ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ಬೆಂಗಳೂರು ಜಿಲ್ಲೆ  ಮರುನಾಮಕರಣ ಮಾಡ್ತೇವೆ:  ಇನ್ಮುಂದೆ ರಾಮನಗರ ಜಿಲ್ಲೆ ಇರಲ್ಲ – ಡಿಸಿಎಂ ಡಿ.ಕೆ ಶಿವಕುಮಾರ್

ರಾಮನಗರ : ಇನ್ಮುಂದೆ ರಾಮನಗರ ಜಿಲ್ಲೆ ಇರುವುದಿಲ್ಲ. ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು ಮತ್ತೆ ಬೆಂಗಳೂರು ಜಿಲ್ಲೆಯಾಗಿ ಮರುನಾಮಕರಣ ಮಾಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

ಇಂದು ಈ ಕುರಿತು ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಇನ್ಮುಂದೆ ರಾಮನಗರ ಜಿಲ್ಲೆ ಇರುವುದಿಲ್ಲ ಯಾರೋ ಹೆಸರು ಮಾಡಿಕೊಳ್ಳಲು ರಾಮನಗರ ಜಿಲ್ಲೆ ರಚನೆ ಮಾಡಿದರು. ನಮ್ಮನ್ನು ರಾಮನಗರ  ಜಿಲ್ಲೆ ಅಂತಾ ಮೂಲೆಗೆ ತಳ್ಳಬೇಡಿ. ಕನಕಪುರದವರು ಬೆಂಗಳೂರು ಜಿಲ್ಲೆಯವರು ಎಂದು ಹೆಚ್.ಡಿ ಕುಮಾರಸ್ವಾಮಿಗೆ ಟಾಂಗ್ ನೀಡಿದರು.

ವಿಜಯದಶಮಿ ದಿನ ಹೇಳುತ್ತಿದ್ದೇನೆ, ಕನಕಪುರ ಬೆಂಗಳೂರು ಜಿಲ್ಲೆಗೆ ಸೇರುತ್ತೆ. ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು ಮತ್ತೆ ಬೆಂಗಳೂರು ಜಿಲ್ಲೆಯಾಗಿ ಮರುನಾಮಕರಣ ಮಾಡಲಾಗುತ್ತದೆ. ಯಾವ ರೈತರು ಭೂಮಿ ಮಾರಾಟ  ಮಾಡಬೇಡಿ. ಒಂದೊಂದು ಅಡಿ ಲೆಕ್ಕದಲ್ಲಿ ಭೂಮಿ ಬೆಲೆ ಹೆಚ್ಚಳವಾಗುತ್ತದೆ. ಇಲ್ಲಿನ ಭೂಮಿ ಅಡಿ ಲೆಕ್ಕದಲ್ಲಿ ವ್ಯವಹಾರ ಆಗಲಿದೆ, ಭೂಮಿ ಮಾರಬೇಡಿ ಎಂದು ಡಿ.ಕೆ ಶಿವಕುಮಾರ್ ಹೇಳಿದರು.

Related posts

ಮೈಸೂರಿನಲ್ಲಿ ಈ ವರ್ಷ 1800ಕ್ಕೂ ಹೆಚ್ಚು ಗರ್ಭಪಾತ, ಕಾರಣ ಕೇಳಿ ನೋಟಿಸ್

TOD News

ಉದ್ಯಮಿ ಅದಾನಿ, ಅಂಬಾನಿ ಸಾಲಮನ್ನಾ ಮಾಡಿದ್ರೆ ದೇಶ ದಿವಾಳಿ ಆಗಲ್ವಾ? ಚಾಟಿ ಬೀಸಿದ ಸಚಿವ ಹೆಚ್.ಸಿ ಮಹದೇವಪ್ಪ. 

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ: KAT ಮೊರೆ ಹೋದ ಶಿಕ್ಷಕ ಅಭ್ಯರ್ಥಿಗಳು