ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ಬಿಜೆಪಿ ಮುಳುಗುತ್ತಿರುವ ಹಡಗಲ್ಲ, ಈಗಾಗಲೇ ಮುಳುಗಿರುವ ಹಡಗು- ಸಚಿವ ಎಂ.ಬಿ ಪಾಟೀಲ್ ವ್ಯಂಗ್ಯ

ಬೆಂಗಳೂರು: ಬಿಜೆಪಿ ಮುಳುಗುತ್ತಿರುವ ಹಡಗಲ್ಲ, ಈಗಾಗಲೇ ಮುಳುಗಿರುವ ಹಡಗು ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಲೇವಡಿ ಮಾಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಆಪರೇಷನ್ ಕಮಲ ಮಾಡಬೇಕಾದರೆ 65 ಶಾಸಕರು ಬೇಕು. ಬಿಜೆಪಿಗೆ ಅಷ್ಟು ಶಾಸಕರು ಸಿಗುತ್ತಾರಾ? 5 ಶಾಸಕರು ಕೂಡ ಸಿಗಲ್ಲ.  ಆಪರೇಷನ್ ನಂತರ ಬಿಜೆಪಿಯವರ ಕಥೆ ಏನಾಗಿದೆ ಗೊತ್ತಿದೆಯಲ್ಲ. ಬಿಜೆಪಿಯಲ್ಲಿ ನಾಯಕರಿಲ್ಲ ಎಂದು ರೇಣುಕಾಚಾರ್ಯ ಹೇಳಿದ್ದಾರೆ. ಬಿಜೆಪಿಯಲ್ಲಿ ಏನೂ ಉಳಿದಿಲ್ಲ, ಸಂಪೂರ್ಣ ನಿರ್ಣಾಮವಾಗುತ್ತದೆ ಎಂದು ಕಿಡಿಕಾರಿದರು.

ಶಾಸಕ ರಮೇಶ್ ಜಾರಕಿಹೊಳಿ ಮತ್ತು ಮಾಜಿ ಸಿಎಂ ಜಗದೀಶ್ ಶೆಟ್ಟರ್​ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಎಂ.ಬಿ ಪಾಟೀಲ್,  ವೈಯಕ್ತಿಕ ಭೇಟಿಯೋ ಅಥವಾ ರಾಜಕೀಯ ಭೇಟಿನೋ ನನಗೆ ಗೊತ್ತಿಲ್ಲ. ರಮೇಶ್​ ಜಾರಕಿಹೊಳಿಗೆ ಕಾಂಗ್ರೆಸ್ ಸೇರುವ ಒಲವು ಇರಬಹುದು. ಬೇರೆ ಪಕ್ಷದ ನಾಯಕರ ಸೇರುವ ಬಗ್ಗೆ ವರಿಷ್ಠರು ನಿರ್ಧರಿಸುತ್ತಾರೆ ಎಂದು ತಿಳಿಸಿದರು.

Related posts

ಪಟಾಕಿ ದುರಂತ: ಬೆಂಕಿಯ ಕಿಡಿ ತಗುಲಿ ಪಟಾಕಿ ಸಿಡಿದು ಯುವಕ ಸಾವು.

ಅಂತೂ ಮದ್ಯಪ್ರಿಯರಿಗೊಂದು ಗುಡ್ ನ್ಯೂಸ್: ಏನು ಗೊತ್ತೆ..?

ಅಪೌಷ್ಠಿಕತೆ: ಭಾರತ, ಗುಜರಾತ್ ಸೂಚ್ಯಂಕ ಏರಿಕೆ: ಏಕೆ ಹೀಗಾಯ್ತು ವಿಶ್ವಗುರು ಉತ್ತರಿಸಬೇಕು-ಕುಟುಕಿದ ಸಿಎಂ ಸಿದ್ದರಾಮಯ್ಯ