ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ದೇಶ ಕಂಡ ಅತ್ಯುತ್ತಮ ನ್ಯಾಯಧೀಶರು ಡಾ.ಶಿವರಾಜ್ ಪಾಟೀಲ್- ಭಾರತ ರತ್ನ ಡಾ.ಸಿ.ಎನ್.ಆರ್.ರಾವ್ ಬಣ್ಣನೆ

ಬೆಂಗಳೂರು:  ಡಾ.ಶಿವರಾಜ ಪಾಟೀಲರು ದೇಶಕಂಡ ಅತ್ಯುತ್ತಮ ನ್ಯಾಯಾಧೀಶರಲ್ಲಿ ಒಬ್ಬರಾಗಿದ್ದು ಅವರಿಗೆ ಪ್ರಶಸ್ತಿ ಸಲ್ಲುತ್ತಿರುವುದು ಸೂಕ್ತವಾಗಿದೆ ಎಂದು ಹೇಳಿ ತಮ್ಮ ಆತ್ಮಕತೆ ‘ಲೈಫ್ ಇಸ್ ಎ ಸೈನ್ಸ್’ ಕೃತಿಯನ್ನು ಡಾ.ಶಿವರಾಜ ಪಾಟೀಲರೇ ಬಿಡುಗಡೆ ಮಾಡಿದ್ದರು  ಎಂದು ಜಗತ್ತು ಕಂಡ ಶ್ರೇಷ್ಠ ವಿಜ್ಞಾನಿ ಭಾರತ ರತ್ನ ಡಾ.ಸಿ.ಎನ್.ಆರ್.ರಾವ್ ವರ್ಣಿಸಿದರು.

ಅವರು  ಇಂದು ಜಕ್ಕೂರಿನ ಜವಹರಲಾಲ್ ನೆಹರೂ ಉನ್ನತ ವಿಜ್ಞಾನ ಸಂಶೋಧನಾ ಕೇಂದ್ರದ ‘ನೆವಿಲ್ ಮೊಟ್ ಹಾಲಿ’ನಲ್ಲಿ ನಡೆದ  ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಟಿತ ಕೆಂಗಲ್ ಹನುಮಂತಯ್ಯ ಸಂಸ್ಕೃತಿ ದತ್ತಿ ಪ್ರಶಸ್ತಿಯನ್ನು ನ್ಯಾಯಮೂರ್ತಿ ಡಾ.ಶಿವರಾಜ್ ಪಾಟೀಲರಿಗೆ  ಪ್ರದಾನ ಮಾಡಿ ಮಾತನಾಡುತ್ತಿದ್ದರು. ನಾಲ್ವಡಿಯವರು ಸ್ಥಾಪಿಸಿ ಸರ್.ಎಂ.ವಿಯವರು ಬೆಂಬಲವಾಗಿ ನಿಂತ ಬಿ.ಎಂ.ಶ್ರೀಕಂಠಯ್ಯನವರಂತಹ ಕನ್ನಡದ ಕಟ್ಟಾಳುಗಳು ಕಟ್ಟಿದ 108 ವರ್ಷಗಳ ಇತಿಹಾಸವುಳ್ಳ  ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಸಾಂಸ್ಕೃತಿಕ ಪ್ರತಿನಿಧಿಯಾಗಿದ್ದು. ಈ ಸಂಸ್ಥೆಯು ನೀಡಿವ ಪುರಸ್ಕಾರಗಳಿಗೆ ವಿಶೇಷ ಮಹತ್ವವಿದೆ ಕನ್ನಡ ಸಾಹಿತ್ಯ ಪರಿಷತ್ತಿನ ಕ್ರಿಯಾಶೀಲ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಪರಿಷತ್ತಿಗೆ ಹೊಸತವನ್ನು ತಂದಿದ್ದು ಪ್ರಶಸ್ತಿಗಳ ಗೌರವವನ್ನು ಹೆಚ್ಚಿಸಿದ್ದಾರೆ ಎಂದು ಮುಕ್ತ ಕಂಠದಿಂದ ಪ್ರಶಂಸಿಸಿ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಆಶೋತ್ತರಗಳನ್ನು ಈಡೇರಿಸುವ ಸಾರ್ಥಕ ಕೆಲಸಗಳನ್ನು ಮಾಡಲಿ ಎಂದು ಹಾರೈಸಿದರು.

ಆಶಯ ಭಾಷಣವನ್ನು ಮಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಸಾಂಸ್ಕೃತಿಕ ಪ್ರತಿನಿಧಿಯಾಗಿದ್ದು ಸಂಸ್ಕೃತಿಯ ಮೂಲಕ ಜಗತ್ತನ್ನೇ ಗೆಲ್ಲ ಬಹುದು ಎಂದು ಮಾದರಿಯಾಗಿ ತೋರಿಸಿ ಕೊಟ್ಟಿದೆ. ಈ ಸಂಸ್ಥೆಯ ಮಹತ್ವವನ್ನು ಗುರುತಿಸಿಯೇ  2100ಕ್ಕೂ ಹೆಚ್ಚು ದತ್ತಿ ಪ್ರಶಸ್ತಿಗಳು ಇಲ್ಲಿ ಸ್ಥಾಪನೆಗೊಂಡಿದ್ದು ಅದರಲ್ಲಿ  ಕೆಲವು ಪ್ರಶಸ್ತಿಗಳು  ಮೌಲ್ಯಯುತವಾಗಿವೆ. ಕೆಂಗಲ್ ಹನುಮಂತಯ್ಯ ಸಂಸ್ಕೃತಿ ದತ್ತಿ ಪ್ರಶಸ್ತಿ ಅದರಲ್ಲಿ ಮುಖ್ಯವಾದದ್ದು, ನ್ಯಾಯಮೂರ್ತಿಗಳಾಗಿ ವಸ್ತು ನಿಷ್ಟ ತೀರ್ಪನ್ನು ನೀಡುವ ಮೂಲಕ ವೃತ್ತಿಗೆ ಘನತೆ ಗೌರವಗಳನ್ನು ತಂದು  ನೈತಿಕ ವಿಶಾಲ ತಳಹದಿಯ ಮೇಲೆ ಮೌಲ್ಯಾಧರಿತ ಸಮಾಜವನ್ನು ಕಟ್ಟುವಲ್ಲಿ ಅವಿಶ್ರಾಂತವಾಗಿ ಶ್ರಮಿಸುತ್ತಿರುವ ನ್ಯಾಯಮೂರ್ತಿ ಡಾ.ಶಿವರಾಜ ಪಾಟೀಲರ ಸೇವೆಯನ್ನು ಪರಿಗಣಿಸಿ ಕನ್ನಡ ಸಾಹಿತ್ಯ ಪರಿಷತ್ತು 2021ನೆಯ ಸಾಲಿನ ಶ್ರೀ ಕೆಂಗಲ್ ಹನುಮಂತಯ್ಯ ದತ್ತಿ ಪ್ರಶಸ್ತಿ ನೀಡಿ ಗೌರವಿಸುತ್ತಿದೆ ಪ್ರಶಸ್ತಿ ಪ್ರದಾನ ಮಾಡುತ್ತಿರುವವರು ಮತ್ತು ಸ್ವೀಕರಿಸುತ್ತಿರುವವರ ನಡುವೆ ಅನೇಕ ಸಮಾನ ಗುಣಗಳಿವೆ. ಇಬ್ಬರೂ ಶ್ರೇಷ್ಠ ಮಾನವರು, ಕನ್ನಡ ಮಾಧ್ಯಮದಲ್ಲಿ ಓದಿ ಉನ್ನತ ಸ್ಥಾನಕ್ಕೇರಿ  ಮಾತೃಭಾಷೆಯ ಹಿರಿಮೆಯನ್ನು ಎತ್ತಿ ಹಿಡಿದವರು ಎಂದು ಹೇಳಿ ಇಬ್ಬರ ಜೀವನದ ಸಮಾನ ಮಹತ್ವದ ಘಟನೆಗಳನ್ನು ಸ್ಮರಿಸಿ ಕೊಂಡರು. ಡಾ.ಸಿ.ಎನ್.ಆರ್.ರಾವ್ ಅವರಿಗೆ ‘ಭಾರತ ರತ್ನ’ ಪುರಸ್ಕಾರ ನೀಡಲ್ಪಟ್ಟಾಗ ನ್ಯಾಯಮೂರ್ತಿಗಳಾಗಿ ವಸ್ತು ನಿಷ್ಟ ತೀರ್ಪನ್ನು ನೀಡುವ ಮೂಲಕ ವೃತ್ತಿಗೆ ಘನತೆ ಗೌರವಗಳನ್ನು ತಂದರು. ನೈತಿಕ ವಿಶಾಲ ತಳಹದಿಯ ಮೇಲೆ ಮೌಲ್ಯಾಧರಿತ ಸಮಾಜವನ್ನು ಕಟ್ಟುವಲ್ಲಿ ಅವಿಶ್ರಾಂತವಾಗಿ ಶ್ರಮಿಸುತ್ತಿರುವ ನ್ಯಾಯಮೂರ್ತಿ ಡಾ.ಶಿವರಾಜ ಪಾಟೀಲರ ಸೇವೆಯನ್ನು ಪರಿಗಣಿಸಿ ಕನ್ನಡ ಸಾಹಿತ್ಯ ಪರಿಷತ್ತು 2021ನೆಯ ಸಾಲಿನ ಶ್ರೀ ಕೆಂಗಲ್ ಹನುಮಂತಯ್ಯ ದತ್ತಿ ಪ್ರಶಸ್ತಿ ನೀಡಿ ಗೌರವಿಸುತ್ತಿದೆದರ ಪ್ರಸಾರದ ಹೊಣೆ ತಮ್ಮದಾಗಿತ್ತು ಎನ್ನುವುದನ್ನು ಸ್ಮರಿಸಿ ಕೊಂಡ ನಾಡೋಜ ಡಾ.ಮಹೇಶ ಜೋಶಿಯವರು ಜಾಗತೀಕರಣ, ಉದಾರೀಕರಣ, ಖಾಸಗಿಕರಣ ಎಲ್ಲವೂ ಅಂತಿಮವಾಗಿ ಮಾನವೀಕರಣದಲ್ಲಿ ಮುಕ್ತಾಯವಾದರೆ ಮಾತ್ರ ಸಾರ್ಥಕವಾಗುತ್ತದೆ ಎನ್ನುವ ಡಾ.ಶಿವರಾಜ ಪಾಟೀಲರ ಮಾತುಗಳನ್ನು ನೆನಪು ಮಾಡಿಕೊಂಡು ಸಂಸ್ಕೃತಿ ಸದಾ ಹರಿಯುವ ನದಿಯ ಹಾಗೆ ಅದರ ಹರಿವಿನ ಶುಭ್ರತೆಯನ್ನು ಕಾಪಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು. ಯಾವುದೇ ಅರ್ಜಿ-ಮರ್ಜಿ-ಶಿಫಾರಸ್ಸಿಗೆ ಅವಕಾಶವಿಲ್ಲದಂತೆ ಪಾರದರ್ಶಕವಾಗಿ  ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪ್ರಶಸ್ತಿಗಳ ಆಯ್ಕೆ ಮಾಡಲಾಗುವುದು ಎಂದು  ನಾಡೋಜ ಡಾ.ಮಹೇಶ ಜೋಶಿಯವರು ಇದೇ ಸಂದರ್ಭದಲ್ಲಿ  ತಿಳಿಸಿದರು.

ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ನ್ಯಾಯಮೂರ್ತಿ ಡಾ.ಶಿವರಾಜ ಪಾಟೀಲರು ಅತ್ಯಂತ ವಿನಯದಿಂದ ಈ ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದೇನೆ, ಕನ್ನಡಿಗರೆಲ್ಲರ ಹೆಮ್ಮೆಯ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು ನೀಡುತ್ತಿರುವ ಈ ಪ್ರಶಸ್ತಿಯನ್ನು ಒಬ್ಬರು ತಮ್ಮ ಜೀವಿತಕಾಲದಲ್ಲಿ ಇಷ್ಟೊಂದು ಕಾರ್ಯವನ್ನು ಸಾಧಿಸ ಬಲ್ಲರೆ ಎಂದು ಅಚ್ಚರಿ ಪಡುವಷ್ಟು ಎತ್ತರವನ್ನು ತಲುಪಿರುವ ಭಾರತ ರತ್ನ ಡಾ.ಸಿ.ಎನ್.ಆರ್.ರಾವ್ ಅವರಿಂದ ಇಷ್ಟೊಂದು ಜನ ಗಣ್ಯರಿರುವ ಸಭೆಯಲ್ಲಿ ಸ್ವೀಕರಿಸುತ್ತಿರುವುದು ಸಾರ್ಥಕತೆಯ ಭಾವವನ್ನು ತಂದಿದೆ. ಈ ಪ್ರಶಸ್ತಿಯು ಕನ್ನಡದ ಕಟ್ಟಾಳು ಕೆಂಗಲ್ ಹನುಮಂತಯ್ಯನವರ ಹೆಸರಿನಲ್ಲಿದೆ. ಜವಾಹರ ಲಾಲ್ ನೆಹರು ಅವರ ಎದುರು ಎಲ್ಲರೂ ನಿಂತು ಮಾತಾಡಲು ಹೆದರುತ್ತಿದ್ದ ಕಾಲದಲ್ಲಿ ಅವರ ಎದುರು ಗಟ್ಟಿ ಧ್ವನಿಯಲ್ಲಿ ಕನ್ನಡಿಗರ ಬೇಡಿಕೆಗಳನ್ನು ಮಂಡಿಸುತ್ತಿದ್ದ ಕೆಂಗಲ್ ಅವರು ಕನ್ನಡಿಗರ ಹೆಮ್ಮೆಯಾದ ವಿಧಾನ ಸೌಧವನ್ನು ಕಟ್ಟಿದರು. ರೈಲ್ವ ಸಚಿವರಾಗಿ ರೈಲುಗಳು ಸಮಯಕ್ಕೆ ಸರಿಯಾಗಿ ಬರುವಂತೆ ಮಾಡಿದವರು. ಅವರ ಹೆಸರಿನಲ್ಲಿರುವ ಪ್ರಶಸ್ತಿಗೆ ಸಹಜವಾಗಿಯೇ ಮಹತ್ವವಿದೆ. ಪ್ರಶಸ್ತಿಗಳಿಗೆ ಪರಿಶ್ರಮ ಪಡುವಂತಾಗಬಾರದು ಅವು ಸಹಜವಾಗಿಯೇ ಬರಬೇಕು, ಹೀಗೆ ಬಂದ ಪ್ರಶಸ್ತಿಗೆ ಘನತೆ ಇರುತ್ತದೆ. ಇಂತಹ ಮಹತ್ವದ ಪ್ರಶಸ್ತಿಯನ್ನು ವಿನಯದಿಂದ ಸ್ವೀಕರಿಸಿದ್ದೇನೆ ಎಂದು ಹೇಳಿ ಸಾಧನೆ ಮಾತಾಡ ಬೇಕೆ ಹೊರತು ಮಾತಾಡುವುದೇ ಸಾಧನೆಯಾಗ ಬಾರದು ಎಂದು ಕಿವಿ ಮಾತನ್ನು  ಹೇಳಿದರು

ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಪಟೇಲ್ ಪಾಂಡು ಅವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರೆ ಗೌರವ ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜು ಸ್ವಾಗತ ಕೋರಿದರು. ಇನ್ನೊಬ್ಬ ಗೌರವ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗ ಶೆ್ಟ್ಟಿ ವಂದನಾರ್ಪಣೆ ಮಾಡಿದರು. ನಾಡೋಜ ಡಾ.ಹಂಪ ನಾಗರಾಜಯ್ಯ, ಡಾ.ದೊಡ್ಡರಂಗೇಗೌಡ ಸೇರಿದಂತೆ ಅನೇಕ ಬರಹಗಾರರು, ಹಾಲಿ ಮತ್ತು ನಿವೃತ್ತ ನ್ಯಾಯಮೂರ್ತಿಗಳು, ಆಡಳಿತಗಾರರು ಸೇರಿ ಅನೇಕ ಪ್ರಮುಖರು ಕಾರ್ಯಕ್ರಮದಲ್ಲಿ ಹಾಜರಿದ್ದು ಶೋಭೆಯನ್ನು ತಂದರು.

Related posts

ರಾಹುಲ್ ಗಾಂಧಿ ಕುರಿತ ಬಿಜೆಪಿ ಪೋಸ್ಟರ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಕಾಂಗ್ರೆಸ್ ನಾಯಕ!

ಅನುಕಂಪ’ದ ಉದ್ಯೋಗಕ್ಕೆ ವಿವಾಹಿತ ಪುತ್ರಿ ಅರ್ಹಳಲ್ಲ- ಹೈಕೋರ್ಟ್ ತೀರ್ಪು.

ಕಟೀಲ್ : ವಿಶ್ವ ಬಂಟರ ಸಾಂಸ್ಕೃತಿಕ ವೈಭವದ ಕರಪತ್ರ ಬಿಡುಗಡೆ: ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಸಮಾಜಮುಖಿ ಕೆಲಸ: ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣ…..