ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ರಾಜ್ಯದಲ್ಲಿ 9 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ಕಡ್ಡಾಯ.

ಬೆಂಗಳೂರು: ಮಕ್ಕಳ ಕಲಿಕಾ ದೃಷ್ಟಿಯಿಂದ ಕಲಿಕಾ ಬಲವರ್ಧನೆ ಮಾಡಲು 9 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

9ನೇ ತರಗತಿ ಮಕ್ಕಳ ಕಲಿಕಾ ದೃಷ್ಟಿಯಿಂದ ಮಕ್ಕಳಿಗೆ ಸಂಕಲನಾತ್ಮಕ ಮೌಲ್ಯಮಾಪನ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಹಾಗೂ 11ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ನಡೆಸುವಂತೆ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಖಾಸಗಿ ಶಾಲೆಗಳಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ನೀಡಿದೆ.

ಈ ಹಿಂದೆ 5 ಮತ್ತು 8ನೇ ತರಗತಿ ಮಕ್ಕಳಿಗೆ ಬೋರ್ಡ್ ಪರೀಕ್ಷೆ ಮಾಡಿ ಶಿಕ್ಷಣ ಇಲಾಖೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಹಲವರ ವಿರೋಧದ ಮಧ್ಯೆಯೇ ಈಗ 9 ಮತ್ತು 11ನೇ ತರಗತಿ ಮಕ್ಕಳಿಗೆ ಪಬ್ಲಿಕ್ ಎಕ್ಸಾಂ ನಡೆಸುವ ತಯಾರಿಯಲ್ಲಿ ಶಿಕ್ಷಣ ಇಲಾಖೆ ಇದೆ.

ಮಕ್ಕಳ ಕಲಿಕಾ ದೃಷ್ಟಿಯಿಂದ 9ನೇ ತರಗತಿ ಮಕ್ಕಳಿಗೆ ಸಂಕಲಾನತ್ಮಕ ಮೌಲ್ಯ ಮಾಪನ ಪರೀಕ್ಷೆ ನಡೆಸುತ್ತಿದ್ದು, 11ನೇ ತರಗತಿ ಮಕ್ಕಳಿಗೆ ವಾರ್ಷಿಕ ಪರೀಕ್ಷೆ ನಡೆಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ. ಸದ್ಯ ಕಳೆದ ವರ್ಷವಷ್ಟೇ 5 ಮತ್ತು 8ನೇ ತರಗತಿ ಮಕ್ಕಳಿಗೆ ಮೌಲ್ಯಾಂಕನ ಪರೀಕ್ಷೆ ಮಾಡಿದ್ದ ಶಿಕ್ಷಣ ಇಲಾಖೆ , ಆ ಬೆನ್ನಲ್ಲೇ ಈಗ ಸಾಕಷ್ಟು ವಿರೋಧಗಳ ಮಧ್ಯೆಯೇ ಈ ವರ್ಷ 9 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ಸೂಚನೆ  ನೀಡಿದೆ.

ಪ್ರಸಕ್ತ ಸಾಲಿನಲ್ಲಿ 2023/24ನೇ ಸಾಲಿನಲ್ಲಿಯೇ ಈ ನಿಯಮ ಜಾರಿ ಮಾಡುವ ಬಗ್ಗೆ ಶಿಕ್ಷಣ ಇಲಾಖೆ ಸೂಚಿಸಿದೆ. ಪ್ರಥಮ ಪಿಯುಸಿ ಪಬ್ಲಿಕ್ ಪರೀಕ್ಷೆ ದ್ವೀತಿಯ ಪಿಯು ಪರೀಕ್ಷೆಗಿಂತ ಕೊಂಚ ಭಿನ್ನವಾಗಿದೆ. ಪ್ರಥಮ, ದ್ವೀತಿಯ ಪಿಯು ಪರೀಕ್ಷೆ ಪ್ರಮುಖ ವ್ಯತ್ಯಾಸ ಏನಪ್ಪಾ ಅಂತ ಕೇಳಿದ್ರೆ ದ್ವಿತೀಯ ಪಿಯುಸಿಯಲ್ಲಿ ಪರೀಕ್ಷಾ ಮೌಲ್ಯ ಮಾಪನ ಬೇರೆ ಕಡೆ ನಡೆಯುತ್ತದೆ. ಆದರೆ ಪ್ರಥಮ ಪಿಯು ಪರೀಕ್ಷೆ ಮೌಲ್ಯಮಾಪನ ಆಯಾ ಕಾಲೇಜುಗಳಲ್ಲಿ ನಡೆಯುತ್ತದೆ.

ದ್ವೀತಿಯ ಪಿಯು ಪರೀಕ್ಷೆಯಲ್ಲಿ ಇರುವ ಹಾಗೇ ಮೇಲ್ವಿಚಾರಕರು ಪ್ರಥಮ ಪಿಯು ಅಲ್ಲಿಯೂ ಇರುತ್ತಾರೆ. ದ್ವೀತಿಯ ಪಿಯು ಪರೀಕ್ಷೆ ಹಾಗೆಯೇ ಇಲ್ಲಿಯೂ ಪರೀಕ್ಷಾ ಪ್ರಕ್ರಿಯೆ ನಡೆಯುತ್ತದೆ. ಪ್ರಶ್ನೆ ಪತ್ರಿಕೆಯನ್ನು ಇಲ್ಲಿಯೂ ಕೂಡ ಪಿಯು ಬೋರ್ಡ್ನಿಂದಲೇ ಕಳುಹಿಸಲಾಗುತ್ತದೆ.

ಇನ್ನೂ 9ನೇ ತರಗತಿ ಸಂಕಲನತ್ಮಕ ಮೌಲ್ಯಾ ಮಾಪನ ಪರೀಕ್ಷೆ ಹೇಗಿರುತ್ತದೆ ಅಂದ್ರೆ ಇದು ಮೊದಲಿನ ಹಾಗೇ 5 ಮತ್ತು 8ನೇ ತರಗತಿ ಪರೀಕ್ಷೆ ನಡೆದ ಹಾಗೇ ನಡೆಯುತ್ತೆ. ಇಲ್ಲಿ ಪರೀಕ್ಷೆಯನ್ನು ಜಿಲ್ಲಾ ಹಂತದಲ್ಲೇ ಮಾಡಲಾಗುತ್ತದೆ. ಆಯಾ ಶಾಲೆಯ ಶಿಕ್ಷಕರೇ ಪರೀಕ್ಷೆ ನಡೆಸುತ್ತಾರೆ, ಮೌಲ್ಯಮಾಪನ ನಡೆಸುತ್ತಾರೆ.

ಮಕ್ಕಳ ಕಲಿಕೆಯ ದೃಷ್ಠಿಯಿಂದ ಮಕ್ಕಳ ಶೈಕ್ಷಣಿಕ ಭವಿಷ್ಯ ಸ್ಟ್ರಾಂಗ್ ಮಾಡಲು ಕಲಿಕಾ ಬಲವರ್ಧನೆಗೆ ಈ ತರಹದ ಪರೀಕ್ಷೆಗಳು ಅತ್ಯಗತ್ಯ. ಇದರಿಂದ ಪರೀಕ್ಷೆಗೆ ಸಜ್ಜಾದಷ್ಟು ಮಕ್ಕಳ ಕಲಿಕಾ ಗುಣಮಟ್ಟ ಅರ್ಥ ಆಗುತ್ತದೆ ಅನ್ನೋ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಈ ನಿರ್ಧಾರ ಕೈಗೊಂಡು ಆದೇಶ ಹೊರಡಿಸಿದೆ.

 

Related posts

ಕುಗ್ಗುತ್ತಿದೆ ಚೀನಾ ಪ್ರಭಾವ: ಪ್ರಮುಖ ಉತ್ಪಾದನ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ ಭಾರತ

ಒಂದು ರಾಷ್ಟ್ರ, ಒಂದು ಚುನಾವಣೆ: ಪರಿಶೀಲನೆಗೆ ಮಾಜಿ ರಾಷ್ಟ್ರಪತಿ ನೇತೃತ್ವದಲ್ಲಿ ಸಮಿತಿ ರಚನೆ.

ಮಂಗಳೂರಿನ ಸಹ್ಯಾದ್ರಿಯಲ್ಲಿ PGCET ಟ್ರೈನಿಂಗ್ .