ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ವಿನೋಬನಗರ ಠಾಣೆಗೆ ಹಾಜರಾಗಿ ನೋಟಿಸ್ ಗೆ ಉತ್ತರಿಸಿದ ಚಕ್ರವರ್ತಿ ಸೂಲಿಬೆಲೆ.

ಶಿವಮೊಗ್ಗ: ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಅವರು ನಿನ್ನೆ ರಾತ್ರಿ ಎಫ್‍ಐಆರ್ ಗೆ ಸಂಬಂಧಿಸಿದಂತೆ ಇಲ್ಲಿನ ವಿನೋಬನಗರ ಠಾಣೆಗೆ ಹಾಜರಾಗಿ ತಮಗೆ ನೀಡಿದ್ದ ನೋಟೀಸಿಗೆ ಉತ್ತರ ನೀಡಿದರು.
ಕೆಲವು ದಿನಗಳ ಹಿಂದೆ ಕೆಪಿಸಿಸಿ ಸಾಮಾಜಿಕ ಜಾಲತಾಣದ ರಾಜ್ಯ ಉಪಾಧ್ಯಕ್ಷೆ ಸೌಗಂಧಿಕ ರಘುನಾಥ್ ಅವರು ಸೂಲಿಬೆಲೆ ಅವರ ವಿರುದ್ದ ವಿನೋಬನಗರದ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಎಫ್‍ಐಆರ್ ದಾಖಲಿಸಿಕೊಂಡ ಪೊಲೀಸರು ಸೂಲಿಬೆಲೆ ಅವರಿಗೆ ನೋಟೀಸ್ ನೀಡಿ ಠಾಣೆಗೆ ಬಂದು ಹೇಳಿಕೆ ನೀಡುವಂತೆ ನಿರ್ದೇಶನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸೂಲಿಬೆಲೆ ಅವರು ಠಾಣೆಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಮತ್ತು ನಮೋ ಬ್ರಿಗೇಡ್ ಸದಸ್ಯರೊಂದಿಗೆ ಹಾಜರಾಗಿ ಹೇಳಿಕೆ ನೀಡಿದರು.
ಈ ಸಂದರ್ಭದಲ್ಲಿ ನಮೋ ಬ್ರಿಗೇಡ್ ಕಾರ್ಯಕರ್ತರು ಮತ್ತು ಸೂಲಿಬಲೆ ಬೆಂಬಲಿಗರು ವಿನೋಬನಗರದ ಪೊಲೀಸ್ ಚೌಕಿ ವೃತ್ತದ ಬಳಿ ಜಮಾಯಿಸಿ ಸರ್ಕಾರದ ವಿರುದ್ದ ಘೋಷಣೆ ಕೂಗಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸೂಲಿಬೆಲೆ ಅವರು ,ಕಾಂಗ್ರೆಸ್ ಸರ್ಕಾರ ಸಜ್ಜನ ಶಕ್ತಿಗಳನ್ನು ದಮನಮಾಡಲು ಹೊರಟಿದೆ. ಸಾಮಾಜಿಕ ಜಾಲತಾಣದಲ್ಲಿ ಬಂದಿರುವ ಒಂದು ಚಿಕ್ಕ ವಿಷಯವನ್ನು ದೊಡ್ಡದಾಗಿ ಮಾಡಿ ಎಫ್‍ಐಆರ್ ದಾಖಲಿಸಿದೆ. ಇದಕ್ಕೆ ನಾವೇನೂ ಜಗ್ಗುವುದಿಲ್ಲ. ಬಗ್ಗುವುದೂ ಇಲ್ಲ. ಹೆದರುವುದೂ ಇಲ್ಲ. ಕಾನೂನಿನ ಮೂಲಕ ಹೋರಾಟ ಮಾಡುತ್ತೇವೆ. ಈ ಭಯ ಹುಟ್ಟಿಸುವ ಕೆಲಸ ಸರ್ಕಾರಕ್ಕೆ ಸಾಧ್ಯವಿಲ್ಲ. ನಾವು ಹೋರಾಟದ ಹಾದಿಯಲ್ಲಿ ಬಂದವರು. ಹೋರಾಟವನ್ನು ಮುಂದುವರಿಸುತ್ತೇವೆ. ಕೆಲವು ಕಾಂಗ್ರೆಸ್ ನಾಯಕರು ಚಕ್ರವರ್ತಿಯನ್ನು ಜೈಲಿಗೆ ಕಳಿಸುತ್ತೇವೆ. ಪೊಲೀಸ್ ಠಾಣೆಗೆ ಕರೆಸುತ್ತೇವೆ ಎಂದಿದ್ದರು. ಈ ರೀತಿ ಕರೆಸುತ್ತಾರೆ ಎಂದು ಗೊತ್ತಿರಲಿಲ್ಲ ಎಂದ ಅವರು, ಇದು ಪುಕ್ಕಲು ಸರ್ಕಾರ ಎಂದು ಟೀಕಿಸಿದರು.
ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಕಾಂಗ್ರೆಸ್ ಸರ್ಕಾರ ಏನೋ ಭಾರೀ ಬದಲಾವಣೆ ಮಡಲು ಹೊರಟಂತಿದೆ. ಇದು ಅವರ ಮುಟ್ಠಾಳ ತನವಷ್ಟೆ. ಉರಿ ಎಂಬ ಪದ ಸಾಮಾನ್ಯವಾದುದು ಈ ಉರಿಯಲ್ಲಿ ಅನೇಕ ಅರ್ಥಗಳಿವೆ. ಕಾಂಗ್ರೆಸ್ಸಿಗರು ಉರಿ ಸಿನಿಮಾವನ್ನು ನೋಡಿರಬಹುದು. ಹಾಗಾಗಿ ಅವರು ಉರಿದುಕೊಳ್ಳುವ ಅವಶ್ಯಕತೆ ಇಲ್ಲ ಎಂದರು.
ಚಕ್ರವರ್ತಿ ಸೂಲಿಬೆಲೆ ಅವರು ರಾಷ್ಟ್ರ ಭಕ್ತರು ಅವರನ್ನು ಅವಮಾನ ಮಾಡಲೆಂದೇ ಪೊಲೀಸರು ಸರ್ಕಾರದ ನಿರ್ದೇಶನಕ್ಕೆ ಅಸಹಾಯಕರಾಗಿ ಠಾಣೆಗೆ ಕರೆತಂದಿದ್ದಾರೆ. ಇದು ಸರ್ಕಾರದ ನೀಚತನವಷ್ಟೆ ಎಂದರು.

Related posts

ಮಕ್ಕಳ ಮೊಬೈಲ್, ಟಿವಿ ವೀಕ್ಷಣೆಗೆ ಬೀಳಬೇಕಿದೆ ಕಡಿವಾಣ: ಇಲ್ಲದಿದ್ರೆ ಸಮಸ್ಯೆ ಕಟ್ಟಿಟ್ಟ ಬುತ್ತಿ..

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಬಲ ಭೂಕಂಪ.

ಬಿಜೆಪಿ ಮಾಜಿ ಶಾಸಕಿ ಮನೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ಭೇಟಿ: ಕಾಂಗ್ರೆಸ್ ಸೇರ್ತಾರಾ ಪೂರ್ಣಿಮಾ ಶ್ರೀನಿವಾಸ್..