ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಮಾನಸಿಕ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡುವುದು ಮುಖ್ಯ-ಜಿ.ವಿಜಯ್‌ಕುಮಾರ್

ಶಿವಮೊಗ್ಗ: ಮಾನಸಿಕ ಆರೋಗ್ಯವನ್ನು ಬಹುತೇಕ ಎಲ್ಲರೂ ನಿರ್ಲಕ್ಷ್ಯ ಮಾಡುತ್ತಿದ್ದು, ಪ್ರತಿಯೊಬ್ಬರು ಮನಸ್ಸಿನ ಆರೋಗ್ಯ ಸದೃಢವಾಗಿ ಕಾಪಾಡಿಕೊಳ್ಳಲು ಮುಂದಾಗಬೇಕು. ಮಾನಸಿಕ ಆರೋಗ್ಯ ಕಾಯ್ದುಕೊಳ್ಳಲು ಪ್ರಾಮುಖ್ಯತೆ ನೀಡಬೇಕು ಎಂದು ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್ ಹೇಳಿದರು.

ರಾಜೇಂದ್ರ ನಗರದ ಅನಿಕೇತನ ಉದ್ಯಾನವನದಲ್ಲಿ ಸಾರ್ವಜನಿಕರಿಗೆ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮ, ರಸಪ್ರಶ್ನೆ ಮತ್ತು ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ದೇಹದ ಅಂಗಗಳ ಆರೋಗ್ಯ ಸರಿಯಿಟ್ಟುಕೊಳ್ಳುವುದು ಎಷ್ಟು ಮುಖ್ಯವೋ ಮನಸ್ಸಿನ ಆರೋಗ್ಯವು ಸಹ ಅಷ್ಟೇ ಮುಖ್ಯ. ಕುಟುಂಬದಲ್ಲಿ ಒಬ್ಬರು ಮಾನಸಿಕ ರೋಗಿ ಇದ್ದರೂ ಕುಟುಂಬದ ಚಿತ್ರಣವೇ ಬೇರೆ ಇರುತ್ತದೆ. ಮಾನಸಿಕ ಆರೋಗ್ಯಗಳಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಹಾಗೂ ಆಪ್ತ ಸಮಾಲೋಚನೆ ಮುಖ್ಯ ಎಂದು ತಿಳಿಸಿದರು.

ಇಂದು ಸಮಾಜದಲ್ಲಿ ಮಾನಸಿಕ ಕಾಯಿಲೆಯಿಂದ ಬಳಲುವರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ಜನರು ಒತ್ತಡದಿಂದ ಬದುಕುತ್ತಿದ್ದಾರೆ. ಮಾನಸಿಕ ಕಾಯಿಲೆ ಬರದ ಹಾಗೆ ನೋಡಿಕೊಳ್ಳಲು ಉತ್ತಮ ಜೀವನ ಶೈಲಿ, ಸಕಾರಾತ್ಮಕ ಮನೋಭಾವನೆ, ಯೋಗ, ಪ್ರಾಣಾಯಾಮ, ಧ್ಯಾನ ಅತ್ಯಂತ ಪರಿಣಾಮಕಾರಿಯಾಗಿ ಸಹಕಾರಿಯಾಗುತ್ತದೆ ಎಂದರು.

ಡಾ. ಕೆ.ಎಸ್.ಪವಿತ್ರ ಅವರ 56ನೇ ಕೃತಿ ಜೀವನ ಶೈಲಿ ಪುಸ್ತಕವನ್ನು ಕ್ಷೇಮ ಟ್ರಸ್ಟ್ ಅಧ್ಯಕ್ಷ ಡಾ. ಕೆ.ಆರ್.ಶ್ರೀಧರ್ ಲೋಕಾರ್ಪಣೆಗೊಳಿಸಿ ಮಾತನಾಡಿ, ಉತ್ತಮ ಪುಸ್ತಕಗಳು ಒಳ್ಳೆಯ ಅಭ್ಯಾಸಗಳು ಒಳ್ಳೆಯ ಸಂಗೀತವನ್ನು ಕೇಳುವುದರಿಂದ ಸದಾ ನಮ್ಮ ಮನಸ್ಸು ಉಲ್ಲ ಸಿತಗೊಳ್ಳುತ್ತದೆ. ಮಾನಸಿಕ ಆರೋಗ್ಯ ಸಾರ್ವತ್ರಿಕ ಮಾನವನ ಹಕ್ಕು ಆಗಿದೆ ಎಂದು ಹೇಳಿದರು.

ಸಾಮಾಜಿಕ ಜಾಲತಾಣ, ಟಿವಿ ಮಾಧ್ಯಮ, ತಂಬಾಕು ಮಧ್ಯಪಾನ ದುಶ್ಚಟಗಳಿಂದ ದೂರವಿರಬೇಕು. ಪ್ರಾರಂಭಿಕ ಹಂತದಲ್ಲಿ ಮಾನಸಿಕ ಕಾಯಿಲೆ ಗುರುತಿಸಿದರೆ ಗುಣಪಡಿಸಲು ಸಾಧ್ಯವಾಗಬಹುದು. ನಾವು ವಿಶ್ವ ಮಾನಸಿಕ ಆರೋಗ್ಯ ಕಾರ್ಯಕ್ರಮವನ್ನು ಬಡಾವಣೆಯ ಜನರಿಗೆ ಹೆಚ್ಚು ಹೆಚ್ಚು ತಲುಪಿಸುವುದರ ಮುಖಾಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.

ಜ್ಞಾನದೀಪ ಶಾಲೆಯ ಉಪನ್ಯಾಸಕ ಮಲ್ಲಿಕಾರ್ಜುನ್ ಅವರು ಸಾರ್ವಜನಿಕರಿಗೆ ಮಾನಸಿಕ ಕಾಯಿಲೆ ಬಗ್ಗೆ ರಸಪ್ರಶ್ನೆಗಳನ್ನು ಕೇಳುವುದರ ಮುಖಾಂತರ ಅವರಿಗೆ ನಗದು ಬಹುಮಾನ ಹಾಗೂ ಪುಸ್ತಕಗಳನ್ನು ಕ್ಷೇಮ ಟ್ರಸ್ಟ್ ವತಿಯಿಂದ ವಿತರಿಸಿದರು.

ಇದೇ ಸಂದರ್ಭದಲ್ಲಿ ಡಾ. ಕೆ.ಎಸ್.ಶುಭ್ರತಾ ಅವರು ಮಾನಸಿಕ ಕಾಯಿಲೆ ಹಾಗೂ ಜೀವನ ಶೈಲಿಯ ಬಗ್ಗೆ ಮಾತನಾಡಿದರು. ರಾಜೇಂದ್ರ ನಗರದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪ್ರೊ. ಜೆ.ಎಲ್.ಪದ್ಮನಾಭ ಅಧ್ಯಕ್ಷತೆ ವಹಿಸಿದ್ದರು. ಡಾ. ಕೆ.ಎಸ್.ಪವಿತ್ರಾ, ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ, ಸೂರ್ಯನಾರಾಯಣ ಮತ್ತಿತರರು ಉಪಸ್ಥಿತರಿದ್ದರು.

Related posts

ಸಮನ್ವಯ ಟ್ರಸ್ಟ್ ನಿಂದ ಉಚಿತ ವಾಚನಾಲಯ: ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅಧ್ಯಯನ ಕೇಂದ್ರ

ಮರ್ಯಾದಾ ಹತ್ಯೆ:  ಮಗಳನ್ನೆ ಕೊಂದು ಪೊಲೀಸ್ ಠಾಣೆಗೆ ಬಂದು ಶರಣಾದ ತಂದೆ.

ಲೋಕಸಭಾ ಚುನಾವಣೆ: ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧೆಗೆ ನಾನು ಪ್ರಬಲ ಆಕಾಂಕ್ಷಿ-ಹೆಚ್.ಎಸ್. ಸುಂದರೇಶ್