ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಬಸವೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮ

ಶಿವಮೊಗ್ಗ: ಬಸವೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕವಯಿತ್ರಿ ಕನ್ನಡದ ಅಸ್ತಿತ್ವದ ಜೊತೆಗೆ ಅಸ್ಮಿತೆಯನ್ನೂ ಉಳಿಸಿಕೊಳ್ಳಬೇಕಾಗಿದೆ. ರಾಜ್ಯ ಸರ್ಕಾರ ಕನ್ನಡ ಭಾಷೆಗೆ ಗೌರವ ಕೊಡುವುದರ ಜೊತೆಗೆ ಕನ್ನಡ ಶಾಲೆಗಳನ್ನು ಉಳಿಸಬೇಕಾಗಿದೆ. ಮಕ್ಕಳು ಯಾವುದೇ ಭಾಷೆ ಕಲಿಯಲಿ ತಪ್ಪಿಲ್ಲ. ಆದರೆ ಕನ್ನಡ ಭಾಷೆಗೆ ಆದ್ಯತೆ ನೀಡಬೇಕು ಕನ್ನಡ ನಮಗೇನು ಕೊಡುತ್ತದೆ ಎಂಬ ಮನಸ್ಥಿತಿಯಿಂದ ಹೊರಬರಬೇಕು.ಕನ್ನಡ ಅನ್ನದ ಭಾಷೆಯಾಗಬೇಕು ಎಂದರು.
ಕನ್ನಡ ನೆಲ, ಜಲ, ಭಾಷೆಗಾಗಿ ಪ್ರತಿಯೊಬ್ಬರೂ ಪಣ ತೊಡಬೇಕಾಗಿದೆ. ಅದರಲ್ಲೂ ಯುವ ಪೀಳಿಗೆಯ ಪಾತ್ರ ಸಾಕಷ್ಟಿದೆ. ಮಾತೃಭಾಷೆಯೇ ಶ್ರೇಷ್ಠ ಎಂಬುದನ್ನು ಜಗತ್ತಿನ ವಿದ್ವಾಸಂರೇ ಅಭಿಪ್ರಾಯಪಡುತ್ತಾರೆ. ಕನ್ನಡ ಉಳಿಸಲು, ಬೆಳೆಸಲು ಪ್ರತಿಯೊಬ್ಬರೂ ಕಂಕಣಬದ್ಧರಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಕೆ.ಹಚ್. ರಾಜು ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಾಂಸ್ಕøತಿಕ ವೇದಿಕೆ ಕಾರ್ಯದರ್ಶಿ ಪ್ರಿಯಾ,ಉಪನ್ಯಾಸಕರಾದ ನಾರಾಯಣ, ಡಿ.ಪಿ. ಪ್ರತಿಭಾ ಮುಂತಾದವರಿದ್ದರು. ಆಕಾಶವಾಣಿ ಕಲಾವಿದೆ ವಿದ್ಯಾ ಮಂಜುನಾಥ್ ಸಂಗಡಿಗರಿಂದ ಹಾಡುಗಾರಿಕೆ ನಡೆಯಿತು.

Related posts

ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ : ಮೂವರು ಆರೋಪಿಗಳ ಬಂಧನ.

ಪ್ರವಚನದಿಂದ ಸಂಸ್ಕಾರದ ಬೆಳವಣಿಗೆ:ಶಾಸಕ ತಮ್ಮಯ್ಯ

ನಾಟಕಕ್ಕೆ ತನ್ನದೇ ಆದ ಒಂದು ವಿಶೇಷ ಗಮ್ಮತ್ತಿದೆ-ಚಲನಚಿತ್ರ ನಟ ದೊಡ್ಡಣ್ಣ