ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಹೊಯ್ಸಳ ದೇವಾಲಯಗಳು ಯುನೆಸ್ಕೋ ವಿಶ್ವಪರಂಪರೆ ಪಟ್ಟಿಗೆ ಸೇರ್ಪಡೆ: ಸಿಎಂ ಸಂತಸ

ನವದೆಹಲಿ : ಹೊಯ್ಸಳ ದೇವಾಲಯಗಳು ಯುನೆಸ್ಕೋ ವಿಶ್ವಪರಂಪರೆ ಪಟ್ಟಿಗೆ ಸೇರ್ಪಡೆಯಾಗಿದ್ದು, ಇದು ಕನ್ನಡಿಗರಿಗೆ ಹೆಮ್ಮೆ ತರುವ ಸಂಗತಿಯಾಗಿದೆ. ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಹೊಯ್ಸಳ ಸಾಮ್ರಾಜ್ಯದ ದೇವಾಲಯಗಳ ಸಮೂಹಗಳನ್ನ ಸೇರಿಸಲಾಗಿದೆ.

ರಾಜ್ಯದ ಹೊಯ್ಸಳ ಸಾಮ್ರಾಜ್ಯದ ದೇವಾಲಯಗಳನ್ನ ಯುನೆಸ್ಕೋ ವಿಶ್ವ ಪರಂಪರೆಯ ತಾಣಕ್ಕೆ ಸೇರಿಸಲಾಗಿದೆ.  ಈ ಪ್ರತಿಷ್ಠಿತ ಮಾನ್ಯತೆ ಪಡೆದ ಭಾರತದ 42ನೇ ತಾಣವಾಗಿದೆ.  ಪಶ್ಚಿಮ ಬಂಗಾಳದ ಶಾಂತಿನಿಕೇತನವನ್ನ ಯುನೆಸ್ಕೋದ ಮತ್ತೊಂದು ಪಾರಂಪರಿಕ ತಾಣವಾಗಿ ಸೇರಿಸಿದ ಒಂದು ದಿನದ ನಂತರ ಈ ಪ್ರಕಟಣೆ ಬಂದಿದೆ.

ಹೊಯ್ಸಳ ಸಾಮ್ರಾಜ್ಯದ ದೇವಾಲಯಗಳು ಮತ್ತು ಶಾಂತಿನಿಕೇತನವನ್ನು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿಸಿರುವುದು ಶ್ರೀಮಂತ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಸಂಪತ್ತಿನ ಭಂಡಾರವಾಗಿ ಭಾರತದ ಪರಂಪರೆಯನ್ನ ನೆನಪಿಸುತ್ತದೆ.

10 ಮತ್ತು 14ನೇ ಶತಮಾನಗಳ ನಡುವೆ ಪ್ರವರ್ಧಮಾನಕ್ಕೆ ಬಂದ ಹೊಯ್ಸಳ ಸಾಮ್ರಾಜ್ಯವು ಭಾರತದ ದಕ್ಷಿಣ ಪ್ರದೇಶದಲ್ಲಿ ಕಲೆ, ವಾಸ್ತುಶಿಲ್ಪ ಮತ್ತು ಸಂಸ್ಕೃತಿಗೆ ನೀಡಿದ ಕೊಡುಗೆಗಳಿಗೆ ಹೆಸರುವಾಸಿಯಾಗಿದೆ.

ಕರ್ನಾಟಕವು ಈಗಾಗಲೇ ಹಂಪಿ ಅವಶೇಷಗಳು, ಪಟ್ಟದಕಲ್ಲು ಸ್ಮಾರಕಗಳು ಮತ್ತು ಪಶ್ಚಿಮ ಘಟ್ಟಗಳಂತಹ ಹಲವಾರು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಿಗೆ ನೆಲೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಸ್ಥಾಪಿಸಿದ ಶಾಂತಿನಿಕೇತನದ ಸೇರ್ಪಡೆಯೂ ಈ ಪಟ್ಟಿಗೆ ಸೇರಿದೆ.

ಸಂತಸ ಹಂಚಿಕೊಂಡ ಸಿಎಂ ಸಿದ್ಧರಾಮಯ್ಯ  

ಹೊಯ್ಸಳರ ಕಾಲದ ದೇವಾಲಯಗಳು ಯುನೆಸ್ಕೋ ವಿಶ್ವಪರಂಪರೆ ಪಟ್ಟಿಗೆ ಸೇರ್ಪಡೆಯಾಗಿದ್ದು ಈ ಹಿನ್ನೆಲೆಯಲ್ಲಿ ಸಿಎಂ ಸಿದ್ಧಯರಾಮಯ್ಯ ಸಂತಸ ಹಂಚಿಕೊಂಡಿದ್ದಾರೆ.

ಈ ಕುರಿತು ಫೋಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಸಿಎಂ ಸಿದ್ಧರಾಮಯ್ಯ, ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಕರುನಾಡಿನ ಹೊಯ್ಸಳರ ಕಾಲದ ದೇವಾಲಯಗಳು ಸೇರ್ಪಡೆಗೊಂಡಿರುವುದು ಖುಷಿಯ ಜೊತೆಗೆ ಹೆಮ್ಮೆಯ ಸಂಗತಿ ಕೂಡ. ನಾಡಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ವಿಶ್ವ ಮಟ್ಟದ ಮೂಲಸೌಲಭ್ಯ ಮತ್ತು ಸುರಕ್ಷತೆ ಒದಗಿಸಲು ನಮ್ಮ ಸರ್ಕಾರ ಕಾರ್ಯಪ್ರವೃತ್ತವಾಗಿದೆ.

ಐತಿಹಾಸಿಕ ಸ್ಥಳಗಳು ಮತ್ತು ಪುಣ್ಯ ಕ್ಷೇತ್ರಗಳ ತೊಟ್ಟೆಲು ಕರ್ನಾಟಕಕ್ಕೆ ಸ್ವಾಗತ  ಎಂದಿದ್ದಾರೆ ಸಿಎಂ ಸಿದ್ಧರಾಮಯ್ಯ.

 

Related posts

ಔಷಧಗಳ ಜಾಗತಿಕ ಸ್ಪರ್ಧೆಗೆ ಪೇಟೆಂಟ್ ಅತ್ಯಗತ್ಯ-ಕೆ.ಎಲ್.ಶಿವಕುಮಾರ್

ಡಿಸೆಂಬರ್ 6ರಿಂದ 10ರವರೆಗೆ ಸ್ವದೇಶಿ ಮೇಳ: ಇಂದು ಗುದ್ದಲಿ ಪೂಜೆ ನೆರವೇರಿಕೆ.

ಬೆದರಿಕೆ ಪತ್ರ ಬಂದ ಸಾಹಿತಿಗಳಿಗೆ ರಕ್ಷಣೆ ನೀಡುವಂತೆ  ಸೂಚನೆ- ಗೃಹ ಸಚಿವ ಡಾ.ಜಿ. ಪರಮೇಶ್ವರ್