ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಸಿರಿಧಾನ್ಯ ಅಡುಗೆ ಮಾಡುವ ಸ್ಪರ್ಧೆ ಅ. 16ಕ್ಕೆ

ಶಿವಮೊಗ್ಗ: 2023ನೇ ವರ್ಷವನ್ನು ವಿಶ್ವ ಸಿರಿಧಾನ್ಯ ವರ್ಷ ಘೋಷಿಸಿರುವ ಹಿನ್ನೆಲೆಯಲ್ಲಿ ವಿಶ್ವ ಆಹಾರ ದಿನಾಚರಣೆ ಪ್ರಯುಕ್ತ ಅಕ್ಟೋಬರ್ 16ರಂದು ಸೋಮವಾರ ಸಂಜೆ 4.30ಕ್ಕೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಸಂಘದ ಸಭಾಂಗಣದಲ್ಲಿ “ಸಿರಿಧಾನ್ಯ ಅಡುಗೆ ಮಾಡುವ ಸ್ಪರ್ಧೆ” ಹಮ್ಮಿಕೊಳ್ಳಲಾಗಿದೆ.
ಸಾರ್ವಜನಿಕರು, ಸಂಘ ಸಂಸ್ಥೆಗಳು, ಹೊಟೇಲ್ ಹಾಗೂ ಇತರರು ರುಚಿ ಶುಚಿಯಾಗಿ ಸಿರಿಧಾನ್ಯ ಆಹಾರ ತಯಾರಿಸುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಆಸಕ್ತ ಸ್ಪರ್ಧಿಗಳು ಸಿರಿಧಾನ್ಯವನ್ನು ಬಳಸಿ ತಯಾರಿಸಿದ ಆಹಾರವನ್ನು ಪ್ರದರ್ಶಿಸಿ ಬಹುಮಾನ ಪಡೆಯಬಹುದು.
ಉತ್ತಮವಾಗಿ ರುಚಿ ಶುಚಿಯಾಗಿ ಆಹಾರ ತಯಾರಿಸಿದವರಿಗೆ ಮೊದಲನೇ ಬಹುಮಾನ 3000 ರೂ., ಎರಡನೇ ಬಹುಮಾನ 2 ಸಾವಿರ ರೂ., ಹಾಗೂ ಮೂರನೇ ಬಹುಮಾನ 1 ಸಾವಿರ ರೂ. ಹಾಗೂ ಪ್ರಮಾಣ ಪತ್ರ ನೀಡಲಾಗುವುದು.
ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಸಾರ್ವಜನಿಕರು, ಸಂಘ ಸಂಸ್ಥೆಗಳು, ಹೊಟೇಲ್ ಹಾಗೂ ಇತರರು ಎಂಬ ಪ್ರತ್ಯೇಕ ವಿಭಾಗಗಳಲ್ಲಿ ಬಹುಮಾನ ನೀಡಲಾಗುವುದು. ಪ್ರತಿ ವಿಭಾಗದಲ್ಲೂ ಮೊದಲ 20 ಸ್ಪರ್ಧಿಗಳಿಗೆ ಅವಕಾಶ ಇದೆ.
ಕಡ್ಡಾಯವಾಗಿ ಸಿರಿಧಾನ್ಯದಿಂದಲೇ ಮನೆಯಲ್ಲಿ ತಯಾರಿ ಮಾಡಿಕೊಂಡು ತರಬೇಕು. ತೀರ್ಪುಗಾರರ ತೀರ್ಮಾನವೇ ಅಂತಿಮ. ಹೆಚ್ಚಿನ ವಿವರಗಳಿಗೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನಿರ್ದೇಶಕ ಗಣೇಶ ಎಂ.ಅಂಗಡಿ 9880044040/7019870585 ಸಂಪರ್ಕಿಸಬಹುದಾಗಿದೆ. ಪ್ರವೇಶ ಶುಲ್ಕ 100 ರೂ. ಇರಲಿದೆ.

Related posts

ಆ. 20ರಿಂದ 26 ರವರೆಗೆ ಕುವೆಂಪು ವಿವಿ ಮಟ್ಟದ ಅಂತರ ಕಾಲೇಜು ಶಿಬಿರ.

11 ಶಾಸಕರು ನನ್ನ ಬಳಿ ಜೆಡಿಎಸ್-ಬಿಜೆಪಿ ಮೈತ್ರಿ ಬೇಡ ಎಂದಿದ್ದಾರೆ- ಹೊಸಬಾಂಬ್ ಸಿಡಿಸಿದ ಸಿಎಂ ಇಬ್ರಾಹಿಂ

ತಾಳಿ ಕಟ್ಟಿದ ಬೆನ್ನಲ್ಲೆ ಮದುವೆ ಡ್ರೆಸ್ ನಲ್ಲೇ ಪರೀಕ್ಷಾ ಕೇಂದ್ರಕ್ಕೆ ಎಂಟ್ರಿ ಕೊಟ್ಟ ನವವಧು…