ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಸಂಚಾರ ನಿಯಮಗಳ ಬಗ್ಗೆ ಜಾಗೃತಿ; ಪೊಲೀಸರಿಂದ ಬೈಕ್ ಜಾಥಾ..

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಪೆÇಲೀಸ್ ಇಲಾಖೆ, ಮತ್ತು ಬುಲ್ಸ್ ಆಫ್ ಶಿವಮೊಗ್ಗ, ಬೈಕರ್ಸ್ ಆಫ್ ಶಿವಮೊಗ್ಗ, ರಾಯಲ್ ರೋಲಿಂಗ್ ಮಾಂಕ್ಸ್ ಶಿವಮೊಗ್ಗ, ರೋಡ್ ಥ್ರಿಲ್ಲರ್ಸ್ ಶಿವಮೊಗ್ಗ, ಮಲ್ನಾಡ್ ಟಸ್ಕರ್ಸ್ ಶಿವಮೊಗ್ಗ, ಕೆಟಿಎಂ ಶಿವಮೊಗ್ಗ ಮತ್ತು ಇತರೆ ಕ್ಲಬ್ ಗಳ ಸಹಯೋಗದೊಂದಿಗೆ ಸಾರ್ವಜನಿಕರಲ್ಲಿ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಇಂದು ಬೈಕ್ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಎಸ್‍ಪಿ ಮಿಥುನ್ ಕುಮಾರ್ ಜಿ.ಕೆ. ಬೈಕ್ ಜಾಥಾದಲ್ಲಿ ಪಾಲ್ಗೊಂಡು, ಜಾಥಾಕ್ಕೆ ಚಾಲನೆ ನೀಡಿದರು.
ಬೈಕ್ ಜಾಥಾವು ನಗರದ ಡಿಎಆರ್ ಪೆÇಲೀಸ್ ಮೈದಾನದಿಂದ ಆರಂಭವಾಗಿ ಐಬಿ ವೃತ್ತದ ಮೂಲಕ ಆಲ್ಕೊಳ ವೃತ್ತ, ವಿನೋಬನಗರ ಚೌಕಿ, ಉμÁ ನಸಿರ್ಂಗ್ ಹೋಂ ವೃತ್ತ, ಮಹಾವೀರ ವೃತ್ತ, ಕರ್ನಾಟಕ ಸಂಘ, ಹೊಳೆ ಬಸ್ ಸ್ಟಾಪ್, ಎಂ.ಆರ್.ಎಸ್ ವೃತ್ತ, ನ್ಯೂ ಮಂಡ್ಲಿ, ಗೋಪಾಳ, ಆಲ್ಕೊಳ ವೃತ್ತ, ಐಬಿ ವೃತ್ತ, ಕುವೆಂಪು ರಸ್ತೆ, ಜುಯಲ್ ರಾಕ್ ಹೋಟೆಲ್ ರಸ್ತೆ, ಗೋಪಿ ವೃತ್ತ, ಅಮೀರ್ ಅಹಮ್ಮದ್ ವೃತ್ತದಿಂದ ಅಶೋಕ ವೃತ್ತದ ಮೂಲಕ ಡಿಎಆರ್ ಮೈದಾನದಲ್ಲಿ ಮುಕ್ತಾಯ ಮಾಡಲಾಯಿತು.
ಅಧೀಕ್ಷಕರಾದ ಅನಿಲ್‍ಕುಮಾರ್ ಭೂಮರೆಡ್ಡಿ, ಬಾಲರಾಜ್, ಪ್ರಭು ಡಿ.ಟಿ, ಸುರೇಶ್ ಎಂ., ಪ್ರಶಾಂತ್, ಸಂತೋμïಕುಮಾರ್, ಬೈಕ್ ಕ್ಲಬ್‍ಗಳ ಬೈಕ್ ಸವಾರರು, ಪೆÇಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು

Related posts

ಜಿ.ಪಂ ವ್ಯಾಪ್ತಿಗೆ ಪದವಿಪೂರ್ವ ಶಿಕ್ಷಣ ಇಲಾಖೆ ಸೇರ್ಪಡೆ ಅವೈಜ್ಞಾನಿಕ:  ಕೂಡಲೇ ನಿರ್ಧಾರ ಕೈ ಬಿಡಿ- ಮರಿತಿಬ್ಬೇಗೌಡ ಆಗ್ರಹ.

ಡಿಕೆ ಶಿವಕುಮಾರ್ ವಿರುದ್ದ ಸಿಬಿಐ ತನಿಖೆ ವಾಪಸ್: ಸರ್ಕಾರ ಕ್ರಮ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಬಿಜೆಪಿ ಶಾಸಕ ಯತ್ನಾಳ್.

ಕೆ.ಎ. ದಯಾನಂದ್ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ವಾಚನಾಲಯ ಕಟ್ಟಡ ಲೋಕಾರ್ಪಣೆ