ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ಅಹವಾಲು ತಗೊಳ್ಳದು ಮುಖ್ಯವಲ್ಲ. ಉತ್ತರ ಕೊಡೋದು ಮುಖ್ಯ-ಶಿಕ್ಷಣ ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ : ‌ ಜನತಾದರ್ಶನ ನನಗೆ ಹೊಸದಲ್ಲ. ಜನರ ಸಮಸ್ಯೆ ಅರಿತಾಗ ಮಾತ್ರ ನಮಗೆ ಗೊತ್ತಾಗುತ್ತದೆ. ಅಹವಾಲು ತಗೊಳ್ಳದು ಮುಖ್ಯವಲ್ಲ. ಉತ್ತರ ಕೊಡೋದು ಮುಖ್ಯ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲು ಕೂಡಾ ಜನತಾದರ್ಶನ ನಡೆಯುತಿತ್ತು. ಸೊರಬ ಶಾಸಕನಾಗಿದ್ದಾಗ ಸಹ ಜನತಾದರ್ಶನ ಮಾಡಿದ್ದೆ.
ಇದೀಗ ಜನತಾದರ್ಶನ ನಡೆಸುತ್ತಿದ್ದು, ಜನರಿಗೆ ಇದರಿಂದ ಅನುಕೂಲ ಆಗಲಿದೆ ಎಂದರು.
ಮುಂಚೆ ಅಧಿಕಾರ ಮಾಡಿದವರ ಹಣೆಬರಹ ಏನು ಅಂತಾ ಇವತ್ತು ಗೊತ್ತಾಗುತ್ತದೆ. ಆಡಳಿತ ಹಿಡಿತ ತಗೋಬೇಕು ಅಂತಾ ಮುಖ್ಯಮಂತ್ರಿ ಈ ಕೆಲಸ ಮಾಡಿದ್ದಾರೆ. ಜನರ ಸಮಸ್ಯೆ ನಡುವೆ ಇದ್ದು ಪರಿಹಾರ ಕಂಡುಕೊಳ್ಳೋದು ಪ್ರಜಾಪ್ರಭುತ್ವ ದೃಷ್ಟಿಯಿಂದ ಒಳ್ಳೆಯದು ಎಂದರು.
ಕಾವೇರಿ ಹೋರಾಟ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಬಂದ್ ಮಾಡೋದು ಅವರ ಹಕ್ಕು. ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಆಗದ ಹಾಗೆ ಪ್ರತಿಭಟನೆ ಮಾಡಲಿ. ನಮ್ಮ ತಂದೆ ಬಂಗಾರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಕಾವೇರಿ ನೀರು ಬಿಡುಗಡೆ ವಿಚಾರದಲ್ಲಿ ದಿಟ್ಟ ನಿಲುವು ತೆಗೆದುಕೊಂಡಿದ್ದರು. ಇಂದು ಈ ವಿಷಯ ಸುಪ್ರೀಂ ಕೋರ್ಟ್ ನಲ್ಲಿದೆ. ಕೇಂದ್ರ ಸರ್ಕಾರ ವಸ್ತು ಸ್ಥಿತಿ ಅರಿತರೇ ಒಳ್ಳೆಯದು. ಕಾವೇರಿ‌ ನದಿ ವಿಚಾರದಲ್ಲಿ ರಾಜ್ಯ ರಾಜ್ಯಗಳ‌ ನಡುವೆ ಸಮಸ್ಯೆ ಆಗುತ್ತಿದೆ ಎಂದರು.
ಭದ್ರಾ ನೀರಾವರಿ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಮ್ಮದೇ ಸರ್ಕಾರ ಇದೆ, ದಾವಣಗೆರೆಯಲ್ಲಿ ರೈತರು ಪ್ರತಿಭಟನೆ  ಮಾಡ್ತಿದ್ದಾರೆ. ಅವರು ರೈತರೇ, ನಮ್ಮ ಜಿಲ್ಲೆಯವರೇ ರೈತರು. ಆಸೆಯಿಂದ ಭತ್ತ ನಾಟಿ ಮಾಡಿದ್ದಾರೆ.‌ದುಡಿಮೆ ಮಾಡಲು ಬೇಡ ಎನ್ನಲು ಆಗುತ್ತದಾ ? ನಾಳೆಯಿಂದ ನೀರು ಬಿಡಲೇ ಬೇಕಾಗುತ್ತದ ಎಂದು ಪ್ರತಿಕ್ರಿಯೆ ನೀಡಿದರು.
ಹೊಸ ಮದ್ಯದ ಅಂಗಡಿ ತೆರೆಯುವ ವಿಚಾರ ಕುರಿತು ಮದ್ಯ ಭಾಗ್ಯ ಕರುಣಿಸಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಲೇವಡಿ ವಿಚಾರಕ್ಕೆ ಪ್ರತಿಕ್ರಿಸಿದ ಮಧು ಬಂಗಾರಪ್ಪ, ಇಂತಹ ಹೇಳಿಕೆಗಳಿಗೆ ಎಲ್ಲಾ ಪ್ರತಿಕ್ರಿಯೆ ನೀಡಲ್ಲ. ಮಾಜಿ ಸಿಎಂ ಆದವರು ಟೀಕೆ ಮಾಡುವ ಮೊದಲು ಯೋಚನೆ ಮಾಡಲಿ. ನಮ್ಮ ಸರ್ಕಾರದ ಅಭಿವೃದ್ಧಿ ನೋಡಿ ಅವರಿಗೆ ಸಹಿಸಲಾಗುತ್ತಿಲ್ಲ. ವಿರೋಧ ಪಕ್ಷಗಳು ಜನರ ದಾರಿ ತಪ್ಪಿಸುವ ಹೇಳಿಕೆ ಕೊಟ್ಟರೆ ಅದು ನಿಮ್ಮ ಹಣೆ ಬರಹ, ನಮ್ಮ ಹಣೆಬರಹ ಅಲ್ಲ ಎಂದು ತಿರುಗೇಟು ನೀಡಿದರು.
ಶಿವಮೊಗ್ಗ ಸ್ಮಾರ್ಟ್ ಸಿಟಿ ಅವ್ಯವಹಾರ ತನಿಖೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಈಗಾಗಲೇ ಸ್ಮಾರ್ಟ್ ಸಿಟಿ ಅವ್ಯವಹಾರದ ಬಗ್ಗೆ ತನಿಖೆಗೆ ಸೂಚಿಸಲಾಗಿದೆ. ತನಿಖೆ ನಡೆಸಲು ನಮ್ಮಲ್ಲಿ ಸೂಕ್ತ ತನಿಖೆ ವ್ಯವಸ್ಥೆ ಇದೆ ಎಂದರು.
ತನಿಖೆ ನೆಪದಲ್ಲಿ ಗುತ್ತಿಗೆದಾರರು ಮನೆ ಬಾಗಿಲಿಗೆ ಬರಲಿ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಆರೋಪಕ್ಕೆ ಪ್ರತಿಕ್ರಿಸಿದ ಸಚಿವರು, ಹಾಗಾದರೆ ಗುತ್ತಿಗೆದಾರರು ಅವರ ಮನೆಗೆ ಹೋಗಿದ್ದಾರಾ ಎಂದು ಈಶ್ವರಪ್ಪಗೆ ತಿರುಗೇಟು ನೀಡಿದರು.

Related posts

ಸರ್ವಾಧಿಕಾರಿ ಕೇಂದ್ರ ಬಿಜೆಪಿ ಸರ್ಕಾರ ಕಿತ್ತೊಗೆಯಲು ಶ್ರಮಿಸಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರೆ..

ಎಲ್ಲ ಸದಸ್ಯರ ಸಹಕಾರಿಂದ ಸಂಘಟನೆ ಸದೃಢ-ಎನ್.ಗೋಪಿನಾಥ್

ಹಬ್ಬಗಳು ಸಂಸ್ಕೃತಿಯ ಪ್ರತಿಬಿಂಬ-ಡಾ. ಕೆ.ಆರ್.ಶ್ರೀಧರ್