ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯ

ಅಜ್ಜಿ ಇಂದಿರಾ ಗಾಂಧಿಯಂತೆ ಕಾಣುವುದರಿಂದ ನನ್ನನ್ನು ನೋಡಲು ಜನ ಬರುತ್ತಿದ್ದಾರೆ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ

ಮಧ್ಯಪ್ರದೇಶ: ಅಜ್ಜಿ ಇಂದಿರಾ ಗಾಂಧಿಯಂತೆ ನಾನು ಕಾಣುವುದರಿಂದ ಜನರು ನನ್ನನ್ನು ನೋಡಲು ಬರುತ್ತಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.

ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಸಜ್ಜಾಗುತ್ತಿದೆ. ಈಗಾಗಲೇ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಸಿದ್ಧತೆ ಆರಂಭವಾಗಿದೆ. ಈ ನಡುವೆ ಮಧ್ಯಪ್ರದೇಶ ಮಾಂಡ್ಲಾದಲ್ಲಿ ಭಾವನಾತ್ಮಕ ಪ್ರಚಾರ ನಡೆಸಿದ ಪ್ರಿಯಾಂಕಾ ಗಾಂಧಿ, ತಮ್ಮ ಅಜ್ಜಿ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಹೋಲುತ್ತಿದ್ದು, ಈ ಕಾರಣದಿಂದ ಸತ್ಯ ಹೇಳುವ ಹಾಗೂ ಇಂದಿರಾ ಅವರ ಕೆಲಸಗಳನ್ನು ಮುಂದಕ್ಕೆ ಕೊಂಡೊಯ್ಯುವ ಅಪಾರ ಜವಾಬ್ದಾರಿಗಳು ತಮ್ಮ ಹೆಗಲ ಮೇಲೆ ಇದೆ ಎಂದು ಹೇಳಿಕೊಂಡರು.

ಬುಡಕಟ್ಟು ಪ್ರಾಬಲ್ಯವಿರುವ ಜಿಲ್ಲೆಯಲ್ಲಿ ಆಯೋಜಿಸಿದ್ದ ಜನ ಆಕ್ರೋಶ ರ್ಯಾಲಿಯಲ್ಲಿ ಮಾತನಾಡಿದ ಅವರು, “ನನಗೂ ಮುಂಚೆ ಕೆಲವು ಭಾಷಣಕಾರರು ನನ್ನ ‘ದಾದಿ’ ಬಗ್ಗೆ ಮಾತನಾಡಿದರು. ಆದರೆ ನೀವು ಅವರನ್ನು ‘ಇಂದಿರಾ ಮಾತೆ’ ಎಂದು ಕರೆದಿದ್ದಿರಿ. ಈ ಸಭೆಯಲ್ಲಿ ಸೇರಿರುವ ಹಿರಿಯರು ಅವರನ್ನು ನೆನಪಿಸಿಕೊಳ್ಳಬಹುದು. ನೀವು ನನ್ನ ಮಾತನ್ನು ಕೇಳಲು ಬಂದಿದ್ದೀರಿ. ನಾನು ಆಕೆಯ ಮೊಮ್ಮಗಳು ಮತ್ತು ನನ್ನ ಮುಖಚರ್ಯೆ ಅವರನ್ನು ಹೋಲುತ್ತದೆ. ಹೀಗಾಗಿ ನೀವು ನನ್ನನ್ನು ನೋಡಲು ಬಂದಿದ್ದೀರಿ” ಎಂದು ಹೇಳಿದರು.

ಆದರೆ, ಜನರು ಇಂದಿರಾ ಗಾಂಧಿ ಅವರ ಸಾಧನೆಗಳ ಕಾರಣಕ್ಕೆ ಅವರ ಮೇಲೆ ಜನಸಾಮಾನ್ಯರು ನಂಬಿಕೆ ಇರಿಸಿದ್ದರು ಎನ್ನುವುದು ಆಳವಾದ ಭಾವನೆಯಾಗಿದೆ ಎಂದರು. “ನೀವು ಆಕೆಯನ್ನು ಮುಂದಕ್ಕೆ ಕರೆದೊಯ್ದಿರಿ ಹಾಗೂ ಅವರು ನಿಮ್ಮನ್ನು ಮುಂದಕ್ಕೆ ಕರೆದೊಯ್ದಿದ್ದರು. ನಾಯಕರು ಹಾಗೂ ಜನಸಾಮಾನ್ಯರ ನಡುವೆ ಇರಬೇಕಾದ ಸಂಬಂಧ ಇದು” ಎಂದು ಪ್ರಿಯಾಂಕಾ ಹೇಳಿದರು.

 

Related posts

ಆಧಾರ್ ಲಿಂಕ್ ಮಾಡದ 11.5 ಕೋಟಿ ‘ಪ್ಯಾನ್ ಕಾರ್ಡ್’ ನಿಷ್ಕ್ರಿಯ..

ಮುಂದಿನ ಬಜೆಟ್ ನಲ್ಲಿ ಹಿರಿಯ ನಾಗರಿಕರಿಗೆ 2 ಸಾವಿರ ರೂ. ಮಾಶಾಸನ

ಕಾವ್ಯಕ್ಕೆ ಯಾವುದೇ ಕಟ್ಟಳೆಗಳು ಇರಬಾರದು-ಪತ್ರಕರ್ತ ಆರುಂಡಿ ಶ್ರೀನಿವಾಸಮೂರ್ತಿ