ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ನ.08 ರಂದು ಕಸಾಪ ವತಿಯಿಂದ ದತ್ತಿ ಉಪನ್ಯಾಸ.

ಶಿವಮೊಗ್ಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ವಿವಿಧ ದತ್ತಿ ನಿಧಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನ.08 ರಂದು ಬುಧವಾರ ಬೆಳಗ್ಗೆ 10:30 ಕ್ಕೆ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯ  ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಡಾ. ಕೆ.ಎ. ಅಶೋಕ್ ಪೈ ಅವರು ನೀಡಿರುವ  ಕಟೀಲು ಅಪ್ಪು ಪೈ ಮತ್ತು ಶ್ರೀಮತಿ ವಿನೋಧಿನಿ ಪೈ ದತ್ತಿ ಆಶಯದಂತೆ ಮಾನಸಿಕ ಆರೋಗ್ಯ-ಶಿಕ್ಷಕರ ಪಾತ್ರ ಕುರಿತು ಉಪನ್ಯಾಸ ಏರ್ಪಡಿಸಲಾಗಿದೆ.

ಖ್ಯಾತ ಮನಶಾಸ್ತ್ರಜ್ಞರಾದ ಡಾ. ಪ್ರೀತಿ ಶಾನ್ ಭಾಗ  ಅವರು ವಿಶೇಷ ಉಪನ್ಯಾಸ ನೀಡಲಿದ್ದು, ಕಸಾಪ ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಉದ್ಘಾಟಿಸಿ ಕರ್ನಾಟಕ ಸುವರ್ಣ ಮಹೋತ್ಸವ ಸಂಭ್ರಮ ವಿಷಯ ಕುರಿತು ಮಾತನಾಡಲಿದ್ದಾರೆ. ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ. ಮಧು ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀಕಾಂತ್ ಎನ್.ಎಚ್., ಬೆಳೆಗದ್ದೆ ಪ್ರಭಾಕರ್ ಬಿ.ಆರ್., ಟಿ.ಪಿ. ನಾಗರಾಜ್, ಈರುಳ್ಳಿ ನಾಗರಾಜ್ ಎನ್. ಹೆಚ್., ಸುಮಿತ್ರಾ ಕೇಶವಮೂರ್ತಿ ಅವರು ಭಾಗವಹಿಸಲಿದ್ದಾರೆ.

ನ. 09 ರಂದು ಬೆಳಗ್ಗೆ 11 ಕ್ಕೆ ಅಲ್ ಮಹಮೂದ್ ಶಿಕ್ಷಣ ಮಹಾವಿದ್ಯಾಲಯ ಸಹಯೋಗದಲ್ಲಿ ಕಾಲೇಜು ಸಭಾಂಗಣದಲ್ಲಿ ಮಾಜಿ ನಗರಸಭಾ ಅಧ್ಯಕ್ಷರಾಗಿದ್ದ ಎಂ.ಕೆ. ಸುರೇಶ್ ಕುಮಾರ್ ಅವರು ತಮ್ಮ ತಂದೆ ಎಂ.ಆರ್. ಕೃಷ್ಣಶೆಟ್ಟಿ ಅವರ ಹೆಸರಲ್ಲಿ ನೀಡಿರುವ ದತ್ತಿ ಆಶಯದಂತೆ ನೀರು ನಿರ್ವಹಣೆ ಎಲ್ಲರ ಜವಾಬ್ದಾರಿ ವಿಚಾರವಾಗಿ ಮಹಾನಗರ ಪಾಲಿಕೆ ಸದಸ್ಯರಾದ ಯಮುನಾ ರಂಗೇಗೌಡ ಅವರು ಮಾತನಾಡಲಿದ್ದಾರೆ. ಕಸಾಪ ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಉದ್ಘಾಟಿಸಲಿದ್ದು, ಕಾಲೇಜು ಆಡಳಿತಾಧಿಕಾರಿ ಅಬ್ದುಲ್ ಅಹಾದ್ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ದಿ. ವೈ. ಎಸ್. ಪುಟ್ಟಣ್ಣ ಅವರು ಗುತ್ತಿ ಎಡೇಹಳ್ಳಿ ಸೂರಪ್ಪಗೌಡರ ಹೆಸರಲ್ಲಿ ನೀಡಿರುವ ದತ್ತಿ ಆಶಯದಂತೆ ಡಿ.ವಿ. ಗುಂಡಪ್ಪನವರ ಬದುಕು ಬರಹ ಕುರಿತು ವಿಶ್ರಾಂತ ಉಪಾಧ್ಯಕ್ಷರಾದ ಎಂ.ಎಸ್. ವಿನಾಯಕ ಅವರು ಉಪನ್ಯಾಸ ನೀಡಲಿದ್ದಾರೆ. ಕಾಲೇಜು ಪ್ರಾಂಶುಪಾಲರಾದ ಡಾ.ಎಂ. ಸೋಮಶೇಖರ್ ಉಪಸ್ಥಿತರಿರುವರು. ಕಸಾಪ ಸದಸ್ಯರು,  ಸಾಹಿತ್ಯ ಸಾಂಸ್ಕೃತಿಕ ಮನಸ್ಸುಗಳು ಭಾಗವಹಿಸಲು ಕಸಾಪ ಜಿಲ್ಲಾ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Related posts

ಇಡೀ ರಾಜ್ಯ ಬರಗಾಲ ಘೋಷಣೆಗೆ ಆಗ್ರಹ: ಸೆ.25ರಂದು ಧರಣಿ ಸತ್ಯಾಗ್ರಹ-ರೈತಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ

ಆಧಾರ್ ಲಿಂಕ್ ಮಾಡದ 11.5 ಕೋಟಿ ‘ಪ್ಯಾನ್ ಕಾರ್ಡ್’ ನಿಷ್ಕ್ರಿಯ..

7ನೇ ವೇತನ ಆಯೋಗ: ಸೆಪ್ಟೆಂಬರ್ 3ನೇ ವಾರದಲ್ಲಿ ಡಿಎ ಹೆಚ್ಚಳ ಘೋಷಣೆ ಸಾಧ್ಯತೆ.