ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಗೋಪೂಜೆಯಿಂದ ಮನಸ್ಸಿಗೆ ಶಾಂತಿ ನೆಮ್ಮದಿ-ಚಂದ್ರಹಾಸ ಪಿ ರಾಯ್ಕರ್

ಶಿವಮೊಗ್ಗ: ಗೋವಿನ ಪೂಜೆ ಮಾಡುವುದರಿಂದ ಕೋಟ್ಯಾಂತರ ದೇವರ ಪೂಜಿಸಿದ ಪುಣ್ಯ ಪ್ರಾಪ್ತಿ ಆಗುವ ಜತೆಯಲ್ಲಿ ಮನಸ್ಸಿಗೆ ಶಾಂತಿ ನೆಮ್ಮದಿ ಲಭಿಸುತ್ತದೆ. ಆರೋಗ್ಯಯುವ ಜೀವನಶೈಲಿ ನಮ್ಮದಾಗುತ್ತದೆ ಎಂದು ಜ್ಞಾನೇಶ್ವರಿ ಗೋಶಾಲೆಯ ಅಧ್ಯಕ್ಷ ಚಂದ್ರಹಾಸ ಪಿ ರಾಯ್ಕರ್ ಹೇಳಿದರು.

ದೀಪಾವಳಿ ಬಲಿಪಾಡ್ಯಮಿ ಪ್ರಯುಕ್ತ ಹುಣಸೋಡು ಗ್ರಾಮದಲ್ಲಿ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ ಸಂಕಲ್ಪದಂತೆ ಜ್ಞಾನೇಶ್ವರಿ ಗೋಶಾಲೆಯಲ್ಲಿ ಗೋಪೂಜೆ ನೆರವೇರಿಸಿ ಮಾತನಾಡಿ, ಗೋವುಗಳು ಕಾಮಧೇನು ಇದ್ದಂತೆ, ಪ್ರತಿ ದಿನ ಹಾಲು ಕರುಣಿಸುವ ಗೋಮಾತೆಯನ್ನು ಪ್ರತಿಯೊಬ್ಬರೂ ಪೂಜಿಸುವುದರಿಂದ ಸಕಲವು ಒಳಿತಾಗುತ್ತದೆ ಎಂದು ತಿಳಿಸಿದರು.

ಬಿಡಾಡಿ ಗೋವುಗಳು ಹಾಗೂ ಅಪಘಾತದಲ್ಲಿ ಗಾಯಗೊಂಡ ಜಾನುವಾರುಗಳನ್ನು ಜ್ಞಾನೇಶ್ವರಿ ಗೋಶಾಲೆಯಲ್ಲಿ ಚಿಕಿತ್ಸೆ ನೀಡಿ ಗುಣಪಡಿಸಲಾಗುತ್ತದೆ. ಎಲ್ಲ ಟ್ರಸ್ಟಿಗಳ ಸಹಕಾರದಿಂದ ತುಂಬಾ ಉತ್ತಮವಾಗಿ ಗೋಶಾಲೆಯು ನಡೆಯುತ್ತಿದೆ ಎಂದರು.

ಜನ್ಮದಿನ, ವಿವಾಹ ವಾರ್ಷಿಕೋತ್ಸವ ಸೇರಿದಂತೆ ವಿಶೇಷ ಸಂದರ್ಭದಲ್ಲಿ ಸಾರ್ವಜನಿಕರು ಗೋಶಾಲೆಗೆ ಹುಲ್ಲು, ಹಿಂಡಿ, ಮೇವು, ಬಾಳೆಹಣ್ಣು, ಬೆಲ್ಲ, ಅಕ್ಕಿ ಸೇರಿದಂತೆ ನೆರವು ನೀಡಬಹುದಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯ್‌ಕುಮಾರ್ ಮಾತನಾಡಿ, ಗೋವುಗಳ ಸಂರಕ್ಷಣೆ ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಕರ್ತವ್ಯ. ಸಮಾಜಮುಖಿ ಹಾಗೂ ಪವಿತ್ರವಾದ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.

ಗೋಪೂಜೆ ಪ್ರಯುಕ್ತ 156 ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು. ಉಪಾಧ್ಯಕ್ಷ ಪ್ರಶಾಂತ್ ರಾಯ್ಕರ್, ಕಾರ್ಯದರ್ಶಿ ಗುರುರಾಜ್ ಎಂ ಶೇಟ್, ಖಜಾಂಚಿ ಗಣೇಶ್ ಆರ್., ಸತೀಶ್, ಕಮಲಾಕ್ಷ, ದೇವಿದಾಸ್ ಶೇಟ್, ಪಾಂಡುರಂಗ ಶೇಟ್, ಪಾಂಡುರಂಗ ಶೇಟ್, ಸಂತೋಷ್, ವಿಜಯ ರಾಯ್ಕರ್, ಶೇಷಾದ್ರಿ, ರಾಘವೇಂದ್ರ ಕೆ, ಮಹಾನಗರ ಪಾಲಿಕೆ ಸದಸ್ಯ ವಿಶ್ವಾಸ್, ಬಿಂದು ವಿಜಯ್‌ಕುಮಾರ್, ಗೌರಿ ಗುರುರಾಜ್, ಶ್ರೀಪಾದ ರೇವಣಕರ್, ರಾಧಾಕೃಷ್ಣ ರಾಯ್ಕರ್ ಮತ್ತಿತರರು ಉಪಸ್ಥಿತರಿದ್ದರು.

Related posts

900 ಹೆಣ್ಣು ಭ್ರೂಣಗಳ ಹತ್ಯೆ: ಇಬ್ಬರು ವೈದ್ಯರು ಸೇರಿ 9 ಮಂದಿ ಅಂದರ್.

ಯುವ ಕಾಂಗ್ರೆಸ್ ನಿಂದ ಸ್ವಾತಂತ್ರೋತ್ಸವ ದಿನಾಚರಣೆ – ಮಹಿಳಾ ಸಬಲೀಕರಣಕ್ಕೆ ಶಕ್ತಿ ನೀಡಲು ಎಲ್ಲಾ ಬ್ಲಾಕ್ ಮಟ್ಟದಲ್ಲಿ ಮಹಿಳೆಯರಿಂದ ಧ್ವಜಾರೋಹಣ – ಜಿಲ್ಲಾಧ್ಯಕ್ಷ ಹೆಚ್‍.ಪಿ.ಗಿರೀಶ್

ಹೊಸ ಗಿನ್ನೆಸ್ ದಾಖಲೆ: ಅಯೋಧ್ಯೆ ಬೆಳಗಿದ 22 ಲಕ್ಷ ಹಣತೆ…