ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಮಕ್ಕಳ ದಸರಾ – ರಾಜ್ಯಮಟ್ಟದ ಕುಡೋ ಮಾರ್ಷಲ್ ಆರ್ಟ್ಸ್ ಪಂದ್ಯಾವಳಿಗಳಿಗೆ ಚಾಲನೆ.

ಶಿವಮೊಗ್ಗ:  ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ನಮ್ಮೂರ ಶಿವಮೊಗ್ಗ ದಸರಾ ಅಂಗವಾಗಿ ಮಕ್ಕಳ ದಸರಾ ಸಮಿತಿಯಿಂದ ನೆಹರು ಒಳಾಂಗಣ  ಕ್ರೀಡಾಂಗಣದಲ್ಲಿ 6 ರಿಂದ 16 ನೇ ವಯಸ್ಸಿನ ಮಕ್ಕಳ ಕುಡೋ ಮಾರ್ಷಲ್ ಆರ್ಟ್ಸ್  ಪಂದ್ಯಾವಳಿಗಳ ಉದ್ಘಾಟನೆಯನ್ನು ಮಹಾನಗರ ಪಾಲಿಕೆ ಉಪ ಮೇಯರ್ ಲಕ್ಷ್ಮಿ ಶಂಕರನಾಯಕ್ ರವರು ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಕ್ಕಳ  ದಸರಾ ಸಮಿತಿಯ ಅಧ್ಯಕ್ಷರಾದ ರೇಖಾ ರಂಗನಾಥ್ ರವರು ವಹಿಸಿದ್ದರು. ಅತಿ ಉತ್ಸಾಹಾಯಕತೆಯಿಂದ  ಕುಡೋ ಪಟುಗಳು ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದರು
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಎನ್ ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಭಾನುಮತಿ ವಿನೋದ್ ಕುಮಾರ್ , ಜಿಲ್ಲಾ ಯುವ ಕಾಂಗ್ರೆಸ್ ನ ಅಧ್ಯಕ್ಷರಾದ ಹೆಚ್‌.ಪಿ. ಗಿರೀಶ್, ಯುವ ಕಾಂಗ್ರೆಸ್ ನಗರಾಧ್ಯಕ್ಷ ಬಿ ಲೋಕೇಶ್, ಯುವ ಮುಖಂಡ ಎಂ ರಾಹುಲ್  ಕುಡೋ ಮಾರ್ಷಲ್ ಆರ್ಟ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಶಬ್ಬೀರ್ ಅಹ್ಮದ್  ಹಾಗೂ ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಿಂದ  ಆಗಮಿಸಿದ ತರಬೇತುದಾರರು, ಉಪಸ್ಥಿತರಿದ್ದರು.

Related posts

ಮುಂದಿನ ಬಜೆಟ್ ನಲ್ಲಿ ಹಿರಿಯ ನಾಗರಿಕರಿಗೆ 2 ಸಾವಿರ ರೂ. ಮಾಶಾಸನ

ಸೂರ್ಯನತ್ತ ಚಿಮ್ಮಿದ  ಆದಿತ್ಯ L-1: ಇಸ್ರೋದಿಂದ ಯಶಸ್ವಿ ಉಡಾವಣೆ.

ಕಾಶ್ಮೀರ ನಮ್ಮ ಅವಿಭಾಜ್ಯ ಅಂಗ: ಮೊದಲು POK ತೆರವು ಮಾಡಿ: ವಿಶ್ವಸಂಸ್ಥೆಯಲ್ಲಿ ಪಾಕ್ ಗೆ ಭಾರತ ತಿರುಗೇಟು.