ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯಶಿವಮೊಗ್ಗ

ವಿಪಕ್ಷಗಳು ಸರ್ಕಾರ ಬೀಳಿಸುವ ಚಿಂತನೆ ಬಿಟ್ಟು ಆಡಳಿತ ಪಕ್ಷದೊಂದಿಗೆ ಸಹಕರಿಸಲಿ- ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ: ಬರಗಾಲದಂತಹ ಸಂಕಷ್ಟದ ಸಂದರ್ಭದಲ್ಲಿ ವಿಪಕ್ಷಗಳು ಸರ್ಕಾರ ಬೀಳಿಸುವ ಚಿಂತನೆ ಬಿಟ್ಟು ಆಡಳಿತ ಪಕ್ಷದೊಂದಿಗೆ ಸಹಕರಿಸಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಬರಗಾಲ ಕಾಲಿಟ್ಟಿದೆ. ವಿರೋಧ ಪಕ್ಷಗಳು ಬರಗಾಲ ನಿರ್ವಹಣೆಗೆ ಸಂಬಂಧಿಸಿದಂತೆ ಸಲಹೆ ನೀಡುವುದನ್ನು ಬಿಟ್ಟು ಹತಾಶರಾಗಿ ಪದೇ ಪದೇ ಸರ್ಕಾರ ಬೀಳುತ್ತದೆ. ಬೀಳಿಸುತ್ತೇವೆ ಎಂದು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಸುಮಾರು 17 ಸಾವಿರ ಕೋಟಿ ರೂ ಮೊತ್ತದ ನಷ್ಟಕ್ಕೆ ಕೇಂದ್ರದಿಂದ ಪರಿಹಾರ ಕೇಳಿದ್ದೇವೆ. ಕೇಂದ್ರ ಈ ಬಗ್ಗೆ ನಿರ್ಲಕ್ಷ್ಯ ತಾಳಿದೆ. ರಾಜ್ಯದ ಬಿಜೆಪಿ ನಾಯಕರು ಕೇಂದ್ರಕ್ಕೆ ಹೋಗಿ ಪರಿಹಾರ ತರಲಿ, ಅದನ್ನು ಬಿಟ್ಟು ರಾಜ್ಯ ಸರ್ಕಾರವನ್ನು ಟೀಕಿಸುತ್ತಿದ್ದಾರೆ ಎಂದು ಅಸಮಾಧನ ವ್ಯಕ್ತಪಡಿಸಿದರು.
ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರು ಅಡಿಕೆಯನ್ನೇ ರೈತರು ಬೆಳೆಯುವುದು ಬೇಡ ಎಂದಿದ್ದರು. ಈಗ ಅಡಿಕೆ ಬೆಳೆಗಾರರ ಪರವಾಗಿ ಮಾತನಾಡುತ್ತಿದ್ದಾರೆ. ಎಲ್ಲಿ ಹೋಯಿತು 500 ಕೋಟಿ ರೂ. ವೆಚ್ಚದ ಅಡಿಕೆ ಸಂಶೋಧನಾ ಕೇಂದ್ರ. ಕೇಂದ್ರ ಸಚಿವ ಅಮಿತ್ ಅವರೂ ಭರವಸೆ ನೀಡಿದ್ದರು. ಅವರು ಈಗ ಉತ್ತರ ಹೇಳಬೇಕಲ್ಲವೇ ಎಂದು ಪ್ರಶ್ನೆ ಮಾಡಿದರು.
ಬಿಜೆಪಿಯವರು ಕೆಟ್ಟ ಸ್ವಭಾವದಲ್ಲಿಯೇ ಇದ್ದಾರೆ. ಅವರು ಎಂದೂ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲೇ ಇಲ್ಲ. ಹಿಂಬಾಗಿಲ ಮೂಲಕ ಅಧಿಕಾರ ಹಿಡಿದವರು. ಕಾಟಾಚಾರಕ್ಕೆ ಸಮೀಕ್ಷೆ ಮಾಡಿದರು. ಈ ಸಮೀಕ್ಷೆಯನ್ನು ಏನು ಮಾಡಿದ್ದಾರೆ. ಅದನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ ಪರಿಹಾರ ತಂದು ಕೊಡಲಿ ಎಂದು ಸವಾಲು ಹಾಕಿದರು.
ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಸಿಬಿಐಗೆ ನೀಡಿದ್ದು ಸಚಿವ ಸಂಪುಟವೇ. ಈಗ ವಾಪಸ್ ಪಡೆದಿರುವುದೂ ಸಂಪುಟ ಸಭೆಯ ನಿರ್ಧಾರವೇ. ಅದರಲ್ಲೇನಿದೆ ವ್ಯತ್ಯಾಸ? ಬಿಜೆಪಿ ಮುಖಂಡರ ಕೇಸನ್ನೂ ಸಿಬಿಐನಿಂದ ವಾಪಸ್ ಪಡೆಯಬೇಕೆಂದರೆ ಹೇಳಲಿ ಎಂದು ವ್ಯಂಗ್ಯವಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಪಕ್ಷದ ಮುಖಂಡರುಗಳಾದ ಆಯನೂರು ಮಂಜುನಾಥ್, ಆರ್ ಪ್ರಸನ್ನಕುಮಾರ್, ಹೆಚ್ ಸಿ ಯೋಗೇಶ್, ಚಂದ್ರ ಭೂಪಾಲ್, ಕಲಗೋಡ್ ರತ್ನಾಕರ್, ಎಸ್ ಕೆ ಮರಿಯಪ್ಪ, ರಮೇಶ್ ಇಕ್ಕೇರಿ, ರಮೇಶ್ ಶೆಟ್ಟಿ ಶಂಕರಘಟ್ಟ, ಕಾಶಿ ವಿದ್ಯಾನಗರ, ಜಿ ಡಿ ಮಂಜುನಾಥ್, ಕರೀಂ ಪಾಷಾ, ದೇವಿಕುಮಾರ್, ಪ್ರಭಾಕರ್, ಧೀರರಾಜ್ ಹೊನ್ನವಿಲೆ,   ಮುಹೀಬ್ ಮುಂತಾದವರು ಇದ್ದರು.

Related posts

ಆಗಸ್ಟ್ ಅಂತ್ಯದಲ್ಲಿ ಗೃಹಲಕ್ಷ್ಮೀ, ಡಿಸೆಂಬರ್ ನಂತರ ಯುವ ನಿಧಿ ಯೋಜನೆ ಜಾರಿ..

ಸಿಎಂ  ನಿವಾಸದಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್: ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿ 15 ಸಚಿವರು ಭಾಗಿ.

ಇಂದಿನಿಂದ ಏಕದಿನ ವಿಶ್ವಕಪ್ ಸಮರ: ಇಂದು ಅಂಗ್ಲೋ-ಕಿವಿಸ್ ಕದನ.