ಕನ್ನಡಿಗರ ಪ್ರಜಾನುಡಿ
ಕ್ರೈಮ್ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಅಪಾರ ಪ್ರಮಾಣದ ಹಾನಿ: ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್. ಸುಂದರೇಶ್ ಭೇಟಿ ಪರಿಶೀಲನೆ.

ಶಿವಮೊಗ್ಗ: ಲಷ್ಕರ್ ಮೊಹಲ್ಲಾದ ಏಲಕಪ್ಪನ ಕೇರಿಯ 3ನೇ ತಿರುವಿನಲ್ಲಿ ಜಾವಿದ್ ಎಂಬುವವರ ಮನೆಯಲ್ಲಿ ನಿನ್ನೆ ಸಂಜೆ ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಅಪಾರ ಪ್ರಮಾಣದ ಹಾನಿ ಉಂಟಾಗಿದ್ದು ಈ ಮನೆ ಶಫಿವುಲ್ಲಾ ಎಂಬುವರಿಗೆ ಸೇರಿದ್ದಾಗಿದೆ.
ಮನೆಯ ವಿದ್ಯುತ್ ಉಪಕರಣಗಳು ಸುಟ್ಟು ಭಸ್ಮವಾಗಿದ್ದು, ಮನೆಯ ಮೇಲ್ಛಾವಣಿ ಹಾಗೂ ಮನೆಯ ಎಲ್ಲಾ ವಸ್ತುಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿವೆ. ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್. ಸುಂದರೇಶ್, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಂ ಪಾಶಾ ಭೇಟಿ ನೀಡಿ ಸಂತ್ರಸ್ತರಿಗೆ ಸಮಾಧಾನ ಹೇಳಿ ಪಾಲಿಕೆ ಹಾಗೂ ಸರ್ಕಾರದ ವತಿಯಿಂದ ಪರಿಹಾರ ಕೊಡಿಸುವಲ್ಲಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪ್ರವೀಣ್‍ಕುಮಾರ್, ಶಫಿವುಲ್ಲಾ, ಜಾವೀದ್ ಮತ್ತಿತರು ಇದ್ದರು.

Related posts

: ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಮಹಿಳೆಯಿಂದ ಲಕ್ಷಾಂತರ ರೂ. ವಂಚನೆ.

RANK ಪಡೆದು ಸಾಧನೆ ಮಾಡಿದ ತನ್ನ ಪುತ್ರನಿಗೆ ಬಹುಮಾನ ವಿತರಿಸಿ ಸಂತಸಪಟ್ಟ ಶಿಕ್ಷಣ ಸಚಿವ ಮಧು ಬಂಗಾರಪ್ಪ.

ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ವೈದ್ಯರ ಮಾರ್ಗದರ್ಶನ ಅಗತ್ಯ-ಡಾ. ದಿನೇಶ್