ಕನ್ನಡಿಗರ ಪ್ರಜಾನುಡಿ
ಕ್ರೈಮ್ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಎಲ್ಲೆಂದರಲ್ಲಿ ಅಪರಿಚಿತರಿಗೆ ‘ಆಧಾರ್, ಪ್ಯಾನ್ ಕಾರ್ಡ್’ ಕೊಡುವ ಮುನ್ನ ಇರಲಿ ಎಚ್ಚರ.!

ಬೆಂಗಳೂರು:  ವಿಜ್ಞಾನ ತಂತ್ರಜ್ಞಾನ ಬೆಳೆದಂತೆ ಅನುಕೂಲದ ಜೊತೆಗೆ ಅನಾನುಕೂಲವೂ ಕೂಡ ಆಗುತ್ತಿದ್ದು ಸೈಬರ್ ವಂಚನೆಗಳು ಮಿತಿ ಮೀರಿದೆ. ಇದನ್ನ ದುರ್ಬಳಕೆ ಮಾಡಿಕೊಳ್ಳುವವರು ಹೆಚ್ಚುತ್ತಿದ್ದರೂ ಸೈಬರ್ ವಂಚನೆ, ನಕಲಿ ದಾಖಲೆ ಸೃಷ್ಠಿ, ದಾಖಲೆಗಳ ದುರ್ಬಳಕೆಗೆ ಕಡಿವಾಣ ಹಾಕಲು ಇನ್ನಿಲ್ಲದ ಪ್ರಯತ್ನ ನಡೆಯುತ್ತಿದೆ. ಅಂತೆಯೇ ಎಲ್ಲೆಂದರಲ್ಲಿ ಅಪರಿಚಿತರಿಗೆ  ನಿಮ್ಮ ನಿಮ್ಮ ‘ಆಧಾರ್, ಪ್ಯಾನ್ ಕಾರ್ಡ್’  ಕೊಡುವ ಮುನ್ನ ಎಚ್ಚರ ವಹಿಸಿ.. ಯಾಕೆ ಗೊತ್ತೆ ಈ ಸ್ಟೋರಿ ಓದಿ

ಸರ್ಕಾರದ ವಿವಿಧ ಸೇವಾ ಯೋಜನೆಗಳು, ಸೌಲಭ್ಯಗಳನ್ನು ಪಡೆಯಲು  ಆಧಾರ್, ಪ್ಯಾನ್ ಕಡ್ಡಾಯವಾಗಿದೆ. ಆದರೆ  ಇನ್ಮುಂದೆ ಹೀಗೆ ಆಧಾರ್, ಪ್ಯಾನ್ ಕಾರ್ಡ್ ಕೊಡ್ತಿದ್ದೀರಿ ಅಂದರೆ ಸ್ವಲ್ಪ ಎಚ್ಚರಿಕೆ ವಹಿಸಬೇಕಿದೆ.

ಅಮಾಯಕರ ಹೆಸರಿನಲ್ಲಿ ಬೇನಾಮಿ ಬ್ಯಾಂಕ್ ಖಾತೆಗಳನ್ನು ತೆರೆದು ಸೈಬರ್ ವಂಚನೆಗೆ ಬಳಸುತ್ತಿದ್ದ ಅಂತರರಾಜ್ಯ (ಕರ್ನಾಟಕ & ಕೇರಳ) ಜಾಲವನ್ನ ಬೆಂಗಳೂರಿನ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಪತ್ತೆ ಹಚ್ಚಿದ್ದು ಈ ಸಂಬಂಧ ಆರು ಜನರನ್ನ ಬಂಧಿಸಿದ್ದಾರೆ.

ಬೆಂಗಳೂರು ನಗರ, ಸೈಬರ್ ಕ್ರೈಂ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೈಬರ್ ವಂಚನೆಯ ಉದ್ದೇಶಕ್ಕಾಗಿ ಬೇನಾಮಿ ಖಾತೆಗಳನ್ನು ತೆರೆಯುತ್ತಿದ್ದ ಅಂತರರಾಜ ವಂಚಕರ ಜಾಲವನ್ನು ಭೇಧಿಸಿ 6 ಜನ ಆರೋಪಿಗಳನ್ನು ಬಂಧಿಸಿರುತ್ತಾರೆ. ಈ ವಂಚಕರ ತಂಡವು ಅಮಾಯಕ ಜನರನ್ನು ನಂಬಿಸಿ ಅವರಿಂದ ಗುರುತಿನ (KYC) ದಾಖಲಾತಿಗಳನ್ನು ಪಡೆದು ಅವರ ಹೆಸರಿನಲ್ಲಿ ಬೇರೆ ಬೇರೆ ಬಾಂಕ್ಗಳಲ್ಲಿ ಬೇನಾಮಿ ಖಾತೆಗಳನ್ನು ತೆರೆದು ಸದರಿ ಖಾತೆಗಳನ್ನು ಸೈಬರ್ ವಂಚಕರಿಗೆ ಒದಗಿಸುವ ದುಷ್ಕೃತ್ಯವನ್ನು ಎಸಗುತ್ತಿದ್ದರು. ಅಷ್ಟೇ ಅಲ್ಲದೆ ಆನ್ಲೈನ್ ಟ್ರೇಡಿಂಗ್ ಹೆಸರಿನಲ್ಲಿ ಅಮಾಯಕ ಜನರಿಗೆ ವಂಚಿಸಿ ಸಂಗ್ರಹಿಸಿದ ಹಣವನ್ನು ಈ ಬ್ಯಾಂಕ್ ಖಾತೆಗಳ ಮೂಲಕ ವರ್ಗಾವಣೆ ಮಾಡಿಕೊಂಡು ಅದನ್ನು ನಗದು ರೂಪಕ್ಕೆ ಪರಿವರ್ತಿಸಿ, ವಂಚಕರಿಗೆ ತಲುಪಿಸುತ್ತಿದ್ದರು.

ಈ ಪ್ರಕರಣದ ತನಿಖಾ ಕಾಲದಲ್ಲಿ ಆರೋಪಿಗಳು ಅಮಾಯಕರ ಹೆಸರಿನಲ್ಲಿ ಬೇನಾಮಿಯಾಗಿ ತೆರೆದಿದ 126 ಬ್ಯಾಂಕ್ ಖಾತೆಗಳು ಪತ್ತೆಯಾಗಿದ್ದು, ಸದರಿ ಬ್ಯಾಂಕ್ ಖಾತೆಗಳ ಮುಖಾಂತರ ಸೈಬರ್ ವಂಚನೆ ಆಗಿರುವ ಬಗ್ಗೆ ಬೆಂಗಳೂರು ನಗರ ಸೇರಿದಂತೆ, ಭಾರತದಾದ್ಯಂತ ಒಟ್ಟು 75 ಸೈಬರ್ ವಂಚನೆ ಪ್ರಕರಣಗಳು ತನಿಖೆಯಿಂದ ಬೆಳಕಿಗೆ ಬಂದಿರುತ್ತವೆ.

ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಉಪ ಪೊಲೀಸ್ ಆಯುಕ್ತರು, ಅಪರಾಧ ರವರ ಮಾರ್ಗದರ್ಶನದಂತೆ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

 

Related posts

ನ.26 ರಂದು ನಾರೀ ಶಕ್ತಿ ಸಂಗಮ.

ಈದ್ ಮಿಲಾದ್ ಮೆರವಣಿಗೆ  ವೇಳೆ ಗಲಾಟೆ ಪ್ರಕರಣ: 40ಕ್ಕೂ ಹೆಚ್ಚು ಜನರು ಪೊಲೀಸರ ವಶಕ್ಕೆ..

ಮೂಲಭೂತ ಸೌಕರ್ಯ ಹಾಗೂ ಅನುಮತಿ ವಿಸ್ತರಣೆ : ಹೆಚ್ಚುವರಿ ವಿಮಾನ ಕಾರ್ಯಾಚರಣೆಗಳ ಸಿದ್ಧತೆ-ಸಂಸದ ಬಿ.ವೈ. ರಾಘವೇಂದ್ರ