ಕನ್ನಡಿಗರ ಪ್ರಜಾನುಡಿ
ಚಿಕ್ಕಮಗಳೂರುಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳು

ಫ್ರೈಡ್‍ ಯುರೋ: ಕ್ರೀಡಾವಿಜೇತರಿಗೆ ಅಭಿನಂದನೆ.

ಚಿಕ್ಕ್ಕಮಗಳೂರು: ತಾಲ್ಲೂಕು ಕ್ರೀಡೋತ್ಸವದ 800ಮೀಟರ್ ಓಟ ಸ್ಪರ್ಧೆಯಲ್ಲಿ ನಗರದ ಫ್ರೈಡ್ ಯುರೋ ಶಾಲೆಯ ಯೋಗಿತಾ ಪ್ರಥಮಸ್ಥಾನ ಗಳಿಸಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆ ನಗರದ ಜಿಲ್ಲಾ ಆಟದ ಮೈದಾನದಲ್ಲಿ ಸೆ.22 ಮತ್ತು 23ರಂದು ಪ್ರೌಢಶಾಲಾ ತಾಲ್ಲೂಕುಮಟ್ಟದ ಕ್ರೀಡೋತ್ಸವವನ್ನು ಆಯೋಜಿಸಿತ್ತು. ಇಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಇಂದು ಶಾಲಾವರಣದಲ್ಲಿ ಫ್ರೈಡ್ ಯುರೋ ಶಾಲೆಯ ಮುಖ್ಯಸ್ಥ ಮಂಜುನಾಥ್ ಮುಖ್ಯಶಿಕ್ಷಕಿ ವಾಸಂತಿಪದ್ಮನಾಭ್ ಅಭಿನಂದಿಸಿದರು.
10ನೆಯ ತರಗತಿ ವಿದ್ಯಾರ್ಥಿನಿ ಯೋಗಿತಾ 800ಮೀ.ಓಟದಲ್ಲಿ ಪ್ರಥಮ ಮತ್ತು 1,500ಮೀ.ಓಟದಲ್ಲಿ ದ್ವಿತೀಯ ಬಹುಮಾನ ಗಳಿಸಿದ್ದರು. ವಿದ್ಯಾಶ್ರೀ ಶಾಟ್‍ಫುಟ್ ಎಸೆತದಲ್ಲಿ ಮೊದಲ ಬಹುಮಾನದ ಜೊತೆಗೆ ಡಿಸ್ಕಸ್ ಥ್ರೋನಲ್ಲಿ ದ್ವಿತೀಯ ಬಹುಮಾನ ಪಡೆದಿದ್ದರು. ಸೋಬಿಯಾ ಮರಿಯಂ ಎತ್ತರ ಜಿಗಿತದಲ್ಲಿ ಮೊದಲಸ್ಥಾನ ಗಳಿಸಿದ್ದರು. ತನಿಷ್ 3000ಮೀಟರ್ ಓಟದಲ್ಲಿ ದ್ವಿತೀಯ ಬಹುಮಾನ ಗಳಿಸಿದರೆ, ಅಮೃತ್ 200ಮೀ.ಓಟ ಮತ್ತು ಉದ್ದ ಜಿಗಿತದಲ್ಲಿ ದ್ವಿತೀಯ ಬಹುಮಾನ ಪಡೆದಿದ್ದರು. ನಾಲ್ಕು ವಿದ್ಯಾರ್ಥಿಗಳು ಮುಂಬರುವ ಜಿಲ್ಲಾಮಟ್ಟದ ಕ್ರೀಡೋತ್ಸವದಲ್ಲಿ ಪಾಲ್ಗೊಳ್ಳಲು ಅರ್ಹತೆ ಗಳಿಸಿದ್ದಾರೆ ಎಂದು ಫ್ರೈಡ್ ಯುರೋ ಶಾಲಾ ಪ್ರಕಟಣೆ ತಿಳಿಸಿದ್ದಾರೆ.

Related posts

ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳನ್ನು ವೇತನಾನುದಾನಕ್ಕೆ ಸೇರಿಸಲು ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದ ರಮೇಶ್ ಶೆಟ್ಟಿ ….

ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಸಡಗರ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವ ಆಚರಣೆ.

ರಾಜ್ಯದಲ್ಲಿ 9 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ಕಡ್ಡಾಯ.