ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ಬೇರೆ ಭಾಷೆ ಕಲಿಯಬೇಡಿ ಎನ್ನಲ್ಲ, ಕನ್ನಡದಲ್ಲಿ ಮಾತನಾಡಿ : ತಾಯಿನಾಡಿನ ಋಣ ತೀರಸಿ- ಸಿಎಂ ಸಿದ್ಧರಾಮಯ್ಯ.

ಬೆಂಗಳೂರು: ಬೇರೆ ಭಾಷೆ ಕಲಿಯಬೇಡಿ ಅಂತಲ್ಲ,  ಕನ್ನಡವನ್ನ ಮಾತನಾಡಿ. ಪ್ರತಿಯೊಬ್ಬ ಕನ್ನಡಿಗನು ತಾಯಿನಾಡಿನ ಋಣ ತೀರಸಿಬೇಕು ಎಂದು ಸಿಎಂ  ಸಿದ್ದರಾಮಯ್ಯ ಕರೆ ನೀಡಿದರು.

ಕಂಠೀರವ ಕ್ರೀಡಾಂಗಣದಲ್ಲಿ ನಡೆದ  ಸಂಭ್ರಮದ 68ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಿಎಂ ಸಿದ್ಧರಾಮಯ್ಯ, ಕರ್ನಾಟಕ‌ವೆಂದು ನಾಮಕರಣವಾಗಿ ಇವತ್ತಿಗೆ 50 ವರ್ಷ ತುಂಬಿದೆ. ಇದರ ಸವಿನೆನಪಿಗಾಗಿ ರಾಜ್ಯದಲ್ಲಿ ಒಂದು ವರ್ಷ ಕರ್ನಾಟಕ ಸಂಭ್ರಮ 50 ಅಂತ ಕರಿಬೇಕು ಎಂದರು.

ಕನ್ನಡದ ಇತಿಹಾಸ, ಸಂಸ್ಕೃತಿ, ಭಾಷೆ, ಕಲೆ, ಸಂಗೀತ, ಜಾನಪದ, ಸಂಪ್ರದಾಯಯವನ್ನ ರಾಜ್ಯದ ಜನರಿಗೆ ತಿಳಿಸುವ ಕೆಲಸ ಮಾಡುತ್ತಿದ್ದೇವೆ. ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಎಂದು ಘೋಷ ವಾಕ್ಯ ಕೊಟ್ಟಿದ್ದೇವೆ. ಇಡೀ ರಾಜ್ಯದಲ್ಲಿ ಈ ಘೋಷ ವಾಕ್ಯದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಈ ವರ್ಷವೇ 50 ವರ್ಷ ಮುಗಿಯಬೇಕಿತ್ತು, ಆದರೆ ಹಿಂದಿನ ‌ಸರ್ಕಾರ ಮಾಡಲಿಲ್ಲ. ನಾನು ಬಜೆಟ್ ​ನಲ್ಲಿ ಘೊಷಣೆ ಮಾಡಿದ್ದೆ ನ. 1,2023- ನ.1, 2024ರವರೆಗೆ ಈ ಉತ್ಸವ ಮಾಡಲು ಘೋಷಣೆ ಮಾಡಿದ್ದೇನೆ. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.

ಕನ್ನಡದಲ್ಲಿ ಮಾತನಾಡಿದ್ರೆ ಕೆಲಸ ಸಿಗಲ್ಲ ಅಂತಾರೆ ಎಷ್ಟೋ ವಿಜ್ಞಾನಿಗಳು ಕನ್ನಡದಲ್ಲೇ ಓದಿದ್ದಾರೆ ಯಾವ ಶಿಕ್ಷಣ ಕೊಡಬೇಕು ಎಂಬುದು  ಪೋಷಕರ ಕರ್ತವ್ಯ. ಕನ್ನಡ ಮಾಧ್ಯಮದ ಮೂಲಕ ಕನ್ನಡ ಕಲಿಕೆ ಆಗಬೇಕು ಎಂದು ಸಿಎಂ ಸಿದ್ಧರಾಮಯ್ಯ ನುಡಿದರು.

Related posts

ನಾಳಿನ ಸರ್ವಪಕ್ಷ ಸಭೆ:  ಮಾಜಿ ಸಿಎಂಗಳಿಗೆ ಆಹ್ವಾನ ನೀಡಿದ ಸಿಎಂ ಸಿದ್ಧರಾಮಯ್ಯ 

ಕನ್ನಡದ ಬಳಕೆಯಿಂದ ಮಾತ್ರ ಉಳಿಯಲು ಸಾಧ್ಯ : ಎಸ್.ಎನ್.ನಾಗರಾಜ

ಶೋಕಾಸ್ ನೋಟಿಸ್ ನನ್ನ ಕೈಗೆ ಸಿಕ್ಕಾಗ ಉತ್ತರ ನೀಡುತ್ತೇನೆ  -ಬಿ.ಕೆ ಹರಿಪ್ರಸಾದ್