ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

 ಸಿಎಂ ಇಬ್ರಾಹಿಂ ಜೆಡಿಎಸ್ ತೊರೆಯಲ್ಲ: ಬಿಜೆಪಿ ಜೊತೆ ಮೈತ್ರಿಗೆ ವಿರೋಧವಿಲ್ಲ:  – ಶಾಸಕ ಜಿ.ಟಿ ದೇವೇಗೌಡ.

ವಿಜಯಪುರ,:  ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ವಿರೋಧವಿಲ್ಲ. ಅವರು ಪಕ್ಷ ಬಿಡುವುದಿಲ್ಲ ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ.ಜಿ.ಟಿ ದೇವೇಗೌಡ,  ಹೇಗೆ ಒಟ್ಟಾಗಿ ಹೋಗಬೇಕು ಅನ್ನೋದು ಸಿ.ಎಂ.ಇಬ್ರಾಹಿಂ ಸಲಹೆ ನೀಡಿದ್ದಾರೆ. ಜೆಡಿಎಸ್ ವರಿಷ್ಠ ದೇವೇಗೌಡರ ಜೊತೆ ಇಬ್ರಾಹಿಂ ಚರ್ಚಿಸಿದ್ದಾರೆ. ಬಿಜೆಪಿ ಜತೆ ಮೈತ್ರಿಗೆ ಅವರು ವಿರೋಧಿಸಲ್ಲ ಎಂದರು.

ಗೃಹಲಕ್ಷ್ಮೀ ಯೋಜನೆ ಬಗ್ಗೆ ಟೀಕಿಸಿದ ಶಾಸಕ ಜಿ.ಟಿ ದೇವೇಗೌಡರು,  , ಮನೆ ಯಜಮಾನಿ ಸತ್ತರೆ ಯಜಮಾನನಿಗೆ ಕೊಡಲ್ಲಾ, ತಂದೆ-ತಾಯಿ ಇಬ್ಬರೂ ಸತ್ತರೆ ಪಾಪ ಮಕ್ಕಳಿಗೆ ಇಲ್ಲ. ಇದು ಗೃಹಲಕ್ಷ್ಮಿ, ಇಂತಹ ಕಾರ್ಯಕ್ರಮ ಯಾವುದು ಬರುತ್ತಿಲ್ಲ. ಯಾವುದಕ್ಕೂ ಹಣ ಇಲ್ಲಾ, ಬರೀ ಸುಳ್ಳು ಎಂದು ವಾಗ್ದಾಳಿ ನಡೆಸಿದರು.

5 ಗ್ಯಾರಂಟಿ ನೀಡುತ್ತೇವೆ ಎಂದು ಹೇಳಿಕ ಕಾಂಗ್ರೆಸ್ ಸುಳ್ಳಿನ ಗ್ಯಾರಂಟಿ ನೀಡಿದ್ದಾರೆ. ವಿದ್ಯುತ್ ಬಿಲ್ ಜಾಸ್ತಿ ಮಾಡಿದ್ದಾರೆ. ರೈತರಿಗೆ ಏಳು ಗಂಟೆ ವಿದ್ಯುತ್ ಕೊಡಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಇದ್ದಾಗಲೇ ಆದೇಶ ಮಾಡಿದ್ದಾರೆ. ಆದರೆ ಇದೀಗ ಎರಡು ಗಂಟೆ ಕರೆಂಟ್ ಇಲ್ಲವಾಗಿದೆ ಎಂದು ಕಿಡಿಕಾರಿದರು.

Related posts

ಇಂದಿನಿಂದ ಏಕದಿನ ವಿಶ್ವಕಪ್ ಸಮರ: ಇಂದು ಅಂಗ್ಲೋ-ಕಿವಿಸ್ ಕದನ.

ಇನ್ಮುಂದೆ ವಂಚನೆಯ 420 ನಂಬರ್ ಬದಲಾವಣೆ..? ಏನಿದು..?

ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ ವೃದ್ಧಿ-ಜಿ.ವಿಜಯ್‌ಕುಮಾರ್