ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಎನ್‍ಇಪಿ ರದ್ದುಗೊಳಿಸುವ ರಾಜ್ಯಸರ್ಕಾರದ ನಡೆ ಖಂಡಿಸಿ ಸಹಿ ಸಂಗ್ರಹಣೆ.

ಶಿವಮೊಗ್ಗ: ರಾಜ್ಯದಲ್ಲಿ ಜಾರಿಯಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‍ಇಪಿ) ಯನ್ನು ರದ್ದುಗೊಳಿಸುವ ರಾಜ್ಯಸರ್ಕಾರದ ನಡೆಯನ್ನು ಖಂಡಿಸಿ ಮತ್ತು ಇದರ ವಿರುದ್ಧ ಎಬಿವಿಪಿ ಕಾರ್ಯಕರ್ತರು ಇಂದು ಶಿವಪ್ಪ ನಾಯಕ ವೃತ್ತದಲ್ಲಿ ಸಹಿ ಸಂಗ್ರಹಣೆ ಮಾಡಿ ಸರ್ಕಾರಕ್ಕೆ ರವಾನಿಸಿದರು.
ರಾಜ್ಯದ ವಿದ್ಯಾರ್ಥಿಗಳ ಹಾಗೂ ಪೋಷಕರ ಹಿತಾಸಕ್ತಿಯನ್ನು ಕಡೆಗಣಿಸಿ ಎನ್‍ಇಪಿ ರದ್ದುಗೊಳಿಸುವ ನಿರ್ಧಾರ ಮಾಡಲಾಗಿದೆ. ಇದರಿಂದ ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳ ಭವಿಷ್ಯ ಕತ್ತಲಾಗುತ್ತದೆ. ರದ್ದುಪಡಿಸುವ ಮುನ್ನ ಚರ್ಚೆಯನ್ನೆ ಮಾಡಿಲ್ಲ. ಇದು ವಿದ್ಯಾರ್ಥಿಗಳ ವಿರೋಧಿಯಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಇದನ್ನು ರದ್ದುಮಾಡಬಾರದೆಂದು ಕಾರ್ಯಕರ್vರು ತಿಳಿಸಿದರು.
ಎನ್‍ಇಪಿಯ ತ್ರಿಭಾಷಾ ಸೂತ್ರದ ಅನ್ವಯದಲ್ಲಿ ಹೆಚ್ಚಿನ ಮುಕ್ತತೆ ಇದೆ. ಪ್ರಾದೇಶಿಕ ಭಾಷೆಯ ಅವಗಣನೆ ಆಗಿಲ್ಲ. ಸಹಬಾಳ್ವೆ, ಸಮಾನತೆ, ರಾಷ್ಟ್ರೀಯತೆ, ಭಾರತೀಯತೆಗೆ ಮಹತ್ವ ನೀಡಿರುವುದು ತಪ್ಪು ಹೇಗಾಗುತ್ತದೆ ಎಂದು ವಿದ್ಯಾರ್ಥಿಗಳು ಪ್ರಶ್ನೆ ಮಾಡಿದ್ದಾರೆ.

Related posts

Exciting Online Foreign Casino Games

TOD News

ಮುಂದಿನ 25 ವರ್ಷಗಳಲ್ಲಿ ದೇಶದಲ್ಲಿ ಬಡತನ ನಿರ್ಮೂಲನೆ- ಪ್ರಧಾನಿ ಮೋದಿ ವಿಶ್ವಾಸ.

ನಾಳೆಯಿಂದ ಮೂರು ದಿನಗಳ ಕಾಲ ಹರ್ ಘರ್ ತಿರಂಗಾ ಅಭಿಯಾನ.