂದಿ ಮಹಿಳೆಯರ ತಂಡವೇ ನಡೆಸುತ್ತಿರುವ ಕಾರ್ಖಾನೆಯಾಗಿದೆ. ವಯನಾಡ್ಗೆ ತೆರಳುವ ಮಾರ್ಗ ಮಧ್ಯದಲ್ಲಿಯೇ ಮುರುಳೀಧರ್ ರಾವ್ ಹಾಗೂ ಸ್ವಾತಿ ದಂಪತಿ ಆರಂಭಿಸಿರುವ ಊಟಿಯಲ್ಲಿನ ಸಣ್ಣ ಚಾಕೊಲೇಟ್ ಫ್ಯಾಕ್ಟರಿಗೆ ಭೇಟಿ ನೀಡಿದ ರಾಹುಲ್ ಗಾಂಧಿ  ಚಾಕೊಲೇಟ್ ತಯಾರಿಸುವುದು ಹೇಗೆ ಎಂದು ನೋಡಿ, ಸ್ವತಃ ತಾವೂ ತಯಾರಿಸಿ, ಸವಿದಿದ್ದಾರೆ.

ಈ ಕುರಿತ ವಿಡಿಯೋವೊಂದನ್ನು ರಾಹುಲ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಮೋಡಿಸ್ ಚಾಕೊಲೇಟ್ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಕ್ಕೆ ದೊಡ್ಡ ಸಾಕ್ಷಿಯಾಗಿದೆ ಎಂದಿದ್ದಾರೆ. ಭಾರತೀಯ ಆರ್ಥಿಕತೆಗೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್ಎಂಇ) ಕೊಡುಗೆಯನ್ನು ಶ್ಲಾಘಿಸಿದ್ದಾರೆ.

ಏಳು ನಿಮಿಷಗಳ ವಿಡಿಯೋದಲ್ಲಿ ರಾಹುಲ್ ಕೂಡಾ ಬೇಕರ್ ಆಗಿ ಬದಲಾಗಿದ್ದು, ಮಹಿಳಾ ಕಾರ್ಮಿಕರೊಂದಿಗೆ ಚರ್ಚಿಸುತ್ತಾ ತಮಿಳು ಕಲಿಯಲು ಪ್ರಯತ್ನಿಸಿದ್ದಾರೆ. ಮಹಿಳಾ ಕಾರ್ಮಿಕರಿಂದ ಮೋಡಿಸ್ ಚಾಕೊಲೇಟ್ ತಯಾರಿಸುವ ಬಗ್ಗೆ ಮಾಹಿತಿ ಪಡೆದಿದ್ದಾರೆ.

 

Related posts

ಪ್ರಧಾನಿ ಮೋದಿ ನಂತರ ಉತ್ತರಾಧಿಕಾರಿ ಯಾರು..? ಸಮೀಕ್ಷೆಯಿಂದ ಹೊರಬಿತ್ತು ಜನರ ಇಂಗಿತ..

ಕರ್ನಾಟಕ ಬಂದ್ ಅವಶ್ಯಕತೆ ಇರಲಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್

ದಿ:ಬಂಗಾರಪ್ಪನವರ 90ನೇ ಹುಟ್ಟುಹಬ್ಬ ವಿಶೇಷ ಲೇಖನ: ಬಡವರನ್ನು ಕಂಡರೆ ಅವರ ಮನ ಮಿಡಿಯುತ್ತಿತ್ತು….