ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ಜಿ 20 ಶೃಂಗಸಭೆಯನ್ನು ಕೇಂದ್ರ ಸರ್ಕಾರದಿಂದ ‘ಚುನಾವಣಾ ಪ್ರಚಾರಕ್ಕೆ ಬಳಕೆ- ಕಾಂಗ್ರೆಸ್ ಆರೋಪ.

ನವದೆಹಲಿ: ಮುಂದಿನ ಜಿ 20 ಶೃಂಗಸಭೆಯನ್ನು ಕೇಂದ್ರ ಸರ್ಕಾರ ‘ಚುನಾವಣಾ ಪ್ರಚಾರ’ಕ್ಕೆ ಬಳಸಿಕೊಳ್ಳುತ್ತಿದೆ ಮತ್ತು ಜನರ ಗಮನವನ್ನು ನೈಜ ಸಮಸ್ಯೆಗಳಿಂದ ಬೇರೆಡೆಗೆ ಸೆಳೆಯಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

G20 ನಾಯಕರ ಶೃಂಗಸಭೆಯು ಸೆಪ್ಟೆಂಬರ್ 9-10 ರಂದು  ಭಾರತ್ ಮಂಟಪಂ ಇಂಟರ್ನ್ಯಾಷನಲ್ ಎಕ್ಸಿಬಿಷನ್-ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಲಿದೆ. “1999 ರಲ್ಲಿ G20 ರಚನೆಯಾಯಿತು. 19 ದೇಶಗಳು ಮತ್ತು ಯುರೋಪಿಯನ್ ಒಕ್ಕೂಟವು ಅದರ ಸದಸ್ಯರಾಗಿದ್ದಾರೆ. ಜಿ20 ರಚನೆಯಾದ ನಂತರ ಶೃಂಗಸಭೆಯು ಸರದಿಯಂತೆ ಇದುವರೆಗೆ 17 ದೇಶಗಳಲ್ಲಿ ನಡೆದಿದೆ.

ಈಗ ಭಾರತದ ಸರದಿ” ಎಂದು  ಟ್ವಿಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು,  ಈಗ ನಮ್ಮ ದೇಶದಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರ ಮತ್ತು ಜಿ 20 ಸುತ್ತಲೂ ಅಂತಹ ವಾತಾವರಣವನ್ನು ಸೃಷ್ಟಿಸುವ ಯಾವುದೇ ಪ್ರಯತ್ನಗಳು ಬೇರೆ ದೇಶದಲ್ಲಿ ನಡೆದಿಲ್ಲ. ವಾಸ್ತವವಾಗಿ, ಪ್ರಮುಖ ವಿಷಯಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಇದನ್ನು ಮಾಡಲಾಗುತ್ತಿದೆ ಎಂದು ರಮೇಶ್ ಹೇಳಿದ್ದಾರೆ.

ಭಾರತವು 1983 ರಲ್ಲಿ 100ಕ್ಕೂ ಹೆಚ್ಚು ದೇಶಗಳ ಅಲಿಪ್ತ ರಾಷ್ಟ್ರಗಳ ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದೆ ಮತ್ತು ಅದರ ನಂತರ ದೆಹಲಿಯಲ್ಲಿ ಕಾಮನ್ವೆಲ್ತ್ ರಾಷ್ಟ್ರಗಳ ಶೃಂಗಸಭೆಯನ್ನು ಆಯೋಜಿಸಿದೆ. ಆದರೆ ಅಂದಿನ ಸರ್ಕಾರ ಆ ಅವಕಾಶಗಳನ್ನು ಚುನಾವಣಾ ಲಾಭಕ್ಕಾಗಿ ಬಳಸಿಕೊಳ್ಳಲಿಲ್ಲ ಎಂದಿದ್ದಾರೆ. “ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರು ಏಪ್ರಿಲ್ 5, 2014 ರಂದು ನರೇಂದ್ರ ಮೋದಿಯವರನ್ನು ಮಹಾನ್ ಈವೆಂಟ್ ಮ್ಯಾನೇಜರ್ ಎಂದು ಬಣ್ಣಿಸಿದರು. ಈಗ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯಲು, ಪ್ರಧಾನಿ ಕೇವಲ ಈವೆಂಟ್ ಮ್ಯಾನೇಜ್ಮೆಂಟ್ ಮಾಡುತ್ತಿದ್ದಾರೆ” ಎಂದು ರಮೇಶ್  ಕಿಡಿಕಾರಿದ್ದಾರೆ.

 

Related posts

ರಾಜ್ಯಗಳಿಗೆ ಜಾತಿಗಣತಿ ನಡೆಸುವ ಅಧಿಕಾರ ಇಲ್ಲ- ಕೇಂದ್ರ ಸರ್ಕಾರ

ಆಮ್ ಆದ್ಮಿ ಪಕ್ಷದ ಹೆಸರು ದುರುಪಯೋಗಪಡಿಸಿ ಪಕ್ಷ ಒಡೆಯುತ್ತಿದ್ದಾರೆ- ಶಶಿಕುಮಾರ್ ಗೌಡ ಆರೋಪ

ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ: ಪಕ್ಷಬೇಧ ಮರೆತು ಶಿವಮೊಗ್ಗದ ಶಾಂತಿಗಾಗಿ ಸಹಕರಿಸಬೇಕು-ಸಚಿವ ಮಧು ಬಂಗಾರಪ್ಪ