ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

18ನೇ ರಾಷ್ಟ್ರೀಯ  ಮಟ್ಟದ ಕರಾಟೆ ಪಂದ್ಯಾವಳಿ: ಪದಕಗಳನ್ನು ಗೆದ್ಧ ಕ್ರೀಡಾಪಟುಗಳಿಗೆ ಅಭಿನಂದನೆ.

ಶಿವಮೊಗ್ಗ:  ಎ.ಜೆಡ್ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಸಂಸ್ಥೆ ವತಿಯಿಂದ ಆಯೋಜಿಸಲ್ಪಟ್ಟ 18ನೇ ರಾಷ್ಟ್ರೀಯ  ಮಟ್ಟದ ಕರಾಟೆ ಪಂದ್ಯಾವಳಿಯು ದಿನಾಂಕ 03 ಸೆಪ್ಟೆಂಬರ್  2023 ರಂದು  ಶಿವಮೊಗ್ಗ ಜಿಲ್ಲೆಯ ನೆಹರು ಓಳಾoಗಣ ಕ್ರೀಡಾoಗಣದಲ್ಲಿ ಪಂದ್ಯಾವಳಿಯು ಆಯೋಜಿಸಲ್ಪಟ್ಟಿತು.
ಈ ರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮಕ್ಕೆ ವಿವಿದ ಕ್ಷೇತ್ರ ದಲ್ಲಿ ಸಾಧನೆ ಮಾಡಿರುವಂತಹ ಗಣ್ಯವ್ಯಕ್ತಿಗಳು ಭಾಗಿಯಾಗಿದ್ದರು. ಈ ಕ್ರೀಡೆಗೆ ಸಹ್ಯಾದ್ರಿ ಶಿವಮೊಗ್ಗ ಡಿಸ್ಟ್ರಿಕ್ಟ್ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್( ರಿ ).
ಹಾಗೂ ಶಿವಮೊಗ್ಗದ  ಎ. ಝೆಡ್ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಸಂಸ್ಥೆ ವತಿಯಿಂದ  ಕ್ರೀಡಾಪಟುಗಳು ವಿವಿಧ ವಿಭಾಗಗಳಲ್ಲಿ  ಭಾಗವಹಿಸಿ ಕಥಾ ಮತ್ತು ಕುಮಿಟೆ ಭಾಗದಲ್ಲಿ ಪದಕ ಗಳನ್ನು ಗೆದ್ದಿರುತ್ತಾರೆ. ಪಂದ್ಯಾವಳಿಯಲ್ಲಿ ಹೆಚ್ಚಿನ ಪದಗಳನ್ನು ಗೆದ್ದಿರುವಂತಹ ಶಿವಮೊಗ್ಗ ಜಿಲ್ಲಾ ಸಂಸ್ಥೆಗೆ ಅತ್ಯುತ್ತಮ ಟೀಮ್ ಚಾಂಪಿಯನ್ ಶಿಪ್ ಯನ್ನು ಕೋಟ್ಟು ಅಭಿನಂದಿಸಲಾಯಿತು. ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಕರಾಟೆ ಪಟುಗಳಿಗೆ   ತರಬೇತಿದಾರರಾದ ಸೆನ್ಸ್ಯಿ ಮಂಜುನಾಥ್ , ಸೆನ್ಸ್ಯಿ ಸಾದಿಕ್ , ಸೆನ್ಸ್ಯಿ ನವೀನ್ ಹಾಗೂ ಇನ್ನಿತರ ಶಿಷ್ಯವೃಂದ ದವರಿಂದ ಶುಭಾಶಯ ಕೋರಲಾಯಿತು.

Related posts

ಗಾಂಧೀಜಿಯವರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು-ವೈ.ಹೆಚ್. ನಾಗರಾಜ್

ಎಸ್ ಸಿ-ಎಸ್ ಟಿ ವಿದ್ಯಾರ್ಥಿಗಳ ಲ್ಯಾಪ್ ಟಾಪ್ ಗೆ 230 ಕೋಟಿ ರೂ. ಒದಗಿಸಲು ಸಿಎಂ ಸಿದ್ದರಾಮಯ್ಯ ಸೂಚನೆ.

ಫೈಜರ್ ನ ಕೋವಿಡ್ ವೈರಸ್ ಲಸಿಕೆಯಲ್ಲಿ ಕ್ಯಾನ್ಸರ್ `DNA’ : ವರದಿಯೊಂದರಲ್ಲಿ ಬಹಿರಂಗ