ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ಓದದೇ ಕುರಿ ಕಾಯುತ್ತಿದ್ದ 11 ವರ್ಷ ಬಾಲಕನನ್ನ ಮರಳಿ ಶಾಲೆಗೆ ಸೇರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಸಿಎಂ ಸಿದ್ಧರಾಮಯ್ಯ.

ಚಿತ್ರದುರ್ಗ: ಹಳ್ಳಿ ಗ್ರಾಮೀಣ ಪ್ರದೇಶದ ಭಾಗಗಳಲ್ಲಿ ಮಕ್ಕಳು ಶಾಲೆ ಜೊತೆಗೆ ಕೃಷಿ ಕುಲಕಸುಬಿನ ಕೆಲಸವನ್ನೂ ಮಾಡುತ್ತಾರೆ. ಅಲ್ಲದೆ ಕೆಲವು ಮಕ್ಕಳು ಶಾಲೆಗೆ ಹೋಗದೇ ಕೂಲಿ ಕೆಲಸದಲ್ಲೇ ತೊಡಗುವ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಅಂತೆಯೇ ಶಾಲೆ ಬಿಟ್ಟು ಕುರಿ ಕಾಯುತ್ತಿದ್ದ 11 ವರ್ಷದ ಬಾಲಕನೊಬ್ಬನನ್ನ ಸಿಎಂ ಸಿದ್ಧರಾಮಯ್ಯ ಮರಳಿ ಶಾಲೆಗೆ ಸೇರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಚಿತ್ರದುರ್ಗ ಚಳ್ಳಕೆರೆ ತಾಲೂಕಿನ ಬಸಾಪುರ ಗ್ರಾಮದ ಬಾಲಕ ಯೋಗೀಶ್, ಶಾಲೆ ಬಿಟ್ಟು ಕುರಿಕಾಯಲು ಹೋಗುತ್ತಿದ್ದ. ಕಳೆದ 2 ವರ್ಷದಿಂದ ಯೋಗೀಶ್ ಶಾಲೆಗೆ ಹೋಗದೆ ಕುರಿಕಾಯಲು ತೆರಳುತ್ತಿದ್ದ ಎನ್ನಲಾಗಿದೆ.

ಸ್ಥಳೀಯರಾ ಮಹೇಂದ್ರ  ಎಂಬುವವರು ಶಾಲೆ ತೊರೆದು ಕುರಿಕಾಯುತ್ತಿದ್ದ 11ರ ಯೋಗೀಶ್ ಎಂಬ ಬಾಲಕನನ್ನು ಗಮನಿಸಿದ್ದಾರೆ.  ತಕ್ಷಣವೇ ಅವರು ಮೊಬೈಲ್ ನಲ್ಲಿ ಫೋಟೊ ತೆಗೆದು ಮುಖ್ಯಮಂತ್ರಿಗಳನ್ನು ಟ್ಯಾಗ್ ಮಾಡಿ ಎಕ್ಸ್ಅಲ್ಲಿ (ಹಿಂದೆ ಟ್ವಿಟರ್) ಪೋಸ್ಟ್ ಮಾಡಿದ್ದಾರೆ. ತಕ್ಷಣವೇ ಇದನ್ನು ಗಮನಿಸಿದ ಮುಖ್ಯಮಂತ್ರಿಗಳು ಬಾಲಕನನ್ನು ಮರಳಿ ಶಾಲೆಯ ಕಡೆ ಮುಖ ಮಾಡಿಸುವಲ್ಲಿ ಯಶಸ್ವಿ ಆಗಿದ್ದಾರೆ.

ಈ ಕುರಿತಾಗಿ ಸಿಎಂ ಆಫ್ ಕರ್ನಾಟಕ ಎಕ್ಸ್ ಖಾತೆಯನ್ನು ಟ್ಯಾಗ್ ಮಾಡಿ ‘ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ, ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಸಾಪುರ ಗ್ರಾಮದ ಮಂಜಣ್ಣ ಎಂಬುವರ ಪುತ್ರ ಯೋಗೇಶ್ (11) 2 ವರ್ಷದಿಂದ ಕುರಿ ಕಾಯುತ್ತ ಇದ್ದಾನೆ. ನಾಗರಿಕ ಜನಗಳ ಮದ್ಯ ಸ್ವಂತ ಮಗನನ್ನೇ ಅನಾಗರಿಕ ಮಾಡಲು ಹೊರಟಿರುವುದು ನೋವಿನ ಸಂಗತಿ’ ಎಂದು ಪೋಸ್ಟ್ ಮಾಡಿದ್ದರು. ಇದನ್ನು ಗಮನಿಸಿದ ಸಿಎಂ, ತಮ್ಮ ಕಾರ್ಯಾಲಯದ ಸಿಬ್ಬಂದಿ ಮೂಲಕ 23 ಗಂಟೆಗಳ ಒಳಗಾಗಿ ಬಾಲಕನನ್ನು ಶಾಲೆಗೆ ಸೇರಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ,  ‘ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕು ಬಸಾಪುರದ ಯೋಗೇಶ್ ಎಂಬ ಬಾಲಕನನ್ನು ಆತನ ತಂದೆ ತಾಯಿ ಒತ್ತಾಯಪೂರ್ವಕವಾಗಿ ಶಾಲೆ ಬಿಡಿಸಿ ಕಳೆದ 2 ವರ್ಷದಿಂದ ಕುರಿ ಮೇಯಿಸಲು ತೊಡಗಿಸಿದ್ದರು. ಈ ವಿಚಾರವು ಸ್ಥಳೀಯರೊಬ್ಬರಿಂದ ನಮ್ಮ ಗಮನಕ್ಕೆ ಬಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳನ್ನು ಬಾಲಕನ ಮನೆಗೆ ಕಳುಹಿಸಿ, ಆತನ ತಂದೆ ತಾಯಿಗೆ ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸಿ, ಕೇವಲ 24 ಗಂಟೆಗಳ ಒಳಗೆ ಬಾಲಕನನ್ನು ಶಾಲೆಗೆ ಸೇರ್ಪಡೆ ಮಾಡಿಸಲಾಗಿದೆ. ಬಡತನದ ಕಾರಣಕ್ಕೆ ಶಿಕ್ಷಣದಿಂದ ವಂಚಿತನಾಗಿದ್ದ ಯೋಗೇಶ್ ಈಗ ಇತರ ಮಕ್ಕಳಂತೆ ಶಾಲೆಯಲ್ಲಿ ಕಲಿಯುತ್ತಾ, ನಲಿಯುತ್ತಾ ಉಜ್ವಲ ಭವಿಷ್ಯದೆಡೆಗೆ ಹೆಜ್ಜೆ ಹಾಕುತ್ತಿದ್ದಾನೆ.

ಬಾಲ್ಯದಲ್ಲಿ ನಾನು ಕೂಡ ಯೋಗೇಶ್ ನಂತೆ ಶಾಲೆಯಿಂದ ವಂಚಿತನಾಗಿದ್ದೆ, ರಾಜಪ್ಪ ಮೇಸ್ಟ್ರು ನನ್ನನ್ನು ನೇರವಾಗಿ 5ನೇ ತರಗತಿಗೆ ದಾಖಲಾತಿ ಮಾಡಿ ಶಿಕ್ಷಣ ಸಿಗುವಂತೆ ಮಾಡಿದ್ದರಿಂದ ಇಂದು ಮುಖ್ಯಮಂತ್ರಿಯಾಗಲು ಸಾಧ್ಯವಾಗಿದೆ. ಮರಳಿ ಶಿಕ್ಷಣದತ್ತ ಮುಖಮಾಡಿರುವ ಈ ಬಾಲಕನ ಭವಿಷ್ಯವೂ ಉಜ್ವಲವಾಗಲಿ ಎಂಬ ಹಾರೈಕೆ ನನ್ನದು. ಇಂತಹ ಸಾರ್ವಜನಿಕ ಹಿತಾಸಕ್ತಿಯ ಸಮಸ್ಯೆಗಳು ನಿಮಗೂ ಕಂಡು ಬಂದರೆ ನಮ್ಮ ಕಚೇರಿಯ @osd_cmkarnataka ಟ್ವಿಟರ್ ಖಾತೆಯನ್ನು ಸಂಪರ್ಕಿಸಿ’ ಎಂದು ಬರೆದುಕೊಂಡಿದ್ದಾರೆ.

 

Related posts

ಮೆಡಿಕಲ್ ಕಾಲೇಜು ಸ್ಥಳಾಂತರ ಹಿನ್ನೆಲೆ: ರಾಮನಗರ ಬಂದ್ : ರೈತರು, ವ್ಯಾಪಾರಸ್ಥರಿಂದ ಬೆಂಬಲ.

ಸರ್ಕಾರಿ ಜಾಗಗಳಲ್ಲಿ ಅಂಗನವಾಡಿಗಳನ್ನು ನಿರ್ಮಿಸಬೇಕು:ಶಿವಮೊಗ್ಗ ಪೀಸ್ ಆರ್ಗನೈಜೇಷನ್ ಮನವಿ

ರಾಜ್ಯದಲ್ಲೂ ಜಾತಿಗಣತಿ ವರದಿ ಬಿಡುಗಡೆಗೆ ಒತ್ತಡ ಹೆಚ್ಚಳ: ಸರ್ಕಾರಕ್ಕೆ ಶುರುವಾಯ್ತು ಟೆನ್ಷನ್.