ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳು

ಟ್ವಿಟರ್’ ಬಳಕೆದಾರರಿಗೆ ಬಿಗ್ ಶಾಕ್: ಮಾಸಿಕ ಶುಲ್ಕ ವಿಧಿಸುವ ಬಗ್ಗೆ ಚಿಂತನೆ.

ನವದೆಹಲಿ: ಟ್ವಿಟ್ಟರ್ ಬಳಕೆದಾರರಿಗೆ ಎಲಾನ್ ಮಸ್ಕ್ ಬಿಗ್ ಶಾಕ್ ನೀಡಿದ್ದು, ಬಳಕೆದಾರರಿಗೆ ಮಾಸಿಕ ಶುಲ್ಕ ವಿಧಿಸಲು ಚಿಂತನೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ವಿಶ್ವದಾದ್ಯಂತ ಟ್ವಿಟ್ಟರ್ ಬಳಕೆದಾರರ ಸಂಖ್ಯೆ ಹೆಚ್ಚಿದ್ದು ಟ್ವಿಟ್ಟರ್ ಲೋಗೊವನ್ನ ಇತ್ತೀಚೆಗೆ ಎಲನ್ ಮಸ್ಕ್ ಬದಲಾವಣೆ ಮಾಡಿದ್ದರು. ಇದೀಗ ಎಲೋನ್ ಮಸ್ಕ್ ಟ್ವಿಟರ್ ನಲ್ಲಿ ಕೆಲವು ದೊಡ್ಡ ಬದಲಾವಣೆಗಳನ್ನು ಮಾಡುವ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿ ಮಾಸಿಕ ಶುಲ್ಕ ವಿಧಿಸುವ ಬಗ್ಗೆ ಕೂಡ ಮಾತನಾಡಿದ್ದಾರೆ.ಆದರೆ ಎಷ್ಟು ಶುಲ್ಕ ವಿಧಿಸಲಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ನೀಡಿಲ್ಲ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗಿನ ಸಂಭಾಷಣೆಯ ಸಮಯದಲ್ಲಿ, ಮಸ್ಕ್ ಎಕ್ಸ್ ಬಗ್ಗೆ ಕೆಲವು ಮಾಹಿತಿ ಬಹಿರಂಗಪಡಿಸಿದರು. ಎಕ್ಸ್ ಈಗ 550 ಮಿಲಿಯನ್ ಬಳಕೆದಾರರನ್ನು ಹೊಂದಿದೆ, ಅವರು ಪ್ರತಿ ತಿಂಗಳು ಪ್ಲಾಟ್ ಫಾರ್ಮ್ ಅನ್ನು ಬಳಸುತ್ತಾರೆ ಮತ್ತು ಪ್ರತಿದಿನ 100 ರಿಂದ 200 ಮಿಲಿಯನ್ ಪೋಸ್ಟ್ ಗಳನ್ನು ರಚಿಸುತ್ತಾರೆ ಎಂದು ಅವರು ಹೇಳಿದ್ದಾರೆ.

ಉಚಿತ ಮತ್ತು ಪಾವತಿಸಿದ ಶ್ರೇಣಿಗಳನ್ನು ನೀಡುವ ಎಕ್ಸ್ ನ ಪ್ರಸ್ತುತ ವ್ಯವಸ್ಥೆಯಡಿ ಕಾರ್ಯನಿರ್ವಹಿಸಲು ಬೋಟ್ ಒಂದು ಪೈಸೆಯ ಒಂದು ಭಾಗವನ್ನು ವೆಚ್ಚ ಮಾಡುತ್ತದೆ ಎಂದು ಅವರು ಹೇಳಿದರು. ಆದ್ದರಿಂದ ಮಾಸಿಕ ಪಾವತಿ ವ್ಯವಸ್ಥೆಗೆ ಬದಲಾಗಲು ಇದು “ಏಕೈಕ ಪ್ರಮುಖ ಕಾರಣ” ಎಂದು ಹೇಳಿದ್ದಾರೆ ಎನ್ನಲಾಗಿದೆ.

 

Related posts

ಕನ್ನಡವನ್ನು ತಳಮಟ್ಟದಲ್ಲಿ ಉಳಿಸಿ ಬೆಳೆಸುವಲ್ಲಿ ಕಾರ್ಮಿಕರ ಪಾತ್ರ ಬಹುದೊಡ್ಡದು -ನಾಡೋಜ ಡಾ. ಮಹೇಶ ಜೋಶಿ

ರಾಜಕಾರಣ ಎಂಬ ಆಗಸದಲ್ಲಿ ದಿ. ಬಂಗಾರಪ್ಪ ಮರೆಯಲಾಗದ ಧ್ರುವತಾರೆ-ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಬಣ್ಣನೆ

ಹಲವು ತಿಂಗಳುಗಳಿಂದ ಕೊಡಗಿನ ಅಂಗನವಾಡಿಗಳಿಗಿಲ್ಲ ಮೊಟ್ಟೆ ಪೂರೈಕೆ

TOD News