ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಭಿಕ್ಷೆ ಬೇಡುವುದು ಬಿಟ್ಟು ಗೌರವಯುತವಾದ ಜೀವನ ನಡೆಸಿ-ಸಮುದಾಯ ಸಂಘಟನಾ ಅಧಿಕಾರಿ ಅನುಪಮಾ ಕರೆ

ಶಿವಮೊಗ್ಗ: ಭಿಕ್ಷೆ ಬೇಡುವುದು ಬಿಟ್ಟು ಗೌರವಯುತವಾದ ಜೀವನ ನಡೆಸಿ ಎಂದು ಲಿಂಗತ್ವ ಅಲ್ಪಸಂಖ್ಯಾತರು ಮತ್ತು ಲೈಂಗಿಕ ಕಾರ್ಯಕರ್ತೆಯರಿಗೆ ಮಹಾನಗರ ಪಾಲಿಕೆಯ ಸಮುದಾಯ ಸಂಘಟನಾ ಅಧಿಕಾರಿ ಅನುಪಮಾ ಕರೆ ನೀಡಿದರು.
ಅವರು ಇಂದು ರಕ್ಷಾ ಸಮುದಾಯ ಸಂಘ (ಲಿಂಗತ್ವ ಅಲ್ಪಸಂಖ್ಯಾತರು), ಆಭಯರಾಮ ನೆಟ್ವರ್ಕ್ ಇವರ ಸಂಯುಕ್ತ ಆಶ್ತಯದಲ್ಲಿ ಹೋಟೆಲ್ ಮಥುರಾ ಪ್ಯಾರಾಡೈಸ್ನಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗಾಗಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಇತ್ತೀಚಿನ ದಿನಗಳಲ್ಲಿ ಶಿವಮೊಗ್ಗ ನಗರವೂ ಸೇರಿದಂತೆಹಲವು ಕಡೆ ಲಿಂಗತ್ವ ಅಲ್ಪಸಂಖ್ಯಾತರು ಭಿಕ್ಷೆಗಾಗಿ ಕೈಚಾಚುತ್ತಿದ್ದಾರೆ. ಇದು ಬೇಡ. ಕೈ ಚಾಚಬೇಡಿ ಕೈ ಎತ್ತಿ ದುಡಿಯಿರಿ. ಕೀಳರಿಮೆ ಬಿಡಿ.ಸರ್ಕಾರದ ಸೌಲತ್ತುಗಳನ್ನು ಬಳಸಿಕೊಳ್ಳಿ. ಸ್ವಾವಲಂಬಿಗಳಾಗಿ. ಸ್ವಾಭಿಮಾನಿ ಬದುಕು ನಡೆಸಿ ಎಂದರು.
ಸರ್ಕಾರ ಹಲವು ಯೋಜನೆಗಳನ್ನು ಲಿಂಗತ್ವ ಅಲ್ಪಸಂಖ್ಯಾತರಿಗಾಗೇ ರೂಪಿಸಿದೆ. ಎರಡು ಲಕ್ಷದಿಂದ 10 ಲಕ್ಷದವರೆಗೆ ಸ್ವಯಂ ಉದ್ಯೋಗಕ್ಕೆ ಸಾಲ ಕೂಡ ಬ್ಯಾಂಕುಗಳು ನೀಡುತ್ತವೆ. ಮಹಾನಗರ ಪಾಲಿಕೆ ಕೂಡ ಉದ್ಯಮಕ್ಕೆ ಬೇಕಾದ ತರಬೇತಿಯನ್ನು ಕೊಡುತ್ತದೆ. ಮತ್ತು ಲೈಂಗಿಕ ಕಾರ್ಯಕರ್ತೆಯರಿಗೆ ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗಾಗಿ ಉಳಿದುಕೊಳ್ಳಲು ಶಿವಮೊಗ್ಗದಲ್ಲಿ ಪುರುಷ ಮತ್ತು ಮಹಿಳಾ ಕೇಂದ್ರಗಳು ಪ್ರತ್ಯೇಕವಾಗಿವೆ. ಇವುಗಳನ್ನು ಬಳಸಿಕೊಳ್ಳಿ. ರಸ್ತೆಗಳಲ್ಲಿ ಮಲಗಬೇಡಿ ಎಂದರು.
ಜಯಕರ್ನಾಟಕ ಸಂಘಟನೆಯ ಜಿಲ್ಲಾ ಮಹಿಳಾ ಅಧ್ಯಕ್ಷೆ ನಾಜೀಮಾ ಮಾತನಾಡಿ, ಲಿಂಗತ್ವ ಅಲ್ಪ ಸಂಖ್ಯಾತರಿಗಾಗಿಯೇ ಅನೇಕ ತರಬೇತಿ ಕಾರ್ಯಕ್ರಮಗಳನ್ನು ನಮ್ಮ ಸಂಘಟನೆ ವತಿಯಿಂದ ಉಚಿತವಾಗಿ ನೀಡುತ್ತಾ ಬಂದಿದ್ದೇವೆ. ಮೇಣದಬತ್ತಿ, ಫಿನಾಯಿಲ್ ತಯಾರಿಕೆ ಮುಂತಾದ ಅನೇಕ ಕೌಶಲ್ಯಗಳನ್ನು ಕಲಿತು ಸಮಾಜದ ಮುಖ್ಯ ವಾಹಿನಿಗೆ ಬರಬೇಕಾಗಿದೆ. ಲೈಂಗಿಕ ಕಾರ್ಯಕರ್ತೆಯರ ಮತ್ತು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳು ನಿಲ್ಲಬೇಕು. ಮತ್ತು ಸರ್ಕಾರ ಇವರಿಗೆ ನಿವೃತ್ತಿ ವೇತನ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ರಕ್ಷಾ ಸಮುದಾಯ ಸಂಘದ ಅಧ್ಯಕ್ಷ ಮಹಮ್ಮದ್ ಸೈಫುಲ್ಲಾ, ಅಭಯ ಸಮುದಾಯದ ಅಧ್ಯಕ್ಷೆ ಜಯಲಕ್ಷ್ಮಿ, ಸಾಲಿಡಾರಿಟಿ ಫೌಂಡೇಷನ್ನಿನ ಮುಕ್ತಾ, ಕೌಶಲ್ಯಾಭಿವೃದ್ಧಿ ಅಧಿಕಾರಿ ಸುರೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಕಿರಣ್, ಸಮನ್ವಯ ಕಾಶಿ ಮುಂತಾದವರಿದ್ದರು.

Related posts

ಕಾವೇರಿ ನೀರು ಹಂಚಿಕೆ ವಿವಾದ: ಕೇಂದ್ರ ಜಲ ಶಕ್ತಿ ಸಚಿವರ ಪ್ರತಿಕ್ರಿಯೆ ಸಕಾರಾತ್ಮಕ: ಸಿಎಂ ಸಿದ್ದರಾಮಯ್ಯ

ರಾಜ್ಯ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ನಿವೃತ್ತಿ; ಮುಂದಿನ ಸಿಎಸ್ ಯಾರು? ಹಲವರ ಹೆಸರು ಮುನ್ನೆಲೆಗೆ…

1 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಠಿಸಲು ಮುಂದಾದ ಫ್ಲಿಪ್ ಕಾರ್ಟ್