ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಕಾವೇರಿ ನದಿ ನೀರು ವಿವಾದ: ವಿಚಾರಣೆ ಸೆ.6ಕ್ಕೆ ಮುಂದೂಡಿಕೆ.

ನವದೆಹಲಿ:  ಕಾವೇರಿ  ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನ ಸುಪ್ರೀಂಕೋರ್ಟ್ ಸೆಪ್ಟಂಬರ್ 6ಕ್ಕೆ ಮುಂದೂಡಿಕೆ ಮಾಡಿದೆ.

ಅರ್ಜಿ ವಿಚಾರಣೆ ಇಂದು ನಡೆಯುವುದೇ ಅನುಮಾನವಾಗಿತ್ತು. ನ್ಯಾಯಮೂರ್ತಿ ಗವಾಯಿ ನೇತೃತ್ವದ ಪೀಠದ ವಿಚಾರಣಾ ಪಟ್ಟಿಯಲ್ಲಿ ಪ್ರಕರಣದ ಬಗ್ಗೆ ಉಲ್ಲೇಖಿಸದೇ ಇರುವುದರಿಂದ ಇಂದು ವಿಚಾರಣೆ ನಡೆಯುವುದು ಅನುಮಾನ ಎಂದು  ಹೇಳಲಾಗಿತ್ತು. ಆದರೆ, ಕೊನೆಗೂ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್​ ಕೈಗೆತ್ತಿಕೊಂಡಿತು.

ನಾವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಪಾಲಿಸಿದ್ದೇವೆ ಎಂದು ಕರ್ನಾಟಕ ಪರ ವಕೀಲ ಶ್ಯಾಮ್ ದಿವಾನ್ ಸುಪ್ರೀಂ ಕೋರ್ಟ್ ​ಗೆ ತಿಳಿಸಿದರು. ಈ ವೇಳೆ ತಮಿಳುನಾಡು ಪರ ವಕೀಲ ಮುಕುಲ್ ರೋಹಟಗಿ ವಾದ ಮಂಡನೆ ಮಾಡಿ, 5000 ಕ್ಯೂಸೆಕ್ ನೀರು ಸಾಕಾಗುವುದಿಲ್ಲ. ಕರ್ನಾಟಕವು ಹೆಚ್ಚು ನೀರು ಹರಿಸಬೇಕು ಎಂದು  ಮನವಿ ಮಾಡಿದರು.

ಈ ಮಧ್ಯೆ  ಸೆಪ್ಟೆಂಬರ್ 11ರಂದು ವಿಚಾರಣೆ ನಡೆಸುಂತೆ ಕರ್ನಾಟಕದ ವಕೀಲರು ಒತ್ತಾಯಿಸಿದರು. ಆದರೆ, ಸೋಮವಾರ ವಿಚಾರಣೆ ನಡೆಸುವಂತೆ ತಮಿಳುನಾಡು ವಕೀಲರು ಆಗ್ರಹಿಸಿದರು. ಕೊನೆಯದಾಗಿ ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 6ರ ಬುಧವಾರಕ್ಕೆ ವಿಚಾರಣೆಯನ್ನು ಮುಂದೂಡಿಕೆ ಮಾಡಿತು.

ರಾಜ್ಯದಲ್ಲಿ ವಾಡಿಕೆಯಂತೆ ಮಳೆಯಾಗದೇ ಕೆಆರ್ ಎಸ್ ಜಲಾಶಯ ಭರ್ತಿಯಾಗದಿದ್ದರೂ ಸಹ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ತಮಿಳುನಾಡಿಗೆ ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸುತ್ತಿದೆ.

Related posts

ಬೊಮ್ಮಾಯಿ ಸರ್ಕಾರ ಇದ್ದಾಗ ರಾತ್ರೋ ರಾತ್ರಿ ತಮಿಳುನಾಡಿಗೆ ನೀರು ಬಿಟ್ಟಿಲ್ವಾ..?- ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು.

ಎಲ್ಲೆಂದರಲ್ಲಿ ಅಪರಿಚಿತರಿಗೆ ‘ಆಧಾರ್, ಪ್ಯಾನ್ ಕಾರ್ಡ್’ ಕೊಡುವ ಮುನ್ನ ಇರಲಿ ಎಚ್ಚರ.!

ದಿ:ಬಂಗಾರಪ್ಪನವರ 90ನೇ ಹುಟ್ಟುಹಬ್ಬ ವಿಶೇಷ ಲೇಖನ: ಬಡವರನ್ನು ಕಂಡರೆ ಅವರ ಮನ ಮಿಡಿಯುತ್ತಿತ್ತು….